ಯುವತಿ ಹೃದಯಾಘಾತಕ್ಕೆ ಬಲಿ

0
23

ಹೊಳೆನರಸೀಪುರ: ಹೊಳೆನರಸೀಪುರ ತಾಲೂಕಿನ ಕಟ್ಟಳ್ಳಿ ಮೂಲದ ಸುಪ್ರಿಯಾ (22) ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ತಾಲೂಕಿನ ಕಟ್ಟಳ್ಳಿ ಮೂಲದ ಕೃಷ್ಣಮೂರ್ತಿ, ರೂಪ ದಂಪತಿ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ವಾಸವಿದ್ದು, ಇವರ ಪುತ್ರಿ ಸುಪ್ರಿಯಾ ಅವರು ಮುಕ್ತ ವಿವಿಯಲ್ಲಿ ಪದವಿ ವಿದ್ಯಾಭ್ಯಾಸದ ಜೊತೆಗೆ ಕೆಲಸ ಮಾಡುತ್ತಿದ್ದರು. ಬುಧವಾರ ಸುಪ್ರಿಯಾ ಮನೆಯಲ್ಲಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಪೋಷಕರಿಗೆ ಎದೆನೋವು ಎಂದು ಹೇಳಿ ಕುಸಿದು ಬಿದಿದ್ದಾಳೆ. ಸುಪ್ರಿಯಾ ಅವರನ್ನು ಪೋಷಕರು ಆಸ್ಪತ್ರೆಗೆ ಕರೆದೊಯುವಷ್ಟರಲ್ಲಿ ಸುಪ್ರಿಯಾ ಮೃತಪಟ್ಟಿದ್ದಾಳೆ.

Previous articleಯಲ್ಲಮ್ಮ ದೇವಸ್ಥಾನಕ್ಕೆ 1.04 ಕೋಟಿ ಕಾಣಿಕೆ
Next articleಹುಲಿ ಸಾವು ಘಟನೆ ರಾಜ್ಯಕ್ಕೆ ಕಳಂಕ