Home Advertisement
Home ನಮ್ಮ ಜಿಲ್ಲೆ ಚಿಕ್ಕಮಗಳೂರು ದೆಹಲಿಗೆ ಹೋದರೆ ತಪ್ಪೇನು? ಹೋಗಬಾರದೆಂದು ಹೇಳಿದವರು ಯಾರು?

ದೆಹಲಿಗೆ ಹೋದರೆ ತಪ್ಪೇನು? ಹೋಗಬಾರದೆಂದು ಹೇಳಿದವರು ಯಾರು?

0
53

ಚಿಕ್ಕಮಗಳೂರು: ದೆಹಲಿಗೆ ಹೋದರೆ ತಪ್ಪೇನು? ಹೋಗಬಾರದೆಂದು ಹೇಳಿದವರು ಯಾರು? ಇದರಲ್ಲಿ ಯಾವುದೇ ತಂಟೆ-ತಕರಾರು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ಪುನಾರಚನೆ ಹಾಗೂ ಶಾಸಕರ ದೆಹಲಿ ಭೇಟಿ ವಿಚಾರವಾಗಿ ಅವರು ಎನ್.ಆರ್. ಪುರದಲ್ಲಿ ಭಾನುವಾರ ಸಂಜೆ ಪ್ರತಿಕ್ರಿಯೆ ನೀಡಿದರು.

ಪುನಾರಚನೆ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಸಾಮಾನ್ಯವಾಗಿ ಎರಡೂವರೆ ವರ್ಷಗಳ ಬಳಿಕ ಮಾಡಬೇಕಾಗುತ್ತದೆ. ಐದು ರಾಜ್ಯಗಳ ಚುನಾವಣೆ ಹಾಗೂ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಇದು ವಿಳಂಬವಾಗಿದೆ? ಎಂದು ಹೇಳಿದರು.

ರಾಜಕೀಯ ಕಾರ್ಯದರ್ಶಿಯ ರಾಜೀನಾಮೆ ಕುರಿತು ಪ್ರಶ್ನಿಸಿದಾಗ, ಇನ್ನೂ ರಾಜೀನಾಮೆ ಕೊಟ್ಟಿಲ್ಲ, ಕೊಡಬಹುದು ಎಂದು ನಾನು ಅಂದುಕೊಂಡಿದ್ದೇನೆ ಎಂದು ಹೇಳಿದರು. ಜೊತೆಗೆ ಹೈಕಮಾಂಡ್‌ನಿಂದ ಬಂದ ಇಂಚಾರ್ಜ್ ದಾವಣಗೆರೆ ಉಪಚುನಾವಣೆಯಲ್ಲಿ ಭಾಗವಹಿಸಿದ್ದರು. ಅವರ ವರದಿ ಆಧಾರವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪಕ್ಷ ಸೋಲಿನ ಕುರಿತು ಕೇಳಿದಾಗ, ಸಿಎಂ ಪ್ರತಿಕ್ರಿಯಿಸಿ, ʼತಲೆದಂಡ ಆದ್ರೆ ಸೋಲ್ತೀವಿ ಅಂತಾನೇ ನಾವು ಸೋಲನ್ನು ಒಪ್ಪಿಕೊಂಡಿಲ್ಲ. ಗೆಲ್ಲೋದು ನಾವೇ. ನಮ್ಮವರೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಹೇಳಿದ್ದೇನೆ ಹೊರತು ನಾವು ಸೋಲುತ್ತೇವೆ ಎಂದಿಲ್ಲʼ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.