ಲೋಕಾಯುಕ್ತ ಬಲೆಗೆ ಬಿದ್ದ ಎಸಿಪಿ ಸುಬೇದಾರ್

0
21

ಕಲಬುರಗಿ: ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕಲಬುರಗಿ ದಕ್ಷಿಣ ವಿಭಾಗದ ಎಸಿಪಿ ಶರಣಬಸಪ್ಪಾ ಸುಬೇದಾರ್, ರೈಟರ್ ಚಂದ್ರಕಾಂತ್, ಕಾನ್ಸಟೇಬಲ್ ರಾಘವೇಂದ್ರ, ಇಬ್ಬರು ಖಾಸಗಿ ವ್ಯಕ್ತಿಗಳಾದ ದಸ್ತಗೀರ್ ಮತ್ತು ಶಿವಪ್ಪ ಸೇರಿ 5 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರೇವಣಸಿದ್ದಪ್ಪ ಎಂಬುವರ ಬಳಿ 40 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ೫ ಜನರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Previous articleಜಪಾನ್‌: ಪ್ರಧಾನಿ ಮೋದಿಗೆ ದಾರುಮ ಗೊಂಬೆಯ ವಿಶೇಷ ಗಿಫ್ಟ್
Next articleದರ್ಶನ ಪತ್ನಿ, ಪುತ್ರನ ವಿರುದ್ಧ ಅಶ್ಲೀಲ ಸಂದೇಶ: ಪೊಲೀಸ್‌ ಆಯುಕ್ತರಿಗೆ ಮಹಿಳಾ ಆಯೋಗ ಪತ್ರ

LEAVE A REPLY

Please enter your comment!
Please enter your name here