ಶಾಸಕ ಹರೀಶ್ ವಿರುದ್ಧದ ಪ್ರಕರಣದಲ್ಲಿ ನನ್ನ ಹಸ್ತಕ್ಷೇಪವಿಲ್ಲ

0
2

ದಾವಣಗೆರೆ: ಈಗ ದಕ್ಷಿಣ ಉಪ ಚುನಾವಣೆ ಇರುವ ಹಿನ್ನೆಲೆಯಲ್ಲಿ‌ ಜನರಿಂದ ಸಿಂಪಥಿ ಗಿಟ್ಟಿಸಿಕೊಳ್ಳಲು ಬಿಜೆಪಿಗರು ಹೊರಬಂದು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಯಾರನ್ನೂ ಬಂಧಿಸುವಂತೆ ಹೇಳಿಲ್ಲ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಜ್ಜಿಯಲ್ಲಿ ನಡೆದ ಗಲಾಟೆಯಲ್ಲಿ ಪರಿಶಿಷ್ಟನೋರ್ವನಿಗೆ ನಿಂದಿಸಿರುವುದು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವುದರಿಂದ ಶಾಸಕ ಬಿ.ಪಿ. ಹರೀಶ್ ವಿರುದ್ಧ ಜಾತಿ ನಿಂದನೆ ದೂರು ದಾಖಲಾಗಿದೆ ಹೊರತು, ಇದರಲ್ಲಿ ನನ್ನ ಹಸ್ತಕ್ಷೇಪವಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ದೇಶಿ ಕೈಗಾರಿಕೆಗೆ ಬಲ: ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಗುರಿ

ಹರೀಶ್ ಒಬ್ಬ ಹುಚ್ಚ. ಆತನನ್ನ ಚಿಕ್ಕವಯಸ್ಸಿನಿಂದಲೂ ನೋಡುತ್ತಿದ್ದೇನೆ. ಅವನೊಂದಿಗೆ ಕ್ರಿಕೇಟ್ ಆಡುವಾಗಲೂ ಎಲ್ಲರ ಜತೆಗೆ ಇದೇ ರೀತಿ ಗಲಾಟೆ ಮಾಡುತ್ತಿದ್ದ ಎಂದು ದೂರಿದರು.

ನಾವು ಕಾನೂನು ಬಾಹಿರವಾಗಿ ಯಾವುದೇ ಮಣ್ಣನ್ನ ಹೊಡೆಸಿಲ್ಲ. ಅಕ್ಕಪಕ್ಕದ ರೈತರು ನಮ್ಮ ಜಮೀನಿಗೆ ಮಣ್ಣು ಹಾಕಿದ್ದಾರೆ. ಗುತ್ತಿಗೆದಾರರು ಮಣ್ಣು ಹಾಕಿದ್ದು ಅವರನ್ನೇ ಹೋಗಿ ಕೇಳಲಿ. ಚಿಕ್ಕಬಿದರಿಯ ಪ್ರಕರಣದ ಆದೇಶವೂ ಇನ್ನೇನು ಹೊರಬೀಳಲಿದೆ. ಏನೇ ಇದ್ದರೂ ಸಮಾಧಾನವಾಗಿ ಬಂದು ಕೇಳಲಿ ಉತ್ತರಿಸುತ್ತೇವೆ ಎಂದರು.

ಇದನ್ನೂ ಓದಿ: 3ನೇ ವರ್ಷವೂ ಭಾಷಣ ತಿರಸ್ಕರಿಸಿ ಹೊರ ನಡೆದ ರಾಜ್ಯಪಾಲರು

ಇಷ್ಟು ದಿನ ಇಲ್ಲದ ಮಾಜಿ ಸಂಸದರು ಈಗ ದಕ್ಷಿಣ ಉಪ ಚುನಾವಣೆ ಬರುತ್ತಿದ್ದಂತೆ ಗರಿಗರಿ ಅಂಗಿ ಹಾಕಿಕೊಂಡು ಹೊರಕ್ಕೆ ಬಂದಿದ್ದಾರೆ. ಇದು ರಾಜಕೀಯವಲ್ಲ. ರಾಜಕಾರಣಿಗಳಾದವರು ಅಭಿವೃದ್ಧಿ ಪರ ಬೆಂಬಲವಾಗಿ ನಿಲ್ಲಬೇಕು ಎಂದು ಜಿ.ಎಂ. ಸಿದ್ಧೇಶ್ವರ್ ಗೆ ಕುಟುಕಿದರು.

ಮೂರು‌ ಬಾರಿ ನಾನು ಮಂತ್ರಿಯಾಗಿದ್ದೇನೆ. ನನ್ನ ವಿರುದ್ಧ ಯಾವುದೇ ಕಪ್ಪುಚುಕ್ಕೆಯೂ ಇಲ್ಲ. ಅಧಿಕಾರಿಗಳು ಕಾನೂನು ರೀತಿ ನಡೆದುಕೊಳ್ಳುತ್ತಿದ್ದಾರೆ.ನಾನು ತಪ್ಪು ಮಾಡಿದರೆ ನನಗೆ ಶಿಕ್ಣೆಯಾಗಲಿದೆ. ಅದನ್ನು ಬಿಟ್ಟು ಅಧಿಕಾರಿಗಳಿಗೆ ಏಕವಚನದಲ್ಲಿ ಬೈಯುವುದು ಇದು ಸಂಸ್ಕಾರವಲ್ಲ. ಏನು ಕೆಲಸವಾಗಬೇಕು ಅದನ್ನು ಸಮಾಧಾನವಾಗಿ ಹೇಳಿದರೆ ಮಾಡೋಣ, ದಾದಾಗಿರಿಯೆಲ್ಲ ಸಾಕಷ್ಟು ನೋಡಿದ್ದೇವೆ.‌ ಇವೆಲ್ಲ ನಡೆಯುವುದಿಲ್ಲ ಎಂದರು.

Previous articleಪಕ್ಷದ ವಿಚಾರದಲ್ಲಿ ನಿತಿನ್ ನಬಿನ್ ನನಗೂ ಬಾಸ್: ನರೇಂದ್ರ ಮೋದಿ