ವಿಶ್ವ ಗುರು ಪರಂಪರೆಗೆ ವಿದೇಶಿ ದಾಳಿಗಳೇ ಕೊಳ್ಳಿ

0
56

ಬೆಂಗಳೂರು: ಭಾರತವು ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶ. ಇಲ್ಲಿ ಆ ಯುವ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಲು ಶಿಕ್ಷಣದ ಪಾತ್ರ ಮಹತ್ವದ್ದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಶ್ರೀಶಾನಂದ ಜ್ಞಾನದೀಪ್ತಿ-2025 ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಸಂಯುಕ್ತ ಕರ್ನಾಟಕ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ ಅಯೋಜಿಸಿದ್ದ ಜ್ಞಾನ ದೀಪ್ತಿ 2025 ಶಿಕ್ಷಕರ ಮನೋ ಕ್ಷೇಮ-ಕೌಶಲ್ಯ ವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಭಾರತವು ಸಾವಿರಾರು ವರ್ಷಗಳ ಹಿಂದೆಯೇ ಜಗತ್ತಿಗೆ ಮಾರ್ಗದರ್ಶನ ನೀಡಿದ ವಿಶ್ವಗುರು ಆಗಿತ್ತು. ಆದರೆ, ನಮ್ಮ ದೇಶದ ಮೇಲಾದ ನಿರಂತರ ದಾಳಿಗಳು ನಮ್ಮ ಈ ಅಮೂಲ್ಯ ಪರಂಪರೆ ಮತ್ತು ಜ್ಞಾನ ಭಂಡಾರವನ್ನು ನಾಶ ಮಾಡಿದವು. ಇದರ ಪರಿಣಾಮವಾಗಿ, ನಾವು ನಮ್ಮ ಭವ್ಯ ಇತಿಹಾಸದಿಂದ ದೂರ ಆದೆವು ಎಂದಿದ್ದಾರೆ.

ರಾಷ್ಟ್ರಕೂಟರ ಕಾಲದಲ್ಲಿದ್ದ ಮಾನ್ಯಖೇಟಗೆ ಶಿಕ್ಷಣಕ್ಕಾಗಿ ಬೇರೆ ದೇಶಗಳಿಂದ ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಬರುತ್ತಿದ್ದರು ಎಂದು ಹೇಳಿದರು. ನಮ್ಮ ದೇಶದ ಪೂರ್ವ ಜನರಲ್ಲಿನ ಕ್ಷಮತೆ ಎಲ್ಲೂ ಹೋಗಿಲ್ಲ ನಮ್ಮಲ್ಲೇ ಇದೆ. ಪ್ರಾಚೀನ ವೈಭವವನ್ನು ಮರುಸ್ಥಾಪಿಸಲು ಮತ್ತು ಭವಿಷ್ಯದಲ್ಲಿ ಮತ್ತೆ ವಿಶ್ವ ಗುರು ಸ್ಥಾನಕ್ಕೆ ತಲುಪಲು ನಮ್ಮೆಲ್ಲರ ಪ್ರಯತ್ನಗಳು ಅಗತ್ಯವಾಗಿವೆ. ನಮ್ಮ ಇತಿಹಾಸದ ಮಹತ್ವವನ್ನು ಅರ್ಥ ಮಾಡಿಕೊಂಡು, ಭವಿಷ್ಯಕ್ಕೆ ಸೂಕ್ತ ಮಾರ್ಗ ದರ್ಶನದಲ್ಲಿ ರೂಪಿಸಿ ಕೊಳ್ಳಬೇಕಾಗಿದೆ.

ಆ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಯನ್ನು ಸಜ್ಜುಗೊಳಿಸಲು ಇಂದಿನ ಶಾಲೆಗಳಲ್ಲಿ ಸಂಸ್ಕಾರ ಹೇಳಿ ಕೊಡುವ ಕಾರ್ಯ ಆಗಬೇಕಿದೆ. ರಾಮಾಯಣ, ಮಹಾ ಭಾರತದಲ್ಲಿನ ಮೌಲ್ಯಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು ಎಂದರು. ಅಂಧಕಾರವನ್ನು ಸೂರ್ಯ ನಾಶ ಮಾಡುವಂತೆ, ಗುರುಗಳು ಮಕ್ಕಳಲ್ಲಿನ ಕೆಟ್ಟ ಆಲೋಚನೆ, ನಡತೆಯನ್ನು ತಪ್ಪಿಸಿ, ಅವರಲ್ಲಿ ಗುಣ ಮಟ್ಟದ ಮೌಲ್ಯಯುತ ಶಿಕ್ಷಣವನ್ನು ನೀಡಬೇಕು.

ಅಂಕಗಳು ಮುಖ್ಯವಲ್ಲ. ವ್ಯಕ್ತಿತ್ವ ಮುಖ್ಯ ಆಗಿದ್ದು, ವಿದ್ಯಾರ್ಥಿಗಳಿಗೆ ಹಾಡುಗಳ ಮೂಲಕ, ಬದುಕಿನ ಮೌಲ್ಯಗಳನ್ನು ಕಲಿಸಬೇಕು. ಭಾರತವು ಅತಿ ಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ಆ ಯುವ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಲು ಶಿಕ್ಷಣ ಪಾತ್ರ ಮಹತ್ವದ್ದು ಎಂದು ಹೇಳಿದರು.

ಶಿಕ್ಷಣವೇ ನಿಜವಾದ ಸಂಪತ್ತು: ಸ್ವಾತಂತ್ರ‍್ಯ ಬರುವುದಕ್ಕಿಂತ ಮೊದಲಿನಿಂದಲೂ, ಲೋಕ ಶಿಕ್ಷಣ ಟ್ರಸ್ಟ್ ಶಿಕ್ಷಣದ ಜ್ಯೋತಿಯನ್ನು ಹೊತ್ತಿಸುತ್ತಾ, ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡಿಕೊಂಡು ಬಂದಿದೆ. ಕಾರ್ಯ ಕೇವಲ ಪಾಠ ಹೇಳುವುದಕ್ಕೆ ಸೀಮಿತ ಆಗಿಲ್ಲ, ಬದಲಿಗೆ ಸಮುದಾಯಗಳನ್ನು ಸುಧಾರಿಸಿ, ಲೋಕವನ್ನೇ ತಿದ್ದುವ ಮಹತ್ಕಾರ್ಯ ಆಗಿದೆ. ಏಕೆಂದರೆ, ನಿಜವಾದ ಸಂಪತ್ತು ಹಣವಲ್ಲ, ಅಧಿಕಾರವಲ್ಲ, ಬದಲಾಗಿ ಶಿಕ್ಷಣ. ಎಲ್ಲವನ್ನೂ ಕಳೆದು ಕೊಂಡರೂ, ಶಿಕ್ಷಣ ಎಂಬ ಸಂಪತ್ತು ಸದಾ ನಮ್ಮ ಜೊತೆಗಿರುತ್ತದೆ. ವಿದ್ಯಾರ್ಥಿಗಳಿಗೆ ಅಂಕಗಳು ಮುಖ್ಯವಲ್ಲ. ವ್ಯಕ್ತಿತ್ವ ಮುಖ್ಯ ಆಗಿದ್ದು, ವಿದ್ಯಾರ್ಥಿಗಳಿಗೆ ಹಾಡುಗಳ ಮೂಲಕ, ಬದುಕಿನ ಮೌಲ್ಯಗಳನ್ನು ಕಲಿಸಬೇಕು ಎಂದು ಹೇಳಿದರು.

Previous articleಅಂಕ ಗಳಿಕೆಯೇ ಯಶಸ್ಸಿನ ಮಾನದಂಡವಲ್ಲ
Next articleಬೆಂಗಳೂರಲ್ಲಿ ಮೋದಿ: 4 ಗಂಟೆ, 3 ಕಾರ್ಯಕ್ರಮ ವಿವರ

LEAVE A REPLY

Please enter your comment!
Please enter your name here