ಚಿತ್ರದುರ್ಗ(ಚಳ್ಳಕೆರೆ): “ವೈದ್ಯೋ ನಾರಾಯಣೋ ಹರಿಃ” ಎನ್ನುತ್ತಾರೆ. ಆದರೆ, ಇಲ್ಲಿ ದೇವಸ್ಥಾನವಿದ್ದರೂ ದೇವರೇ ಇಲ್ಲದಂತಾಗಿದೆ. ಎದೆನೋವಿನಿಂದ ನರಳಾಡುತ್ತಾ ಆಸ್ಪತ್ರೆಗೆ ಬಂದರೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ವೈದ್ಯರಿಲ್ಲದೆ ರೋಗಿ ಅಸುನೀಗಿದಿದ್ದಾರೆ.?
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭಾನುವಾರ ಚಿಕಿತ್ಸೆಗಾಗಿ ರೋಗಿಯನ್ನು ಕರೆತಂದರೆ ಚಿಕಿತ್ಸೆ ನೀಡಲು ವೈದ್ಯರಿಲ್ಲದೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಮೃತರ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ನಿವಾಸಿ ಎಸ್. ನಾಗರಾಜ್ (50) ಮೃತ ವ್ಯಕ್ತಿ. ಹೃದಯಘಾತದಿಂದ ಮೃತಪಟ್ಟಿದ್ದಾರೆ. ಜೊತೆಗೆ ವೈದ್ಯರು ಗೈರಾಗಿದ್ದಾರೆಂಬ ಸುದ್ದಿ ಹರಡುತ್ತಿದ್ದಂತೆ ಸಂಬಂಧಿಕರು, ಸ್ಥಳೀಯರು ಆಸ್ಪತ್ರೆ ಬಳಿ ಜಮಾಯಿಸಿ ಆಸ್ಪತ್ರೆ ಆವರಣದಲ್ಲಿ ಶವವನ್ನಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆ 7 ಗಂಟೆಗೆ ನಾಗರಾಜ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಕುಟುಂಬಸ್ಥರು ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತು ಚಿಕಿತ್ಸೆಗಾಗಿ ಕರೆತಂದಿದ್ದರು. ಆದರೆ, ಆ ನಿರ್ಣಾಯಕ ಸಮಯದಲ್ಲಿ ಯಾವುದೇ ವೈದ್ಯರು ಲಭ್ಯವಿರಲಿಲ್ಲ. ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಹೃದಯಾಘಾತದಿಂದ ನಾಗರಾಜ್ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಪತಿ ಪ್ರಾಣಬಿಟ್ಟದನ್ನು ಕಂಡು ಪತ್ನಿ ಹಾಗೂ ಮಕ್ಕಳ ರೋದನ ಮುಗಿಲು ಮುಟ್ಟಿತ್ತು. ಆಸ್ಪತ್ರೆಯ ಬಾಗಿಲಲ್ಲಿ ಮೃತದೇಹವನ್ನಿಟ್ಟುಕೊಂಡು ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆಡಳಿತ ವೈದ್ಯಾಧಿಕಾರಿ ಡಾ. ರೇಣುಪ್ರಸಾದ್, ಡಾ. ಅಭಿನವ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಕಾಶಿ ಪರಿಸ್ಥಿತಿ ಪರಿಶೀಲಿಸಿ, ತಿಳಿಗೊಳಿಸುವ ಕೆಲಸ ಮಾಡಿದರು. ಜೊತೆಗೆ ತುರ್ತು ಸಭೆ ನಡೆಸಿದರು.
ಮೃತರ ಸಂಬಂಧಿ ಟಿ. ಶಿವದತ್ತ ಮಾತನಾಡಿ, ಇದೇ ಮೊದಲ ಬಾರಿಯಲ್ಲ, ಈ ಹಿಂದೆಯೂ ವೈದ್ಯರಿಲ್ಲದೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ರಾತ್ರಿ ಬಂದರೆ ಇಲ್ಲಿ ವೈದ್ಯರಿರುವುದಿಲ್ಲ, ಕೇವಲ ಡಿ-ಗ್ರೂಪ್ ಮತ್ತು ನರ್ಸಿಂಗ್ ಸಿಬ್ಬಂದಿಗಳೇ ವೈದ್ಯರಂತೆ ಕಾರ್ಯನಿರ್ವಹಿಸುತ್ತಾರೆ. ಇಂದು ಸಮಯಕ್ಕೆ ಸರಿಯಾಗಿ ಡಾಕ್ಟರ್ ಇದ್ದಿದ್ದರೆ ಒಂದು ಜೀವ ಉಳಿಯುತ್ತಿತ್ತು ಎಂದು ಕಣ್ಣೀರು ಹಾಕಿದರು.
ಅಂದಾಜು 43 ಗ್ರಾಮಗಳ ಜನರು ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಕೋಟಿಗಟ್ಟಲೆ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವಿದ್ದರೂ, ರೋಗಿಗಳಿಗೆ ಮಾತ್ರ ಪ್ರಯೋಜನವಿಲ್ಲದಂತಾಗಿದೆ. ಗರ್ಭಿಣಿಯರನ್ನು ಪ್ರಾಥಮಿಕ ಚಿಕಿತ್ಸೆ ನೀಡದೆ ಚಳ್ಳಕೆರೆ ಅಥವಾ ಚಿತ್ರದುರ್ಗಕ್ಕೆ ಕಳುಹಿಸಲಾಗುತ್ತದೆ ಎಂದು ದೂರಿದರು.
ತನಿಖೆ ಬಳಿಕ ಸತ್ಯ: ನಾಗರಾಜ್ ಸಾವು ಅತ್ಯಂತ ದುಃಖಕರ. ಆದರೆ, ಹೃದಯಾಘಾತದಿಂದ ಮನೆಯಲ್ಲಿಯೇ ಅಥವಾ ಆಸ್ಪತ್ರೆಗೆ ಬಂದಾಗ ಮೃತಪಟ್ಟಿದ್ದಾರೆಯೇ ಎಂಬ ಕುರಿತು ಶವಪರೀಕ್ಷೆ ಬಳಿಕ ತಿಳಿಯಲಿದೆ ಎಂದು ಡಿಎಚ್ಒ ಡಾ. ರೇಣುಪ್ರಸಾದ್ ತಿಳಿಸಿದರು. ಈ ಮಧ್ಯೆ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದು ಸತ್ಯ. ಈ ಸಂಬಂಧ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಅಹಿತರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
























Alright mates, just had a spin at fortuneslotgame and gotta say, not too shabby! Selection of slots is decent, and I actually managed to snag a few quid. Worth a punt if you’re looking for a new place to try your luck!