ಸಾಮಾಜಿಕ ಜಾಲತಾಣಕ್ಕೆ ವೀಲಿಂಗ್ : ಪೊಲೀಸ್ ಬಲೆಗೆ ಸಿಕ್ಕ ಸವಾರ

0
58

ಬೆಳ್ತಂಗಡಿ: ರಸ್ತೆಗಳಲ್ಲಿ ಅಪಾಯಕಾರಿಯಾಗಿ ವೀಲಿಂಗ್ ಮಾಡಿ ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಯುವಕನನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 8ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ಜಂಕ್ಷನ್ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ಡ್ಯಾನಿ ಫ್ರಾನ್ಸಿಸ್ ತಾವ್ರೋ ಅವರು, ಹೆಲ್ಮೆಟ್ ಧರಿಸದೆ ನಿರ್ಲಕ್ಷ್ಯವಾಗಿ ವೀಲಿಂಗ್ ಮಾಡುತ್ತಿದ್ದ ಸವಾರನ ವಿರುದ್ಧ ವರದಿ ದಾಖಲಿಸಿದ್ದರು. ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ವೀಲಿಂಗ್ ಮಾಡಿ ಧರ್ಮಸ್ಥಳ ರಸ್ತೆಯ ಮೂಲಕ ಆತ ಪರಾರಿಯಾಗಿದ್ದ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ 59 ಲಕ್ಷ ಮೌಲ್ಯದ 24 ಕೆ.ಜಿ. ಬೆಳ್ಳಿ ಆಭರಣ ಕಳವು

ಈತನಿಂದ ವಿವಿಧ ಕಡೆಗಳಲ್ಲಿ ಅಪಾಯಕಾರಿ ವೀಲಿಂಗ್ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ಮಾ.2ರಂದು ಸಬ್ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಪಿ ಅವರ ನೇತೃತ್ವದ ತಂಡ ಬೆಳ್ತಂಗಡಿ–ಉಜಿರೆ ಭಾಗದಲ್ಲಿ ಕಾರ್ಯಾಚರಣೆ ನಡೆಸಿ, ಖಚಿತ ಮಾಹಿತಿಯ ಮೇರೆಗೆ ಉಜಿರೆ ಗ್ರಾಮದ ನಿವಾಸಿಯನ್ನು ಪತ್ತೆಹಚ್ಚಿದರು. ವೀಲಿಂಗ್‌ಗೆ ಬಳಸಿದ್ದ ಬೈಕ್‌ನ್ನು ವಶಕ್ಕೆ ಪಡೆದು ಕಲಂ 281 BNS ಹಾಗೂ 184, 189 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಕಲಬುರಗಿ: ಹುಸಿ ಬಾಂಬ್ ಬೆದರಿಕೆ – ಕೋರ್ಟ್ ಕಲಾಪ ರದ್ದು

ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ರೋಹಿಣಿ ಸಿ.ಕೆ. ಮತ್ತು ವೃತ್ತ ನಿರೀಕ್ಷಕ ರವಿ ಬಿ.ಎಸ್ ಮಾರ್ಗದರ್ಶನ ನೀಡಿದರು.