Home Advertisement
Home ನಮ್ಮ ಜಿಲ್ಲೆ ಹಾವೇರಿ ಸಾಲ ಮಾಡಿದವರೆ ತೀರಿಸುವ ಕಾನೂನು ಬರಲಿ

ಸಾಲ ಮಾಡಿದವರೆ ತೀರಿಸುವ ಕಾನೂನು ಬರಲಿ

0
14

ಹಾವೇರಿ(ಶಿಗ್ಗಾವಿ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದಲ್ಲಿ ಮೂರು ಪಟ್ಟು ಸಾಲ ಮಾಡಿದ್ದಾರೆ. ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಜಾರಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದ ಸವಣೂರ ರಸ್ತೆಯಲ್ಲಿರುವ ಬಸವರಾಜ ಬೊಮ್ಮಾಯಿರವರ ನಿವಾಸದ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಶಿಗ್ಗಾಂವ – ಸವಣೂರ ವಿಧಾನ ಸಭಾ ಮತಕ್ಷೇತ್ರದ ಬಿ.ಎಲ್.ಎ – 2 ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ನನಗೆ ನಿಮ್ಮನ್ನು ನೊಡಿ ಬಹಳ ಸಂತೋಷವಾಗಿದೆ. ಗಡಿಯಲ್ಲಿ ಸೈನಿಕರು ಇರುವಂತೆ ಕಷ್ಟ ಕಾಲದಲ್ಲಿ ನೀವು ನನ್ನನ್ನು ಸುರಕ್ಷೆ ಮಾಡುವ ಸೈನಿಕರ ಥರ ಕಾಣುತ್ತಿದ್ದಿರಿ ಎಂದು ಹೇಳಿದರು. ಬಿಎಲ್‌ಎ 2 ಗಳು ಸರಿಯಾಗಿ ಕೆಲಸ ಮಾಡಿದರೆ ಪಾಕಿಸ್ತಾನ ಭಾರತ ಮ್ಯಾಚ್ ಆದ ಹಾಗೆ ಆಗುತ್ತದೆ. ಭಾರತ ಗೆದ್ದೆ ಗೆಲ್ಲುತ್ತದೆ ಎನ್ನುವ ವಿಶ್ವಾಸದಲ್ಲಿ ಕುಂತಹಾಗೆ ನೀವು ಕುಂತಿದ್ದಿರಿ.

ಶಿಗ್ಗಾವಿ ಸವಣೂರು ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ಮಾಡಿ ಸಂಘಟಿತರಾಗಿ ನೀವು ಬಂದಿದ್ದೀರಿ, ಬಿಎಲ್‌ಎ 2ಗಳು, ನಿಮ್ ಕೆಲಸ ಏನಿದೆ ಅಂತ ತಿಳಿದಕೊಳ್ಳಿ, ಒಂದು ಮತದಾರರ ಪಟ್ಟಿಯನ್ನು ಹಿಡಿದುಕೊಂಡು ಯಾರು ಅನಧಿಕೃತವಾಗಿದ್ದಾರೆ. ಯಾವ ರೀತಿ ಸುಳ್ಳು ಹೇಳಿ ಹೆಸರು ಸೇರಿಸಿದ್ದಾರೆ. ಅದನ್ನು ಪತ್ತೆ ಹಚ್ಚಬೇಕು. ಎಸ್‌ಆರ್‌ಐ ಕೆಲಸ ಸರ್ಕಾರಿ ಕೆಲಸ ಅಲ್ಲ ಸರ್ಕಾರಿ ಅಧಿಕಾರಿಗಳ ಮುಖಾಂತರ ಮಾಡುವ ಕೆಲಸ ಅಷ್ಟೆ ಆದರೆ ನೀವು ನ್ಯಾಯ ಸಮ್ಮತವಾಗಿ ಸತ್ಯದ ಪರವಾಗಿ ಕಾನೂನು ಪರವಾಗಿ ಇರಬೇಕು. ದೇಶದ ಭದ್ರತೆಯಲ್ಲಿ ಸೈನಿಕರು ಎಷ್ಟು ಪ್ರಮುಖವೊ, ಜಾಪ್ರಭುತ್ವದಡಿಯಲ್ಲಿ ದೇಶವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಬಿಎಲ್ಓಗಳ ಮೇಲಿದ್ದು, ನಡೆಯುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಶಿಗ್ಗಾವಿ ಸವಣೂರ ಕ್ಷೇತ್ರವನ್ನು ಮೊದಲಿನ ರೀತಿಯಲ್ಲಿ ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಹದಿನೈದು ಸಾವಿರ ಮನೆಗಳನ್ನು ಕೊಟ್ಟಿದ್ದೇವೆ. ಸುಳ್ಳು ಹೇಳಿ ರಾಜಕಾರಣ ಮಾಡುವ ಅವಶ್ಯಕತೆ ನನಗೆ ಇಲ್ಲ. ಕ್ಷೇತ್ರದ ಜನರ ಮನದಲ್ಲಿ ನಾನು ನೆಲೆ ಊರಿದ್ದೇನೆ. ಇವತ್ತು ಈ ಜನ ಪ್ರೀತಿ ವಿಶ್ವಾಸ ಯಾಕೆ ತೊರಿಸುತ್ತಾರೆ ಎಂದರೆ ನಾವು ಏನು ಮಾತನಾಡುತ್ತೇವೆ ಅದನ್ನು ಮಾಡುತ್ತೇವೆ. ನಮಗಿಂತ ಒಳ್ಳೆಯ ಕೆಲಸ ಮಾಡಿದರೆ ನಾನೇ ಶಹಬ್ಬಾಶಗಿರಿ ಕೊಡುತ್ತೇನೆ. ಆದರೆ ಜನರನ್ನು ದಾರಿ ತಪ್ಪಿಸಿ ನನ್ನೊಬ್ಬನಿಂದ ಕೆಲಸ ಆಗಿದೆ. ನಾನೇ ಸೂರ್ಯನ ಹುಟ್ಟಿಸಿದೆ ಅಂದರೆ ದೇವರು ನೋಡಿಕೊಳ್ಳುತ್ತಾನೆ ಎಂದರು.

ಅಕ್ರಮ ಚಟುವಟಿಕೆ ತಾಣ: ಕ್ಷೇತ್ರದಲ್ಲಿ ಯಾವುದೇ ತೋಟಗಳಿಗೆ ಹೋದರೆ ಇಸ್ಪೇಟ್‌, ಒಸಿ ಆಡುವುದು ಕಾಣಿಸುತ್ತದೆ. ಅಲ್ಲಿ ಊಟದ ಎಲಿ ಬದಲು ಇಸ್ಪೀಟ್ ಎಲೆ ಇಟ್ಟಿರುತ್ತಾರೆ. ಈ ಕ್ಷೇತ್ರದ ಯುವಕರು ಹಾಳಾಗುತ್ತಿದ್ದಾರೆ‌. ಎಸ್ಪಿ ಸೇರಿದಂತೆ ಯಾವುದೇ ಅಧಿಕಾರಿಗಳ ಭಯ ಇಲ್ಲದಂತಾಗಿದೆ. ಕ್ಷೇತ್ರದಲ್ಲಿ ಗಾಂಜಾ, ಮಟ್ಕಾ ಸೇರಿದಂತೆ ಅಕ್ರಮ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿವೆ. ನಾವು ತಂದ ಯೋಜನೆಗಳನ್ನೇ ಉದ್ಘಾಟನೆ ಮಾಡುತ್ತಿದ್ದಾರೆ. ಶಿಗ್ಗಾವಿ ಬಂಕಾಪುರ ಸವಣೂರು ಮೂರು ಪಟ್ಟಣಗಳಿಗೆ ನಾನು ಕುಡಿಯುವ ನೀರಿನ ಯೋಜನೆ ತಂದಿದ್ದೇನೆ. ಆದರೆ, ಈಗಿನವರು ಈ ಯೋಜನೆಗೆ ಅನುಮೋದನೆ ಪಡೆದು ನಾನೇ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಸಿಎಂ ಹೆಚ್ಚು ಸಾಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದಲ್ಲಿ ಮೂರು ಪಟ್ಟು ಸಾಲ ಮಾಡಿದ್ದಾರೆ. ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಜಾರಿಯಾಗಬೇಕು. ಸಿದ್ದರಾಮಯ್ಯ ಅವರ ಸರ್ಕಾರ ಸುಳ್ಳಿನ ಸರ್ಕಾರ ಬಜೆಟ್‌ನಲ್ಲಿ 1.32 ಲಕ್ಷ ಕೋಟಿ ಸಾಲ ಮಾಡಿದ್ದಾರೆ.‌ ನಾವಿದ್ದಾಗ 54 ಸಾವಿರ ಕೋಟಿ ಸಲಾ ಮಾಡಿದ್ದೇವು. ನಾವು ಅಧಿಕಾರದಲ್ಲಿದ್ದಾಗ ಸಾಲದ ಲೆಕ್ಕಾ ಮಾಡುತ್ತಿದ್ದಾಗ ಸಿದ್ದರಾಮಯ್ಯ ಹತ್ತು ವರ್ಷಕ್ಕೆ ಸಾಲ ಮಾಡಿದ್ದರು ಆ ಸಾಲವನ್ನು ನಾವು ತೀರಿಸಿದೆವು ಎಂದು ಹೇಳಿದರು.

ನ್ಯಾಯ ಸಮ್ಮತ ಕೆಲಸ ಮಾಡಿ:‌ ಇಡಿ ಕರ್ನಾಟಕ ಅಭಿವೃದ್ಧಿ ಅಷ್ಟೆ ಅಲ್ಲಾ ಶಿಗ್ಗಾವಿ ಸವಣೂರು ಅಭಿವೃದ್ಧಿ ಪರ್ವ ಮುಂದುವರೆಯಬೇಕು. ಚಾಕು ಚೂರಿ ಸಂಸ್ಕೃತಿ ಬಂದಾಗಬೇಕು ನೀವು ಎಷ್ಟು ಸಕ್ರೀಯರಾಗಿ ಕೆಲಸ ಮಾಡುತ್ತೀರಿ ಅಷ್ಟು ಅನುಕೂಲ ಆಗುತ್ತದೆ. ಎಲ್ಲಿ ಅನ್ಯಾಯ ಆಗಿದೆ ಅದನ್ನು ಸರಿ ಪಡಿಸಿ, ಶುದ್ದವಾದ ಮತದಾರರ ಪಟ್ಟಿ ಸಿದ್ದವಾಗಲಿ, ಇದೊಂದು ಅವಕಾಶ ಸಿಕ್ಕಿದೆ. ಇನ್ನೊಬ್ಬರನ್ನು ನೋಡಬೇಡಿ ನ್ಯಾಯ ಸಮ್ಮತವಾಗಿ ಮತದಾರರ ಮಟ್ಟಿ ಸಿದ್ಧಪಡಿಸಿ ನಿಮ್ಮ ಕೆಲಸ ಮಾಡಿ, ನಾನೂ ಕೂಡ ಕೆಲವು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡುತ್ತೇನೆ, ಮುಂಬರುವ ಝಡ್‌ಪಿ, ಟಿಪಿ ಚುನಾವಣೆಗಳಿಗೆ ಸನ್ನದ್ಧರಾಗಿ ಎಂದು ಹೇಳಿದರು.