ಚಿಕ್ಕಮಗಳೂರು: ಕಾಡಾನೆ ದಾಳಿಗೆ ಇಬ್ಬರು ಬಲಿ

0
22

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಸಿಲುಕಿ ಇಬ್ಬರು ಮೃತಪಟ್ಟಿರುವ ಘಟನೆ ಶೃಂಗೇರಿ ತಾಲೂಕಿನ ಕೆರೆ ಗ್ರಾ.ಪಂ. ಮೂಡುಬ ಗ್ರಾಮದ ಎಲ್ಸಾರ್ ಬಳಿ ನಡೆದಿದೆ.

ಹರೀಶ್ ಶೆಟ್ಟಿ ಮತ್ತು ಉಮೇಶ್ ಗೌಡ ಆನೆ ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಿಗ್ಗೆ ಕಾಡಿಗೆ ಸೊಪ್ಪು ತರಲು ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಹರೀಶ್ ಶೆಟ್ಟಿ ಪತ್ನಿ ಇಬ್ಬರು ಪುತ್ರಿಯರು ಇದ್ದಾರೆ. ಹಾಗೇ ಉಮೇಶ್ ಗೌಡ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.

ಬೆಳಗಿನ ಜಾವ 7 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಜನರು ಆಕ್ರೋಶ ಭರಿತರಾ ಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬರುವಂತೆ ಪಟ್ಟು ಹಿಡಿದಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳ ಉಪಟಳ ಅನೇಕ ವರ್ಷಗ ಳಿಂದ ನಡೆಯುತ್ತಿದ್ದು. ಇದುವರೆಗೂ ಅನೇಕರ ಜೀವ ಬಲಿ ಪಡೆದುಕೊಂಡಿವೆ.

Previous articleಸಿಎಂ ಕುರ್ಚಿಯಾಟ: ಸಿದ್ದರಾಮಯ್ಯರೇ ಅಧಿಪತಿ, ಹೈಕಮಾಂಡ್ ಮುಂದಿರುವ 5 ಪ್ರಬಲ ಅಸ್ತ್ರಗಳು
Next article18 ವರ್ಷಗಳ ಬಳಿಕ ರಿಲೀಸ್‌ಗೆ ಸಜ್ಜಾದ ‘ರಕ್ತ ಕಾಶ್ಮೀರ’

LEAVE A REPLY

Please enter your comment!
Please enter your name here