Home Advertisement
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ತೆಕ್ಕಣನವರ್ ನೇಮಕ

ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ತೆಕ್ಕಣನವರ್ ನೇಮಕ

0
36

ದಾವಣಗೆರೆ: ದಾವಣಗೆರೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿ ಶೇಖರ್ ಹೆಚ್. ತೆಕ್ಕಣನವರ್ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರಸ್ತುತ ಇದ್ದ ಎಸ್ಪಿ ಉಮಾ ಪ್ರಶಾಂತ್ ಅವರನ್ನು ವರ್ಗಾವಣೆಗೊಳಿಸಿದ್ದು ಅವರಿಗಿನ್ನೂ ಸ್ಥಳ ನಿಯುಕ್ತಿಗೊಳಿಸಿಲ್ಲ. ನೂತನ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನಾಗಿ ಬೆಂಗಳೂರಿನ ಗುಪ್ತಚರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ತೆಕ್ಕಣ್ಣನವರ್ ಅವರನ್ನು ನಿಯೋಜಿಸಿದೆ.

ಬಾಗಲಕೋಟೆ ಜಿಲ್ಲೆಯವರಾದ ತೆಕ್ಕಣ್ಣನವರ್ ಪಶುವೈದ್ಯಕೀಯ ವಿಷಯದಲ್ಲಿ ಸ್ನಾತಕೋತ್ತರ ಪದವಿಧರರಾಗಿದ್ದಾರೆ. ತೀರ್ಥಹಳ್ಳಿ, ಹಿರಿಯೂರು ಉಪ ವಿಭಾಗದಲ್ಲಿ ಡಿವೈಎಸ್ಪಿ, ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಮೈಸೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಡಿಸಿಪಿ, ಬೆಂಗಳೂರು ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.

Previous articleಪಾದಯಾತ್ರಿಗಳ ಮೇಲೆ ಚಿರತೆ ದಾಳಿ: ಬಾಲಕನಿಗೆ ಗಾಯ
Next articleಆರ್‌ಸಿಪಿಎಲ್ ಸ್ವಾಧೀನಕ್ಕೆ ದಕ್ಷಿಣ ಭಾರತದ ಆರೋಗ್ಯ ಆಹಾರ ಬ್ರ್ಯಾಂಡ್ ʻಮನ್ನಾ’