ಗಂಗಾವತಿ: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಒಳ ಒಪ್ಪಂದ ಆಗಿರೋದು ಸತ್ಯ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.
ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ದೇವರಾಜ್ ಅರಸು ಹೆಚ್ಚು ಅವಧಿಗೆ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯನವರಿಗೆ ದೇವರಾಜು ಅರಸು ಅವಧಿ ಮೀರಿ ಒಂದು ದಿನ ಅಧಿಕಾರ ಮಾಡಿ ಇನ್ನೊಂದು ಇತಿಹಾಸ ಸೃಷ್ಟಿ ಮಾಡಿ ಕೆಳಗಿಳಿಯಬೇಕು ಅನ್ನೋ ಸಂಕಲ್ಪ ಇದೆ. ಇದು ನಮ್ಮ ಕಿವಿಗೆ ಬಿದ್ದಿದೆ ಎಂದ ಜನಾರ್ದನ ರೆಡ್ಡಿ ಹೇಳಿದರು.
ಅವರ ಸಂಕಲ್ಪವೂ ಆಗಲಿ, ಡಿಕೆಶಿ ಅವರು ಸಿಎಮ್ ಆಗೋದು ನೆರವೇರಲಿ ಎಂದು ಹೇಳುವೆ. ನನ್ನ ಅನುಭವದ ಪ್ರಕಾರ ಸಿದ್ದರಾಮಯ್ಯ ಸುಲಭವಾಗಿ ಅಧಿಕಾರ ಬಿಟ್ಟು ಕೊಡ್ತಾರೆ. ಅವರ ಬಾಡಿ ಲಾಂಗ್ವೇಜ್, ಮಾತು ನೋಡಿದ್ರೆ ಗೊತ್ತಾಗುತ್ತೆ. ಸುಸೂತ್ರವಾಗಿ ಅಧಿಕಾರ ಹಂಚಿಕೆ ಆಗುತ್ತೆ ಎಂದು ರೆಡ್ಡಿ ಅಭಿಪ್ರಾಯಪಟ್ಟರು.

























