ಕಲಬುರಗಿ: ಲೋಕಾಯುಕ್ತ ತಂಡ ದಿಢೀರ್ ಭೇಟಿ, ಪರಿಶೀಲನೆ

0
1

ಕಲಬುರಗಿ: ಕಲಬುರಗಿಯ ಹಲವು ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲೋಕಾಯುಕ್ತ ನ್ಯಾಯಾಧೀಶ ವಿಜಯಾನಂದ್ ನೇತೃತ್ವದ ತಂಡದಿಂದ ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತಿ, ಸಬ್ ರಿಜಿಸ್ಟಾರ್ ಕಚೇರಿ ಸೇರಿ ಹಲವಡೆ ದಿಢೀರ್ ಭೇಟಿ ಪರಿಶೀಲನೆ ನಡೆಸಲಾಯಿತು.

ಇದನ್ನೂ ಓದಿ: ಬೀದರ್‌: KDP ಸಭೆಯಲ್ಲೇ ಕೈ ಕೈ ಮಿಲಾಯಿಸಿದ ಮುಖಂಡರು

ಲೋಕಾಯುಕ್ತ ಅಧಿಕಾರಿಗಳ 15 ಜನರ ತಂಡದಿಂದ ಪರಿಶೀಲನೆ ನಡೆಸಲಾಯಿತು. ಪಾಲಿಕೆ ಡಿ ಗ್ರುಪ್ ನೌಕರರು ಯಾಕೆ ಸಮವಸ್ತ್ರ ಧರಿಸಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಸಮವಸ್ತ್ರ ನೀಡಿಲ್ಲ ಎಂದು ಡಿ ಗ್ರುಪ್ ನೌಕರರು ಉತ್ತರಿಸಿದ್ದಾರೆ.

ಪಾಲಿಕೆಯ ಇ-ಆಸ್ತಿ ವಿಭಾಗ, ಚುನಾವಣಾ ಕಚೇರಿಯಲ್ಲಿ ಅಧಿಕಾರಿಗಳು ತಂಡ ಪರಿಶೀಲನೆ ನಡೆಸಿದ್ದು, ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಲೋಕಾಯುಕ್ತರು ಗರಂ ಆಗಿದ್ದರು.

Previous articleಬೀದರ್‌: KDP ಸಭೆಯಲ್ಲೇ ಕೈ ಕೈ ಮಿಲಾಯಿಸಿದ ಮುಖಂಡರು