Home ನಮ್ಮ ಜಿಲ್ಲೆ ಹಾವೇರಿ ಮನೆಗಳನ್ನು ಸಕ್ರಮಗೊಳಿಸಲು ಒತ್ತಾಯ

ಮನೆಗಳನ್ನು ಸಕ್ರಮಗೊಳಿಸಲು ಒತ್ತಾಯ

0
125
ಸಕ್ರಮ

ಸವಣೂರ: ಪಟ್ಟಣದ 8ನೇ ವಾರ್ಡ್‌ ದಂಡಿನ ಪೇಟೆಯಲ್ಲಿನ ಸರ್ಕಾರಿ ನಿವೇಶನದಲ್ಲಿ ಸುಮಾರು 45 ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಸ್ಥರ ಕಟ್ಟಡ (ಮನೆ)ಗಳನ್ನು ಸಕ್ರಮಗೊಳಿಸಲು ಒತ್ತಾಯಿಸಿ ಸಾರ್ವಜನಿಕರು ಗ್ರೇಡ್-2 ತಹಶೀಲ್ದಾರ್ ಗಣೇಶ ಸವಣೂರ ಅವರ ಮೂಲಕ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಕಳೆದ ನಾಲ್ಕು ದಶಕಗಳಿಂದ ೪೫ಕ್ಕೂ ಹೆಚ್ಚು ಬಡ ಕುಟುಂಬಸ್ಥರು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದೇವೆ. ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ಕೇಳಿದ್ದೇವೆ. ಆದರೆ ಯಾವುದೇ ರೀತಿಯ ಸ್ಪಂದನೆ ಇರುವದಿಲ್ಲ. ಸರ್ವೇ ಕೈಗೊಂಡ ವರದಿಯನ್ನು ವಾಸಿಸುವ ಕುಟುಂಬಸ್ಥರಿಗೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಫ್ಕಕೀರಪ್ಪ ಬಾಬನಿ, ಅಬ್ಬುಲ್‌ಮುನಾಫ ಹಕೀಮ್, ಮಹ್ಮದಹನೀಫ್ ಹಕೀಮ್, ಗೌಸಮೀಯಾ ಚೌಪದಾರ್, ಶಬ್ಬಿರಅಹ್ಮದ್ ಬಳ್ಳಾರಿ, ಮಹ್ಮದಗೌಸ್ ಬಂಕಾಪುರ, ಮಂಜುನಾಥ ಲಠಣ್ಣವರ, ಮೋದಿನಸಾಬ್ ನಾರಲಬೌಡಿ, ಶಿವಪ್ಪ ತೆಗ್ಗಹಳ್ಳಿ ಇತರರು ಇದ್ದರು.