Home ನಮ್ಮ ಜಿಲ್ಲೆ ಕಲಬುರಗಿ ತಂದೆಯನ್ನು ಕೊಂದ ವ್ಯಕ್ತಿಯನ್ನು ಹಾಡಹಗಲೇ ಕೊಲೆ ಮಾಡಿದ ಮಗ

ತಂದೆಯನ್ನು ಕೊಂದ ವ್ಯಕ್ತಿಯನ್ನು ಹಾಡಹಗಲೇ ಕೊಲೆ ಮಾಡಿದ ಮಗ

0

ಕಲಬುರಗಿ: ತನ್ನ ತಂದೆಯನ್ನು ಕೊಂದು ಗ್ರಾಮದಲ್ಲೇ ಓಡಾಡುತ್ತಿದ್ದ ಆರೋಪಿಯ ಕಥೆ ಮುಗಿಸಲು ಶಪಥ ಮಾಡಿದ ಮಗ ಇದೀಗ ತನ್ನ ತಂದೆಯನ್ನು ಕೊಂದ ವ್ಯಕ್ತಿಯನ್ನು ಹಾಡಹಗಲೇ ಹತ್ಯೆ ಮಾಡುವ ಮೂಲಕ 17 ವರ್ಷಗಳ ಬಳಿಕ ಪ್ರತೀಕಾರವನ್ನು ತೀರಿಸಿಕೊಂಡ ಘೋರ ಘಟನೆ ಭಾನುವಾರ ಬೆಳಗ್ಗೆ ಕಲಬುರಗಿ ಸಮೀಪದ ಸಿತನೂರ ಗ್ರಾಮದಲ್ಲಿ ನಡೆದಿದೆ.

ಕಲಬುರಗಿ ತಾಲೂಕಿನ ಸೀತನೂರ ಗ್ರಾಮದ ನಿವಾಸಿಯಾಗಿದ್ದ ಶಿವರಾಯ ಮಾಲಿಪಾಟೀಲ್ ಎಂಬಾತನನ್ನು ಗ್ರಾಮದ ನಿವಾಸಿ ನಾಗೇಂದ್ರ ಮಾಂಗ್ ಅವರ ಮಗ ಲಕ್ಷ್ಮೀಕಾಂತ ಎಂಬಾತನೆ ಕೊಲೆ ಮಾಡಿದ ಹಂತಕನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಶಿವರಾಯ ಇತನು ಕಳೆದ 17 ವರ್ಷಗಳ ಹಿಂದೆ ಇದೇ ಗ್ರಾಮದ ನಾಗೇಂದ್ರ ಎಂಬಾತರ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಇದಕ್ಕೆ ವಿರೋಧಿಸಿದ ನಾಗೇಂದ್ರ ಹಾಗೂ ಶಿವರಾಯನ ನಡುವೆ ಜಗಳವಾಗಿ ಜಗಳ ವಿಕೋಪಕ್ಕೆ ತಿರುಗಿದ್ದರಿಂದ 2008ರಲ್ಲಿ ಶಿವರಾಯನು ನಾಗೇಂದ್ರನನ್ನು ಕೊಲೆ ಮಾಡಿ ಜೈಲು ಪಾಲಾಗಿ ಬಳಿಕ ಗ್ರಾಮಕ್ಕೆ ಬಂದು ಜೀವನ ಸಾಗಿಸುತ್ತಿದ್ದ. ಇದೇ ಪ್ರಕಣಕ್ಕೆ ಸಂಬಂಧಿಸಿದಂತೆ ನಾಗೇಂದ್ರಮ ಅತ್ತೆ ಹಾಗೂ ಸಹೋದರ ವಿರುದ್ಧವು ಪ್ರಕರಣ ದಾಖಲಾಗಿತ್ತು.

ತನ್ನ ತಂದೆ ನಾಗೇಂದ್ರ ಅವರನ್ನು ವಿನಾಕಾರಣ ಕೊಲೆ ಮಾಡಿ ಸದ್ಯ ಗ್ರಾಮದಲ್ಲಿ ರಾಜಾರೋಷವಾಗಿ ತೀರುಗಾಡುತ್ತಿದ್ದ ಶಿವರಾಯನ ಮೇಲೆ ನಾಗೇಂದ್ರನ ಪುತ್ರ ಲಕ್ಷ್ಮೀ ಕಾಂತನು ಕತ್ತಿ ಮಸಿಯುತ್ತಿದ್ದು ತನ್ನ ತಂದೆಯನ್ನು ಕೊಂದ ಶಿವರಾಯನ ಕಥೆ ಮುಗಿಸಲೆಬೇಕು ಎಂದು ಶಪಥ ಮಾಡಿದ್ದ ಎಂದು ಹೇಳಲಾಗುತ್ತಿದೆ.

ತಂದೆಯನ್ನು 17 ವರ್ಷಗಳ ಹಿಂದೆ ಹತ್ಯೆ ಮಾಡಿದ್ದ ಶಿವರಾಯನನ್ನು ಕೊಲೆ ಮಾಡಲೆಂದು ಸ್ಕೆಚ್ ಹಾಕಿದ ಲಕ್ಷ್ಮೀಕಾಂತ ಭಾನುವಾರ ಬೆಳಗ್ಗೆ ಶಿವರಾಯನು ತನ್ನ ಹೊಲಕ್ಕೆ ಹೋಗಿ ಮರಳಿ ಗ್ರಾಮದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಹಳೆ ಹಗೆತನದ ದ್ವೇಷದಲ್ಲಿ ಬೆಂದಿದ್ದ ಲಕ್ಷ್ಮೀಕಾಂತನು ಮಾರಕಾಸ್ತ್ರಗಳಿಂದ ಕೊಚ್ಚಿ-ಕೊಚ್ಚಿ ಶಿವರಾಯನನ್ನು ಹತ್ಯೆ ಮಾಡುವ ಮೂಲಕ ಸೇಡು ತೀರಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಬೆಳಗ್ಗೆ ಪ್ರಶಾಂತವಾಗಿದ್ದ ಸೀತನೂರ ಗ್ರಾಮದಲ್ಲಿ ಈ ಘಟನೆಯಿಂದಾಗಿ ಗ್ರಾಮದಲ್ಲಿ ಜನ ಬೆಚ್ಚಿಬಿದ್ದಿದ್ದಾರೆ, ಕೊಲೆ ಸುದ್ದಿ ಅರಿತ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ, ಡಿಸಿಪಿಗಳಾದ ಕನೀಕಾ ಸಿಕ್ರೆವಾಲ್, ಪ್ರವೀಣ ನಾಯಕ, ಎಸಿಪಿ ಡಿ. ಜಿ ರಾಜಣ್ಣ, ಪಿಐ ಮಲ್ಲಿಕಾರ್ಜುನ ಇಕ್ಕಳಕಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಸ್ಥಳವನ್ನು ಪರಿಶೀಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಹಿಸಿದ್ದಾರೆ.

ಈ ಕುರಿತು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ವ್ಯಾಪಕ ಜಾಲ ಬೀಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version