Home Advertisement
Home ನಮ್ಮ ಜಿಲ್ಲೆ ಕೊಪ್ಪಳ ಮಕ್ಕಳ ಕಳ್ಳಿಯೆಂದು ಅನುಮಾನಿಸಿ ಹಿಗ್ಗಾಮುಗ್ಗ ಥಳಿತ

ಮಕ್ಕಳ ಕಳ್ಳಿಯೆಂದು ಅನುಮಾನಿಸಿ ಹಿಗ್ಗಾಮುಗ್ಗ ಥಳಿತ

0
10

ಕೊಪ್ಪಳ: ಮಕ್ಕಳ ಕಳ್ಳಿ ಎಂದು ಅನುಮಾನಿಸಿ ಮಹಿಳೆಯೊಬ್ಬಳನ್ನು ಹಿಗ್ಗಾಮುಗ್ಗ ಥಳಿಸಿದ ಘಟನೆ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದಲ್ಲಿ ಗುರುವಾರ ನಡೆದಿದೆ.

ಯಲಬುರ್ಗಾ ತಾಲೂಕಿನ ಬುಡಕುಂಟಿ ಗ್ರಾಮದ ಮಾನಸಿಕ ಅಸ್ವಸ್ಥೆ ಥಳಿತಕ್ಕೆ ಒಳಗಾದವರು ಎಂದು ಗುರುತಿಸಲಾಗಿದೆ. ಕುಡಿಯಲು ನೀರು ಕೇಳಲು ಹೋದಾಗ ಅಪರಿಚಿತ ಮಹಿಳೆಯ ಮಾನಸಿಕ ವರ್ತನೆ ಕಂಡು ಗ್ರಾಮಸ್ಥರು ಅನುಮಾನಿಸಿದ್ದಾರೆ. ಆಕೆಯನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಸ್ವಗ್ರಾಮದ ಮಾಹಿತಿ ನೀಡದೆ ಬೇರೆ ಬೇರೆ ಊರಿನ ಹೆಸರು ಮಹಿಳೆ ಹೇಳಿದ್ದಾರೆ. ಆದ್ದರಿಂದ ಅನುಮಾನಗೊಂಡ ಗ್ರಾಮಸ್ಥರು, ಪೊಲೀಸರಿಗೆ ಮಾಹಿತಿ ನೀಡದೆ ಮಕ್ಕಳ ಕಳ್ಳಿ ಎಂದು ಆರೋಪಿಸಿ ಅಮಾನವೀಯವಾಗಿ, ಕೂದಲು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ. ನಂತರ ಕುಷ್ಟಗಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಇದನ್ನೂ ಓದಿ: ಅಜ್ಞಾತ ಸ್ಥಳದಿಂದ ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ರಿಲೀಸ್

ಮಹಿಳೆ ಬಳಿ ದೊರೆತ ಆಧಾರ್ ಕಾರ್ಡ್ ಪರಿಶೀಲಿಸಿದ ಪೊಲೀಸರು, ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಕುಟುಂಬಸ್ಥರನ್ನು ಠಾಣೆಗೆ ಕರೆಯಿಸಿದ್ದಾರೆ. ಆಕೆ ಕಳ್ಳಿಯಲ್ಲ ಎಂದು ಬುಡಕುಂಟಿ ಗ್ರಾಮಸ್ಥರು ಮತ್ತು ಸಂಬಂಧಿಕರಿಂದ ಮಾಹಿತಿ ಪಡೆದು ಅವರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಮಹಿಳೆಯನ್ನು ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗ್ರಾಮಸ್ಥರು ಮಹಿಳೆಯನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Previous articleಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಅಭಿವೃದ್ಧಿಯನ್ನೇ ಮರೆತ ಕಾಂಗ್ರೆಸ್
Next articleನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಮೂವರು ಸಾವು