Home ನಮ್ಮ ಜಿಲ್ಲೆ ಧಾರವಾಡ `ರೋಮಾಂಚಕ’ ಹಾಡಿಗೆ ‘ಲ್ಯಾಂಡ್ ಲಾರ್ಡ್’ ಸಾಕ್ಷಿ: ‘ಮರಳಿ’ ತ್ರಿವಳಿ ಜೋಡಿ ಕಮಾಲ್!

`ರೋಮಾಂಚಕ’ ಹಾಡಿಗೆ ‘ಲ್ಯಾಂಡ್ ಲಾರ್ಡ್’ ಸಾಕ್ಷಿ: ‘ಮರಳಿ’ ತ್ರಿವಳಿ ಜೋಡಿ ಕಮಾಲ್!

0
32

ಜನವರಿ 8ರಂದು ಧಾರವಾಡದಲ್ಲಿ ಬೃಹತ್ ಸಿನಿಜಾತ್ರೆ!!:

ಧಾರವಾಡ: ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ‘ಲ್ಯಾಂಡ್ ಲಾರ್ಡ್’ ಜನವರಿ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ ಮತ್ತು ಹೇಮಂತ್ ಗೌಡ ಕೆ.ಎಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಜಡೇಶ್ ಕೆ ಹಂಪಿ ಆಕ್ಷನ್ ಕಟ್ ಹೇಳಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮತ್ತು ಹಾಡುಗಳಿಗೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ಇತ್ತೀಚೆಗೆ ಬಿಡುಗಡೆಗೊಂಡ ‘ನಿಂಗವ್ವ ನಿಂಗವ್ವ…’ ಹಾಡು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿ ಮನೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಚಿತ್ರತಂಡ ಮತ್ತೊಂದು ಹಾಡು ಬಿಡುಗಡೆಗೆ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ಗಲಾಟೆ – ಬಿಜೆಪಿ ಕಾರ್ಯಕರ್ತೆ ಬಂಧನ ಸಂದರ್ಭದಲ್ಲಿ ಹಲ್ಲೆ ಆರೋಪ – ವೀಡಿಯೊ ವೈರಲ್

ಜನವರಿ 8ರಂದು ಧಾರವಾಡದಲ್ಲಿ ಬೃಹತ್ ಸಿನಿಜಾತ್ರೆ!!: ‘ರೋಮಾಂಚಕ…’ ಎಂಬ ಈ ಹೊಸ ಹಾಡನ್ನು ಜನವರಿ 8ರಂದು ಸಂಜೆ ಧಾರವಾಡದಲ್ಲಿ ಅದ್ಧೂರಿ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದದ್ದಾಗಿದೆ. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಉತ್ತರ ಕರ್ನಾಟಕದಲ್ಲಿ ಸಿನಿಮಾಗೆ ಮತ್ತಷ್ಟು ಭಾರೀ ಹೈಪ್ ಸೃಷ್ಟಿಸುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.

‘ರೋಮಾಂಚಕ…’ ಹಾಡಿನಲ್ಲಿ ದುನಿಯಾ ವಿಜಯ್ ಅವರ ಪುತ್ರಿ ರಿತನ್ಯಾ ಹಾಗೂ ನವನಟ ಶಿಶಿರ್ ಬೈಕಾಡಿ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿರುವ ಈ ಹಾಡಿಗೆ ಸಂಚಿತ್ ಹೆಗ್ಡೆ ಮತ್ತು ಹರ್ಷಿಕಾ ಧ್ವನಿ ನೀಡಿದ್ದಾರೆ. ಇದು ಸಂಪೂರ್ಣ ರೊಮ್ಯಾಂಟಿಕ್ ಸ್ವರೂಪದ ಹಾಡಾಗಿದ್ದು, ಯುವ ಸಮೂಹವನ್ನು ಸೆಳೆಯಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.

ಇದನ್ನೂ ಓದಿ: ಯಶ್ Toxicಗೆ ಹೊಸ ‘ವಸಂತ’: ರುಕ್ಕು ನಯಾ ಲುಕ್ಕು

ಈ ಹಿಂದೆ ‘ಮರಳಿ ಮನಸಾಗಿದೆ…’ (ಸಾಹಿತ್ಯ: ನಾಗಾರ್ಜುನ ಶರ್ಮಾ, ಗಾಯನ: ಸಂಚಿತ್ ಹೆಗ್ಡೆ) ಹಾಗೂ ‘ಆಣೆ ಮಾಡಿ ಹೇಳುತೀನಿ…’ (ಗಾಯನ: ಹರ್ಷಿಕಾ) ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು. ಈ ಎರಡೂ ಹಾಡುಗಳ ನಿರ್ದೇಶಕರಾಗಿದ್ದವರು ಜಡೇಶ್. ಈಗ ಅವರದ್ದೇ ನಿರ್ದೇಶನದ ‘ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲಿ ಇದೇ ತ್ರಿವಳಿ ಜೋಡಿ ಮತ್ತೊಮ್ಮೆ ಒಂದಾಗಿರುವುದು ವಿಶೇಷ ಆಕರ್ಷಣೆಯಾಗಿದೆ.

ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಅವರ ಪಾತ್ರದ ‘ದಿ ರೂಲರ್’ ಲುಕ್ ಸಾಕಷ್ಟು ಸದ್ದು ಮಾಡಿತ್ತು.

ಹೊಸ ವರ್ಷದ ಮೊದಲ ಸ್ಟಾರ್ ಸಿನಿಮಾಗಳಲ್ಲಿ ಒಂದಾಗಿ ಬಿಡುಗಡೆಯಾಗುತ್ತಿರುವ ‘ಲ್ಯಾಂಡ್ ಲಾರ್ಡ್’ ಮೇಲೆ ಪ್ರೇಕ್ಷಕರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.