Home Advertisement
Home ನಮ್ಮ ಜಿಲ್ಲೆ ಧಾರವಾಡ ಖರ್ಗೆ ಕುಟುಂಬ ಅವಕಾಶ ಕಿತ್ತುಕೊಂಡಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಖರ್ಗೆ ಕುಟುಂಬ ಅವಕಾಶ ಕಿತ್ತುಕೊಂಡಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

0
58

ಖರ್ಗೆ ಕುಟುಂಬದಿಂದ ದಲಿತ ನಾಯಕರಿಗೆ ಅನ್ಯಾಯ: ಛಲವಾದಿ ಗಂಭೀರ ಆರೋಪ

ಧಾರವಾಡ: “ನಾನೂ ಸೇರಿದಂತೆ ಹಲವಾರು ದಲಿತ ಮುಖಂಡರ ಅವಕಾಶಗಳನ್ನು ಮಲ್ಲಿಕಾರ್ಜುನ ಖರ್ಗೆ ಕುಟುಂಬ ಕಿತ್ತುಕೊಂಡಿದೆ” ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್‌ ಖರ್ಗೆ ಅವರು ತಮ್ಮನ್ನು ‘ಅವಕಾಶವಾದಿ’ ಎಂದು ಕರೆದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಧಾರವಾಡದಲ್ಲಿ ಉಗ್ರಗೊಂಡ ಉದ್ಯೋಗಾಕಾಂಕ್ಷಿಗಳ ಹೋರಾಟ: ಸಚಿವರ ಭಾವಚಿತ್ರಗಳಿಗೆ ಚಪ್ಪಲಿ ಸೇವೆ

“ಖರ್ಗೆ ವಂಶಪಾರಂಪರ್ಯದ ಬಗ್ಗೆ ಮಾತನಾಡಿದರೆ ನನಗೆ ಕೋಪ ಬರುವುದಿಲ್ಲ. ಆದರೆ ನನ್ನ ನಾಲ್ಕು ದಶಕಗಳ ಕಾಂಗ್ರೆಸ್ ಸೇವೆಯ ಬಳಿಕ ನನಗೆ ಸಿಗಬೇಕಿದ್ದ ಅವಕಾಶಗಳನ್ನು ಖರ್ಗೆ ಕುಟುಂಬವೇ ತಪ್ಪಿಸಿತು. ನಿಮ್ಮ ತಂದೆ 60 ವರ್ಷ ರಾಜಕಾರಣದಲ್ಲಿ ಇದ್ದರೂ ರಾಜ್ಯದಲ್ಲಿ ಒಬ್ಬ ದಲಿತ ನಾಯಕನನ್ನಾದರೂ ಬೆಳೆಸಿದ ನಿದರ್ಶನವಿಲ್ಲ,” ಎಂದು ಅವರು ವಾಗ್ದಾಳಿ ನಡೆಸಿದರು.

ದಲಿತ ನಾಯಕರಿಗೆ ಅನ್ಯಾಯ : ಕಾಂಗ್ರೆಸ್‌ನಲ್ಲಿ ಮೂರು ಬಾರಿ ಗೆದ್ದಿರುವ ಪ್ರಸಾದ್ ಅಬ್ಬಯ್ಯ, ಎ. ನಾರಾಯಣಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಶಿವಣ್ಣ ಸೇರಿದಂತೆ ಹಲವು ದಲಿತ ಮುಖಂಡರನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂದು ಅವರು ಆರೋಪಿಸಿದರು. “ಮೂರು ಬಾರಿ ಗೆದ್ದಿರುವ ಪ್ರಿಯಾಂಕ ಖರ್ಗೆ ಮೂರೂ ಬಾರಿ ಸಚಿವರಾಗಿರುವುದು ಇದಕ್ಕೆ ಸಾಕ್ಷಿ,” ಎಂದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಸಹಪಾಠಿಗಳ ಥಳಿತಕ್ಕೆ 10ನೇ ತರಗತಿ ವಿದ್ಯಾರ್ಥಿ ಬಲಿ

ಕಲಬುರ್ಗಿಯಲ್ಲಿ ಖರ್ಗೆ ಅವರ ಆಪ್ತರಾಗಿದ್ದ ಧರ್ಮಸಿಂಗ್ ಅವರ ಪುತ್ರನನ್ನೂ ರಾಜಕೀಯವಾಗಿ ಹತ್ತಿಕ್ಕಲಾಗಿದೆ ಎಂದು ಚಲವಾದಿ ದೂರಿದರು.

ಆಸ್ತಿ ಆರೋಪಕ್ಕೆ ಉತ್ತರಿಸಲಿ: “ಇಂದು ಮೈಸೂರು, ಚಾಮರಾಜನಗರ, ಗುಲ್ಬರ್ಗ ಸೇರಿದಂತೆ ಹಲವೆಡೆ ನಿಮ್ಮ ಫೋಟೋ ಇಟ್ಟು ಮೆಟ್ಟಿನ ಪೂಜೆ ಮಾಡುತ್ತಿದ್ದಾರೆ. ಅದಕ್ಕೆ ಮೊದಲು ಉತ್ತರ ಕೊಡಿ. ಲಕ್ಷಾಂತರ ಕೋಟಿ ಆಸ್ತಿ ಮಾಡಿದ್ದೀರಿ ಎಂದು ಜನ ಮಾತಾಡುತ್ತಿದ್ದಾರೆ. ಆಸ್ತಿ ಎಲ್ಲಿಂದ ಬಂತು?” ಎಂದು ಪ್ರಶ್ನಿಸಿದರು.

ಹಿಂದುತ್ವದ ಕುರಿತು ಪ್ರತಿಕ್ರಿಯೆ : ಹಿಂದುಗಳ ಮೇಲಿನ ದೌರ್ಜನ್ಯಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಹಿಂದುತ್ವ ಈ ದೇಶದ ಅಸ್ಮಿತೆ. ನಾವು ಹಿಂದುತ್ವವನ್ನು ಅಸ್ಮಿತೆಯಾಗಿ ನೋಡುತ್ತೇವೆ. ಆದರೆ ಬೇರೆ ಧರ್ಮದವರನ್ನು ನಿಂದಿಸುವ ಕೆಲಸ ಮಾಡಿಲ್ಲ. ಕೆಲವು ದುಷ್ಟ ಶಕ್ತಿಗಳು ಹಿಂದುತ್ವದ ವಿರುದ್ಧ ಚಟುವಟಿಕೆ ನಡೆಸುತ್ತಿವೆ. ಕಾಂಗ್ರೆಸ್ ತತ್ವಗಳು ಸಮಾಜವನ್ನು ಒಡೆದು ಆಳುವ ರೀತಿಯಲ್ಲಿವೆ,” ಎಂದು ಆರೋಪಿಸಿದರು.

ಜನಪರ ಹೋರಾಟಕ್ಕೆ ಬೆಂಬಲ: ಇನ್ನಷ್ಟು ಜನಪರ ಹೋರಾಟ ನಡೆಸಲು ಕಾರ್ಯಕರ್ತರನ್ನು ಪ್ರೇರೇಪಿಸಲಾಗುವುದು ಎಂದು ಅವರು ಹೇಳಿದರು.

Previous articleಧಾರವಾಡ: ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ವಿಪಕ್ಷ ನಾಯಕರ ಎಂಟ್ರಿ
Next articleಮಂತ್ರಾಲಯದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್