ರಾಯಚೂರು: ರಾಷ್ಟ್ರಧ್ವಜ ಮತ್ತು ಭಗವದ್ಗೀತೆಗೆ ಚಪ್ಪಲಿ ಕಾಲು ಇಟ್ಟ ಸ್ಟೇಟಸ್‌ನ್ನು ಇಟ್ಟು ಅಪಮಾನಗೊಳಿಸಿದ ಆರೋಪದಡಿ ಇಲ್ಲಿಯ ಎಲ್‌ಬಿಎಸ್ ನಗರದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ನಗರದ ಮಾರ್ಕೆಟ್ ಯಾರ್ಡ್ ಠಾಣೆ ವ್ಯಾಪ್ತಿಯ ಎಲ್‌ಬಿಎಸ್ ನಗರದ ನಿವಾಸಿಗಳಾದ ನವಾಜ್ ಮತ್ತು ಸೋಹೆಲ್ ಎಂಬುವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಎಲ್ಲಿಯದ್ದೋ ಚಿತ್ರವನ್ನು ವಾಟ್ಸಾಪ್ ಸ್ಟೇಟಸ್‌ಗೆ ಇಟ್ಟುಕೊಂಡಿದ್ದಾರೆ ಎಂದು ಕಾರ್ತಿಕ್ ರೆಡ್ಡಿ ಎಂಬುವರು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಆರೋಪಿಗಳು ಸ್ಟೇಟಸ್ ಇಟ್ಟಿರುವುದನ್ನು ನೋಡಿದ ವಿನಯ್ ಮತ್ತು ಆಂಜನೇಯ ಎಂಬುವವರು ತಮ್ಮ ಸ್ನೇಹಿತರ ಜೊತೆ ಚರ್ಚಿಸಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.






















