Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಕಾಂಗ್ರೆಸ್‌ನದ್ದು ಖಾಲಿ ಟ್ರಂಕ್ ಸರ್ಕಾರ

ಕಾಂಗ್ರೆಸ್‌ನದ್ದು ಖಾಲಿ ಟ್ರಂಕ್ ಸರ್ಕಾರ

0
13

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯ ಹಾಗೂ ಜನರ ಬಗ್ಗೆ ಕಾಳಜಿ ಇಲ್ಲ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ್ ಟೀಕಿಸಿದರು.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ರಾಜ್ಯದ ಖಜಾನೆಯನ್ನು ಖಾಲಿ ಮಾಡಿ ದೆಹಲಿಗೆ ಕಳಿಸಿದ್ದಾರೆ. ದುಡ್ಡು ಮಾಡುವುದೊಂದೇ ಇವರ ಉದ್ದೇಶ. ಕಾಂಗ್ರೆಸ್ ದುರಾಡಳಿತದ ಬಗ್ಗೆ ಜನರ ಮುಂದೆ ಹೋಗುತ್ತೇವೆ, ಇದೊಂದು ಖಾಲಿ ಟ್ರಂಕ್ ಸರ್ಕಾರ ಎಂದು ಲೇವಡಿ ಮಾಡಿದರು.

ಶಿವಲಿಂಗೇಗೌಡರ ಮಾತುಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಬ್ಯಾಲೆನ್ಸ್ ತಪ್ಪಿ ಮಾತನಾಡುತ್ತಾರೆ. ಪ್ರತಿಭಟನೆ ಮಾಡುತ್ತಿರುವ ಸಂಸದ ತೇಜಸ್ವಿ ಸೂರ್ಯರನ್ನು ಸಂವಿಧಾನ ವಿರೋಧವಾಗಿ ಬಂಧಿಸಿದ್ದಾರೆ ಎಂದರಲ್ಲದೆ, ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಗಳ ಪ್ರವಾಸ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.

Previous articleಮದಕರಿ ವಂಶಸ್ಥರಿಗಿಲ್ಲ ನೆಲೆ
Next articleಓದಿದ್ದು ಇಂಜಿನಿಯರಿಂಗ್, ಮಾಡ್ತಿರೋದು ಐಟಿ ಕೆಲಸ. ರಾತ್ರಿಯಾದ್ರೆ…