Home Advertisement
Home ನಮ್ಮ ಜಿಲ್ಲೆ ರಾಮನಗರ ರಾಷ್ಟ್ರೀಯ ಪಕ್ಷಗಳು ಈಸ್ಟ್ ಇಂಡಿಯಾ ಕಂಪನಿಯಂತಾಗಿವೆ

ರಾಷ್ಟ್ರೀಯ ಪಕ್ಷಗಳು ಈಸ್ಟ್ ಇಂಡಿಯಾ ಕಂಪನಿಯಂತಾಗಿವೆ

0
170
ಕುಮಾರಸ್ವಾಮಿ

ರಾಮನಗರ: ರಾಷ್ಟ್ರೀಯ ಪಕ್ಷಗಳು ಒಂದು ರೀತಿಯ ಈಸ್ಟ್ ಇಂಡಿಯಾ ಕಂಪನಿಯಂತೆ ಲೂಟಿ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮೈಲನಾಯಕನಹೊಸಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಮಹಾರಾಜರ ಮತ್ತು ಮೊಘಲರ ಕಾಲದಲ್ಲಿ ಒಂದು ರೀತಿಯ ಗುಲಾಮಗಿರಿ ಇತ್ತು. ಬಳಿಕ ಈಸ್ಟ್ ಇಂಡಿಯಾ ಕಂಪನಿಐವರು ವ್ಯಾಪರಕ್ಕೆಂದು ಬಂದು ದೇಶವನ್ನೇ ಲೂಟಿ ಮಾಡಿದರು. ಅಲ್ಲದೇ ಅವರಿಗೆ ನಾವೇ ತೆರಿಗೆ ಕಟ್ಟಬೇಕಾಯಿತು. ಈಗ ರಾಷ್ಟ್ರೀಯ ಪಕ್ಷಗಳು ಒಂದು ರೀತಿಯ ಈಸ್ಟ್ ಇಂಡಿಯಾ ಕಂಪನಿಯಂತಾಗಿವೆ ಎಂದರು.