Home ನಮ್ಮ ಜಿಲ್ಲೆ ರಾಮನಗರ ಮುತ್ತತ್ತಿ ಕಾವೇರಿ ನದಿಯಲ್ಲಿ ತೆಪ್ಪ ಮುಳುಗಿ ವ್ಯಕ್ತಿ ಸಾವು

ಮುತ್ತತ್ತಿ ಕಾವೇರಿ ನದಿಯಲ್ಲಿ ತೆಪ್ಪ ಮುಳುಗಿ ವ್ಯಕ್ತಿ ಸಾವು

0
144

ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಕಾವೇರಿನದಿಯಲ್ಲಿ ಹೋಗುತ್ತಿದ್ದ ತೆಪ್ಪ ಮುಳುಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ ಘಟನೆ ಹಲಗೂರು ಪೊಲೀಸಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚನ್ನಪಟ್ಟಣ ತಾಲ್ಲೂಕು ಮೊಳೆದೊಡ್ಡಿ ಗ್ರಾಮದ ವಾಸಿ ಮಾದೇಶ್ (29). ಮೃತಪಟ್ಟ ದುರ್ದೈವಿ ಈತ ಹಲವು ದಿನಗಳಿಂದ ಮುತ್ತತ್ತಿಯಲ್ಲಿ ಪಾರ್ಕಿಂಗ್ ನೋಡಿಕೊಂಡು ಇರುತ್ತಿದ್ದ ಎಂದು ತಿಳಿದುಬಂದಿದೆ.

ಕಳೆದ 3 ದಿನಗಳ ಹಿಂದೆ ತೆಪ್ಪದಲ್ಲಿ ಮಾದೇಶ ಸೇರಿದಂತೆ ಮೂವರು ಹೋಗುವ ವೇಳೆ ತೆಪ್ಪ ಮುಳುಗಿದ ಪರಿಣಾಮ ನೀರಿನಲ್ಲಿ ಮುಳುಗಿದ್ದು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು ಮಾದೇಶನಿಗೆ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದು ಇಂದು ಶವ ಪತ್ತೆಯಾಗಿದೆ. ಶವವನ್ನು ಮಳವಳ್ಳಿ ಸಾರ್ವಜನಿಕ ಆಸ್ವತ್ರೆಯ ಶವಗಾರಕ್ಕೆ ಸಾಗಿಸಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.