Home Advertisement
Home ನಮ್ಮ ಜಿಲ್ಲೆ ಹಾವೇರಿ ಮಳೆಗೆ ಕುಸಿದುಬಿದ್ದ ಮನೆ

ಮಳೆಗೆ ಕುಸಿದುಬಿದ್ದ ಮನೆ

0
145

ಹಿರೇಕೆರೂರ: ತಾಲೂಕಿನದ್ಯಂತ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಮಂಗಳವಾರ ಸಹ ಮುಂದುವರಿದಿತ್ತು. ಸತತ ಮಳೆಯಿಂದ ವಾತಾವರಣ ತಂಪಾಗಿದ್ದು. ತಾಲೂಕಿನಾದ್ಯಂತ ಗಾಳಿ-ಮಳೆಯೊಂದಿಗೆ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ.

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ಬೆಳಗ್ಗೆಯಿಂದ ಆಗಾಗ ಬಿಡುವು ನೀಡುತ್ತ ಜಿಟಿ ಜಿಟಿ ಮಳೆಯಿಂದಾಗಿ ಪಟ್ಟಣದ ಕೆಲವು ವಾರ್ಡುಗಳ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಟಿಟಿದ್ದು ಬೈಕ್ ಸವಾರರು ಸಂಚಾರಕ್ಕೆ ಪರದಾಡುವಂತಾಗಿದೆ. ಜಿಟಿ ಜಿಟಿ ಮಳೆ ಮಧ್ಯೆಯೊ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಛತ್ರಿಗಳನ್ನು ಹಿಡಿದು. ವ್ಯಾಪಾರ ವಹಿವಾಟು ನಡೆಸುತ್ತಿರುವ ದೃಶ್ಯ ಕಂಡುಬಂತು. ಗ್ರಾಮೀಣ ಭಾಗದಿಂದ ಅಗಮಿಸಿದ ಜನತೆ ಮಳೆಯಿಂದಾಗಿ ಸಮಸ್ಯೆ ಎದುರಿಸುವಂತಾಯಿತು.

Previous articleಆಲಮಟ್ಟಿ ಭರ್ತಿಗೆ ಕ್ಷಣಗಣನೆ
Next articleತಲೆ ಮೇಲೆ ಕಲ್ಲು ಹೊತ್ತು ವಿಜಯಪುರಕ್ಕೆ ಪಾದಯಾತ್ರೆ