Home Advertisement
Home ನಮ್ಮ ಜಿಲ್ಲೆ ದಾವಣಗೆರೆ AIಗೂ ಗೊತ್ತು ಗ್ಯಾರಂಟಿ ಗತ್ತು : “ಕರ್ನಾಟಕ ಮಾಡೆಲ್ ವಿಶ್ವಕ್ಕೆ ಮಾದರಿ”

AIಗೂ ಗೊತ್ತು ಗ್ಯಾರಂಟಿ ಗತ್ತು : “ಕರ್ನಾಟಕ ಮಾಡೆಲ್ ವಿಶ್ವಕ್ಕೆ ಮಾದರಿ”

0
90

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿರುವುದು ವಿಶ್ವಕ್ಕೆ ಮಾದರಿಯಾಗಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.

ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಖರಿ ಹಾಗೂ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿತ್ವವನ್ನು ವಿವರಿಸಿದರು.

AIಗೂ ಗೊತ್ತು ಕರ್ನಾಟಕದ ಗ್ಯಾರಂಟಿ ಗತ್ತು: ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಸ್ಸಾಂ ಚುನಾವಣೆಗೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆ (AI) ನೀಡಿದ ಸಲಹೆಯನ್ನೂ ಬಹಿರಂಗಪಡಿಸಿದರು. “ಎಐ ಕೂಡ ಕರ್ನಾಟಕ ಮಾಡೆಲ್ ಅನ್ನು ಅನುಸರಿಸಿ ಚುನಾವಣೆ ನಡೆಸಿ ಎಂದು ಸೂಚಿಸಿದೆ. ಇದು ನಮ್ಮ ಸರ್ಕಾರದ ಉತ್ತಮ ಕಾರ್ಯಕ್ಕೆ ಸಾಕ್ಷಿ” ಎಂದು ಅವರು ಹೇಳಿದರು.

ಬಿಜೆಪಿಯವರು ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಘೋಷಣೆ ಮಾಡಿದಂತೆ ಗ್ಯಾರಂಟಿ ಕೊಡಿ ಎಂದು ದುಂಬಾಲು ಬಿದ್ದರು. ಯಶಸ್ವಿಯಾಗಿ ಜಾರಿಗೊಳಿಸಿದ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ ಭ್ರಷ್ಟಾಚಾರ ನಡೆಯುತ್ತಿದೆ ಅಂತಿದ್ದಾರೆ. “ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಮನೆಗೆ ಸರಾಸರಿ ₹58 ಸಾವಿರ ಲಾಭ ತಲುಪಿದೆ. ಗೃಹಜ್ಯೋತಿ, ಅನ್ನಭಾಗ್ಯ, ವಿದ್ಯಾನಿಧಿ ಸೇರಿದಂತೆ ಹಲವು ಯೋಜನೆಗಳನ್ನು ನುಡಿದಂತೆ ಜಾರಿಗೊಳಿಸಿದ್ದೇವೆ” ಎಂದು ತಿಳಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಅವರು, “ರಾಜ್ಯದಿಂದ ಆಯ್ಕೆಯಾದ 19 ಸಂಸದರು ಕೇಂದ್ರದಿಂದ ಒಂದು ರೂಪಾಯಿಯಾದರೂ ಹೆಚ್ಚುವರಿ ಅನುದಾನ ತಂದಿದ್ರಾ? ಕರ್ನಾಟಕದ ವಿರುದ್ಧ ನಡೆಯುತ್ತಿರುವ ಮಲತಾಯಿ ಧೋರಣೆ ಬಗ್ಗೆ ಯಾಕೆ ಮೌನ?” ಎಂದು ಪ್ರಶ್ನಿಸಿದರು.

ತಮಿಳುನಾಡಿಗೆ ನೀಡಲಾಗುತ್ತಿರುವ ಅನುದಾನವನ್ನು ಉಲ್ಲೇಖಿಸಿದ ಅವರು, ಕರ್ನಾಟಕಕ್ಕೆ ಸಮರ್ಪಕ ಅನುದಾನ ಸಿಗುತ್ತಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಬಿಜೆಪಿ ನಾಯಕರು ಪ್ರಶ್ನಿಸದಿರುವುದನ್ನು ಖಂಡಿಸಿದ ಸಚಿವರು, ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪಿದ್ದರೆ ಶಿಕ್ಷೆಗೆ ಸಿದ್ಧ ಎಂದು ಸವಾಲು ಹಾಕಿದರು.