Home Advertisement
Home ನಮ್ಮ ಜಿಲ್ಲೆ ಕೋಲಾರ ಆಂಧ್ರಪ್ರದೇಶದ ರೌಡಿಶೀಟರ್ ಮುಳಬಾಗಿಲು ಗಡಿಯಲ್ಲಿ ಹತ್ಯೆ

ಆಂಧ್ರಪ್ರದೇಶದ ರೌಡಿಶೀಟರ್ ಮುಳಬಾಗಿಲು ಗಡಿಯಲ್ಲಿ ಹತ್ಯೆ

0
830

ಮುಳಬಾಗಿಲು: ಮಾರಕಾಸ್ತ್ರಗಳಿಂದ ಕೊಚ್ಚಿ ಆಂಧ್ರಪ್ರದೇಶ ಮೂಲದ ರೌಡಿ ಶೀಟರ್ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ನಡೆದಿದೆ.

ಸೋಮವಾರ ರಾತ್ರಿ ಬೈಕ್‌ನಲ್ಲಿ ತೆರಳುವ ವೇಳೆ ಆಂಧ್ರಪ್ರದೇಶದ ಪುಂಗನೂರು ಬಳಿಯ ಕರುಪಲ್ಲಿ ಗ್ರಾಮದ ರೌಡಿಶೀಟರ್ ಭಾಸ್ಕರ್ (27) ಎಂಬಾತನನ್ನು ಕೊಲೆ ಮಾಡಲಾಗಿದೆ.

ಮುಳಬಾಗಿಲಿಗೆ ಬಂದು ವಾಪಸ್ ಪುಂಗನೂರಿಗೆ ತೆರಳುವಾಗ ಈ ಕೃತ್ಯ ನಡೆದಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕುತ್ತಿಗೆಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಶ್ವಾನದಳ, ಸೋಕೋ ಟೀಂ ಭೇಟಿ ನೀಡಿದ್ದು, ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.