Home Advertisement
Home ಕ್ರೀಡೆ ಟೀಮ್‌ ಇಂಡಿಯಾದ ಜರ್ಸಿ ಧರಿಸಲಿದ್ದಾರೆ ಕಾಶ್ಮೀರದ ಕ್ರಿಕೆಟರ್

ಟೀಮ್‌ ಇಂಡಿಯಾದ ಜರ್ಸಿ ಧರಿಸಲಿದ್ದಾರೆ ಕಾಶ್ಮೀರದ ಕ್ರಿಕೆಟರ್

0
49

ಹುಬ್ಬಳ್ಳಿ: ನಗರದ ರಾಜನಗರದ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡ ಫೈನಲ್‌ಗೆ ತಲುಪಿರುವುದು ಹೆಮ್ಮೆಯ ವಿಷಯ. ಇದು ನಮಗೆ ಐತಿಹಾಸಿಕ ಜಯವಾಗಬಹುದಲ್ಲದೇ, ಮೊದಲ ಟೈಟಲ್ ಜಮ್ಮು ಮತ್ತು ಕಾಶ್ಮೀರದ ಭವಿಷ್ಯವನ್ನು ಬದಲಾಯಿಸಬಹುದು ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಿಳಿಸಿದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಉತ್ತಮ ಕ್ರಿಕೆಟಿಗರು ಇದ್ದಾರೆ ಎಂಬ ಸತ್ಯವನ್ನು ಜನರು ಈಗ ಅರಿತುಕೊಳ್ಳಲಿದ್ದಾರೆ. ಆದರೆ, ಅವರಿಗೆ ಸೂಕ್ತ ಅವಕಾಶ ಮತ್ತು ಪರಿಚಯ ಸಿಗಬೇಕಿದೆ. ಆಗ ಖಂಡಿತವಾಗಿ ಜಮ್ಮು – ಕಾಶ್ಮೀರದ ಒಬ್ಬ ಅಥವಾ ಇಬ್ಬರು ಆಟಗಾರರು ಭಾರತೀಯ ತಂಡದ ಜರ್ಸಿ ಧರಿಸಲು ಅರ್ಹತೆ ಪಡೆಯುತ್ತಾರೆ. ಕ್ರಿಕೆಟ್ ಧರ್ಮ, ಭೇದಗಳನ್ನು ಮೀರಿ ಜನರನ್ನು ಒಂದಾಗಿಸುತ್ತದೆ ಎಂದರು.