ಮಂತ್ರಾಲಯ ಶ್ರೀರಾಯರ ಹುಂಡಿಯಲ್ಲಿ ₹ 3.35 ಕೋಟಿ ಕಾಣಿಕೆ ಸಂಗ್ರಹ

0
69

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಕಳೆದ 22 ದಿನಗಳಿಂದ ಶ್ರೀರಾಯರ ಹುಂಡಿಯಲ್ಲಿ ಭಕ್ತರು ಹಾಕಿರುವ ಕಾಣಿಕೆಯ ಹಣ ಎಣಿಕೆ ಕಾರ್ಯವನ್ನು ಶ್ರೀಮಠದ ಭಕ್ತರು, ಸೇವಾಕರ್ತರು ಬುಧವಾರ ನಡೆಸಿದ್ದು, ಒಟ್ಟು 3.35 ಕೋಟಿ ಹಣ ಸಂಗ್ರಹವಾಗಿದೆ.

3,24,52,256 ರೂ.ಗಳ ಮೌಲ್ಯದ ನೋಟುಗಳು, 10,79,500 ರೂ.ಗಳ ನಾಣ್ಯಗಳು ಸೇರಿದಂತೆ ಒಟ್ಟು 3,35,31,756 ನಗದು ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಅಲ್ಲದೇ 74 ಗ್ರಾಂಗಳಷ್ಟು ಚಿನ್ನ, 1,440 ಗ್ರಾಂಗಳಷ್ಟು ಬೆಳ್ಳಿ(ರಜತ) ಸಂಗ್ರಹವಾಗಿದೆ ಎಂದು ವ್ಯವಸ್ಥಾಪಕ ಎಸ್.ಕೆ ಶ್ರೀನಿವಾಸರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous articleSU From SO: ʻಸು ಫ್ರಮ್ ಸೋ’ ಓಟಿಟಿ ಹಕ್ಕುಗಳ ಮಾರಾಟ
Next articleಬೆಳಗಾವಿ: ಮನೆಕಳವು ಪತ್ತೆ, 20 ಲಕ್ಷ ರೂ. ಮೌಲ್ಯದ ಆಭರಣ-ನಗದು ವಶ

LEAVE A REPLY

Please enter your comment!
Please enter your name here