ಹುಬ್ಬಳ್ಳಿ: ನಾಡಿನೆಲ್ಲಡೆ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ವಿವಿಧ ರೂಪದಲ್ಲಿ ಗಣೇಶ ಮತ್ತೆ ಭೂಮಿಗೆ ಬಂದಿದ್ದಾನೆ. ಒಂದು ಹೆಜ್ಜೆ ಮುಂದೆ ಹೋಗಿ ಹುಬ್ಬಳ್ಳಿಯಲ್ಲಿ ಡೈಮಂಡ್‌ನಲ್ಲಿ ಗಣೇಶ ಮೂರ್ತಿ ಸಿದ್ಧವಾಗಿದ್ದು, ರಾಮನಗರದತ್ತ ವಿನಾಯಕ ಹೆಜ್ಜೆ ಹಾಕಿದ್ದಾನೆ.
ರಾಮನಗರದ ಐಜೂರ ಮಲ್ಲೇಶ್ವರ ಬಡಾವಣೆ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿಯಿಂದ, ನೇತಾಜಿ ಪಾಪ್ಯುಲರ್ ಸ್ಕೂಲ್ ಬಳಿ ಈ ಬಾರಿ ಈ ಡೈಮಂಡ್ ಗಣಪ ಪ್ರತಿಸ್ಥಾಪನೆಗೊಳಲಿದ್ದಾನೆ.
ಹುಬ್ಬಳ್ಳಿ ಕಲಾವಿದ ಮಹೇಶ ಮುರಗೋಡ 6 ಲಕ್ಷ ವೆಚ್ಚದಲ್ಲಿ ಅಮೇರಿಕನ್ ವಿವಿಧ ಬಣ್ಣದ ಡೈಮಂಡ್‌ನಲ್ಲಿ ಈ ಗಣೇಶ ಮೂರ್ತಿಯನ್ನು ನಿರ್ಮಿಸಿದ್ದಾರೆ. ಸುಮಾರು 50 ಕೆಜಿ ತೂಕವನ್ನು ಈ ಮೂರ್ತಿ ಹೊಂದಿದೆ. ಮಹೇಶ್ ಕುಟುಂಬ ವಜ್ರದಲ್ಲಿ ಗಣೇಶ ಮೂರ್ತಿ ತಯಾರಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ.
ಸುಮಾರು 15 ವರ್ಷದಿಂದ ಇಂತಹ ವಿಶೇಷ ಮೂರ್ತಿಯನ್ನು ನಿರ್ಮಿಸಿ, ಭಕ್ತರಿಗೆ ನೀಡುತ್ತಿದೆ. ಇನ್ನೂ ಈ ಬಾರಿ ರಾಮನಗರದಲ್ಲಿ ಆನೆ ಅಂಬಾರಿ ಮೂಲಕ ಗಣೇಶ ಮೆರವಣಿಗೆ ಮಾಡಲು ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ನಿರ್ಧಾರ ಮಾಡಿದೆ.