ಹೊಸದುರ್ಗ: ತಾಲೂಕಿನ ಮತ್ತೋಡು ಹೋಬಳಿಯ ಕಂಚೀಪುರ ಗ್ರಾಮದಿಂದ ಹೊತ್ತರಗೊಂಡನಹಳ್ಳಿಗೆ ಟ್ರ್ಯಾಕ್ಟರ್‌ನಲ್ಲಿ ಹಸುಗಳಿಗೆ ಬೂಸಾ ಸಾಗಿಸುತ್ತಿದ್ದ ವೇಳೆ, ಬುಕ್ಕಸಾಗರದ ಸಮೀಪ ಗುರುವಾರ ರಾತ್ರಿ ಟ್ರ್ಯಾಕ್ಟರ್ ಪಲ್ಟಿ ಆದ ಪರಿಣಾಮ ಅವಳಿಗಳಿಬ್ಬರು ಸಾವನ್ನಪ್ಪಿದ್ದಾರೆ.
ತಾಲೂಕಿನ ಮತ್ತೋಡು ಹೋಬಳಿಯ ಹೊತ್ತರಗೊಂಡನಹಳ್ಳಿ ಗ್ರಾಮದ ಪ್ರದೀಪ್ (22), ಪ್ರವೀಣ್ (22) ಮೃತಪಟ್ಟಿದ್ದಾರೆ. ಇವರು ಗುರುವಾರ ರಾತ್ರಿ ಹಸುಗಳಿಗೆ ಬೂಸಾ ತರಲು ಕಂಚೀಪುರಕ್ಕೆ ತೆರಳಿದ್ದರು. ವಾಪಸ್ಸು ಬರುವಾಗ ಈ ಘಟನೆ ನಡೆದಿದೆ. ಈ ಕುರಿತು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









