ಬಸ್-ಜೀಪ್ ಮಧ್ಯೆ ಅಪಘಾತ: ಪತಿ-ಪತ್ನಿ ಸೇರಿ ಮೂವರು ಸಾವು

0
1

ಕಲಬುರಗಿ: ಕೆಕೆಆರ್‌ಟಿಸಿ ಬಸ್ ಮತ್ತು ಕಮಾಂಡರ್ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಜೀಪ್‌ನಲ್ಲಿದ್ದ ಪತಿ-ಪತ್ನಿ ಸೇರಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಅಫಜಲಪುರ ತಾಲೂಕಿನ ಹಾರುತಿ ಹಡಗಿಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಡೆದಿದೆ.

ಅಪಘಾತದಲ್ಲಿ ಅಫಜಲಪುರ ತಾಲೂಕಿನ ತೆಲ್ಲೋಣಿ ಗ್ರಾಮ ಮೂಲದ ನಗರದ ಬಿದ್ದಾಪುರ ಕಾಲೋನಿ ನಿವಾಸಿಗಳಾದ ಚಂದ್ರಕಾಂತ ಚಿತ್ತಾಪುರ (82) ಮತ್ತು ಸುಲೋಚನಾ ಚಿತ್ತಾಪುರ (73) ಹಾಗೂ ಚಾಲಕ ಮಿಟ್ಟೆಸಾಬ್ ರಸೂಲ್ ಪಟೇಲ್ (35) ಮೃತಪಟ್ಟಿದ್ದು, ಬಸ್‌ನಲ್ಲಿದ್ದ ಮೂವರಿಗೆ ಗಾಯಗಳಾಗಿವೆ.

ಚಂದ್ರಕಾಂತ ಅವರು ತೆಲ್ಲೋಣಿ ಗ್ರಾಮ ಮೂಲದವರಾಗಿದ್ದು, ಸದ್ಯ ಬಿದ್ದಾಪುರ ಕಾಲೋನಿಯಲ್ಲಿ ವಾಸವಾಗಿದ್ದಾರೆ. ತಮ್ಮ ಊರಿಂದ ಪತ್ನಿಯೊಂದಿಗೆ ಖಾಸಗಿ ಜೀಪ್‌ನಲ್ಲಿ ಕಲಬುರಗಿಗೆ ಬರುತ್ತಿದ್ದಾಗ ಕಲಬುರಗಿಯಿಂದ ಅಫಜಲಪುರಕ್ಕೆ ಹೋಗುತ್ತಿದ್ದ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಘಟನೆಯಲ್ಲಿ ಚಾಲಕ ಸೇರಿ ಪತಿ-ಪತ್ನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬಸ್‌ನಲ್ಲಿದ್ದ ಗುರುದೇವಿ, ವಿಜಯಲಕ್ಷ್ಮೀ ಮತ್ತು ಚಂಚಲಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಮಾಂಡರ್ ಜೀಪ್ ಚಾಲಕನ ನಿರ್ಲಕ್ಷ್ಮವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleವನ್ಯಜೀವಿಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಹೆದ್ದಾರಿಗೆ ಟೇಬಲ್‌ಟಾಪ್‌