ಕಲಬುರಗಿ: ಶಹಾಬಾದ ನಗರದ ಶ್ರೀ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠ ಪರೀಕ್ಷಾ ಕೇಂದ್ರದಲ್ಲಿ ಬುಧವಾರವೂ ಓರ್ವ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು, ಸುಮಾರು 14 ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ.
ಬುಧವಾರ ಉರ್ದು ಭಾಷೆಯ ಪರೀಕ್ಷೆಯನ್ನು ಶರೀನ್ ಬೇಗಂ ರಿಪಿಟರ್ ಆಗಿ ಪರೀಕ್ಷೆ ಬರೆಯುತ್ತಿದ್ದರು. ಈ ವಿಷಯ ಕುರಿತು ಯಾವ ವಿದ್ಯಾರ್ಥಿಗಳು ಇಲ್ಲದೆ ಇರುವುದರಿಂದ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿನಿ ಮಾತ್ರ ಪರೀಕ್ಷೆ ಬರೆದಿದ್ದಾರೆ.
ಕೇಂದ್ರದಲ್ಲಿ ಕಾಲೇಜು ಪರೀಕ್ಷಾ ಮುಖ್ಯ ಅಧೀಕ್ಷಕರು, ಸಹ, ಅಧೀಕ್ಷಕರು, ಜಾಗೃತ ದಳದ ಸದಸ್ಯರು, ಉತ್ತರ ಪತ್ರಿಕೆ ಪಾಲಕರು, ಕೇಂದ್ರ ಕಚೇರಿ ಅಧೀಕ್ಷಕರು, ವಾಟರ್ ಮ್ಯಾನ್, ಡಿ.ಗ್ರೂಪ್ ನೌಕರ, ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಪ್ರಶ್ನೆ ಪತ್ರಿಕೆ ಸರಬರಾಜು ಸಿಬ್ಬಂದಿ ಸೇರಿ ಒಟ್ಟು 14 ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೇ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಕೂಡಾ ಭೂಗೋಳ ಶಾಸ್ತ್ರ ಪರೀಕ್ಷೆಗೆ ಓರ್ವ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದನು.























