Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಪಂಚಮಸಾಲಿ ಹರ ಪೀಠದ ಮುಂಭಾಗದಲ್ಲಿ ಬಾರಿ ಹೈಡ್ರಾಮ..

ಪಂಚಮಸಾಲಿ ಹರ ಪೀಠದ ಮುಂಭಾಗದಲ್ಲಿ ಬಾರಿ ಹೈಡ್ರಾಮ..

0
35

ಹರಿಹರ: ನಗರದ ಹೊರವಲಯ ಶಿವಮೊಗ್ಗ ರಸ್ತೆಯ ಹನಗವಾಡಿ ಬಳಿ ಇರುವ ಪಂಚಮಸಾಲಿ ಹರಪೀಠದಲ್ಲಿ ಹಿಂದಿನಿಂದಲೂ ಹಗ್ಗ ಜಗ್ಗಾಟ ನಡೆದಿತ್ತು. ಸರ್ಕಾರದ ಹಾಗೂ ಭಕ್ತರ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ಆಡಳಿತಾಧಿಕಾರಿ ಡಾ. ರಾಜಕುಮಾರ ಆರೋಪಿಸಿದ್ದರು.

ಟ್ರಸ್ಟಿಗಳ ಹಾಗು ಆಡಳಿತಾಧಿಕಾರಿಗಳ ಮಧ್ಯ ಗಲಾಟೆ ನಡೆದು ಈ ಹಿಂದೆ ಪ್ರಕರಣವು ದಾಖಲಾಗಿತ್ತು. ಆದಾದ ನಂತರ ಸೋಮಣ್ಣ ಬೇವಿನಮರದ, ಅರುಣಕುಮಾರ ಪೂಜಾರ, ನಂದಿಹಳ್ಳಿ ಹಾಲಪ್ಪ ಸೇರಿದಂತೆ ಸಮಾಜದ ಮುಖಂಡರು ಲೆಕ್ಕಕೊಡಿ ಚಳುವಳಿ ಆರಂಭಿಸಿದ್ದರು. ಇದರ ಬೆನ್ನಲ್ಲೆ ಎರಡು ದಿನಗಳ ಹಿಂದೆ ಸೋಮಣ್ಣ ಬೇವಿನಮರದ ಬಣದಿಂದ ಪರಮೇಶ್ವರಗೌಡ್ರು, ಲೆಕ್ಕಕೊಡುವಂತೆ ಹಾಗೂ ಪಂಚಮಸಾಲಿ ಮುಖಂಡರಾದ ಎನ್.ಜಿ. ನಾಗನಗೌಡ್ರು ಸಮಾಜದ ಮಾನ ತೆಗೆಯೋದು ಬೇಡ ಕುಳಿತು ಮಾತಾಡಿ ಪರಿಹರಿಸೋಣ ಎಂದು ಪರಸ್ಪರ ಪತ್ರಿಕಾ ಪ್ರಕಟಣೆ ನೀಡಿದ್ದರು.

ಇದರ ಬೆನ್ನಲ್ಲೆ ಸೋಮವಾರ ಬೆಳಿಗ್ಗೆ ಬೆಳಿಗ್ಗೆ 10 ಗಂಟೆಯಿಂದಲೆ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಅರುಣಕುಮಾರ ಪೂಜಾರ, ಸೋಮಣ್ಣ ಬೇವಿನಮರದ, ಬಿ.ಜಿ. ಅಜಯಕುಮಾರ್.ಹೊಳೆಸಿರಿಗೆರೆ ಪರಮೇಶ್ವರಗೌಡ್ರು ಸೇರಿದಂತೆ ಸಮಾಜದ ಮುಖಂಡರು ಮಠದ ಮುಂದೆ ಜಮಾಯಿಸಿದ್ದರು. ಗಲಾಟೆ ಆಗಬಹುದು ಎಂಬ ಶಂಕೆಯಿಂದ ಪೊಲೀಸರು ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ದರು.

ಇದೆ ಸಂದರ್ಭದಲ್ಲಿ ಹೊಳೆಸಿರಿಗೆರೆ ಪರಮೇಶ್ವರಗೌಡರು ಅಸ್ವಸ್ಥರಾದ ಕಾರಣ ಅವರನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ. ಪೀಠದ ಟ್ರಸ್ಟಿಗಳಾದ ಬಿ.ಸಿ.ಉಮಾಪತಿ, ಚಂದ್ರಶೇಖರ ಪೂಜಾರ ಹಾಗೂ ಉಳಿದ ಟ್ರಸ್ಟ್ ಪದಾಧಿಕಾರಿಗಳು ಮಠದಲ್ಲಿ ಸಭೆ ಸೇರಿದ್ದಾರೆ. ಇದೆ ಸಂದರ್ಭದಲ್ಲಿ ಮಠದ ಆವರಣದ ಸುತ್ತಲೂ ಬಿಎನ್‌ಎಸ್ 163 ಸೆಕ್ಷನ್ ಜಾರಿ ಮಾಡಿ ನಿಷೇಧಾಜ್ಞೆ ಹೇರಿದ್ದಾರೆ.