ಕಲಬುರಗಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಲಿ

0
46

ಕಲಬುರಗಿ: ಕಲಬುರಗಿಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಸಾಲ ತೀರಿಸದೆ ಸುಲೇಪೇಟ ಗ್ರಾಮದ ಸಲಿಂ ಪಾಶಾ (46) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಲೇಪೇಟದಲ್ಲಿ ನಡೆದಿದೆ. ಮೃತ ಸಲಿಂ ಪಾಶಾ ಸುಲೇಪೇಟದಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಬೇಕರಿ ಮುಚ್ಚಿ ಹೈದರಾಬಾದ್‌ನಲ್ಲಿ ನೆಲೆಸಿದ್ದ. ಖಾಸಗಿ ಹಾಗೂ ಮೈಕ್ರೋ ಫೈನಾನ್ಸ್ ಸೇರಿ ವಿವಿಧೆಡೆ ಸುಮಾರು 20 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದು, ಸಾಲ ನೀಡಿದವರ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾನೆ. ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Previous article`ಬೊಗಸೆ ನೀರು’ ಮಾರ್ಗದರ್ಶಿ ಕೃತಿ: ಹೊರಟ್ಟಿ
Next articleಮದುವೆಗೆ ಮುನ್ನ ಗರ್ಭಿಣಿ: ಮಗಳ ಕೊಲೆಗೆ ತಂದೆ ಯತ್ನ