Home Advertisement
Home ನಮ್ಮ ಜಿಲ್ಲೆ ಮಂಡ್ಯ ಶ್ವಾನದಿಂದ ಬೆಕ್ಕಿನ ಮರಿಗೆ ಹಾಲು – ಅಪೂರ್ವ ದೃಶ್ಯ ವೈರಲ್

ಶ್ವಾನದಿಂದ ಬೆಕ್ಕಿನ ಮರಿಗೆ ಹಾಲು – ಅಪೂರ್ವ ದೃಶ್ಯ ವೈರಲ್

0
74

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದಲ್ಲಿ ಅಪರೂಪದ ಮಾನವೀಯತೆಗೂ ಮೀರಿದ ಪ್ರಾಣಿಪ್ರೀತಿಯ ಘಟನೆ ಗಮನಸೆಳೆದಿದೆ. ಚೇತನ್ ಎಂಬುವರ ಮನೆಯಲ್ಲಿ ಸಾಕಿರುವ ‘ಡೈಸಿ’ ಎಂಬ ಶ್ವಾನವು ಬೆಕ್ಕಿನ ಮರಿಗೆ ತನ್ನದೇ ಮಗು ಎಂಬಂತೆ ಹಾಲುಣಿಸಿ ತಾಯ್ತನ ಮೆರೆದಿರುವುದು ಎಲ್ಲರ ಮನಸೂರೆಗೊಂಡಿದೆ.

ಸಾಮಾನ್ಯವಾಗಿ “ನಾಯಿಯ ಮೊಲೆಯಲ್ಲಿ ಹಾಲಿದ್ದರೂ ಭಾಗ್ಯವಿಲ್ಲ” ಎಂಬ ಮಾತು ಕೇಳಿಬರುತ್ತದೆ. ಆದರೆ ಈ ಘಟನೆ ಆ ಮಾತಿಗೆ ತಲೆಕೆಳಗಾಗಿ, ಪ್ರಾಣಿಗಳಲ್ಲಿಯೂ ಮಮತೆ ಎಷ್ಟೊಂದು ಗಾಢವಾಗಿರಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಮನೆಮಾಲೀಕ ಚೇತನ್ ಅವರ ಮಾಹಿತಿ ಪ್ರಕಾರ, ಇತ್ತೀಚೆಗೆ ಬೆಕ್ಕಿನ ಮರಿಯ ತಾಯಿ ಕಾಣೆಯಾಗಿದ್ದು, ಮಗು ಅಸಹಾಯಕವಾಗಿ ಇದ್ದ ಸಂದರ್ಭದಲ್ಲಿ ಡೈಸಿ ಅದನ್ನು ತನ್ನ ಮಗು ಎಂಬಂತೆ ಒಪ್ಪಿಕೊಂಡಿದೆ. ದಿನನಿತ್ಯವೂ ಅದನ್ನು ಹತ್ತಿರದಲ್ಲೇ ಇಟ್ಟುಕೊಂಡು ಹಾಲುಣಿಸುತ್ತಿದ್ದು, ತನ್ನ ಮಗುವಿನಂತೆ ಆರೈಕೆ ಮಾಡುತ್ತಿದೆ.

ಈ ದೃಶ್ಯವನ್ನು ಕಂಡ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದು, “ಇದು ಮಾನವೀಯತೆಯ ಪಾಠ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಾಣಿ-ಪ್ರಾಣಿಗಳ ನಡುವಿನ ಸಹಜ ದ್ವೇಷವನ್ನು ಮೀರಿದ ಈ ಪ್ರೀತಿ ಎಲ್ಲರ ಗಮನ ಸೆಳೆದಿದೆ.