ಮದ್ದೂರು ಗಲಭೆ: ಹಿಂದೂಗಳ ಬಂಧನ, ಸಚಿವರ ಸ್ಪಷ್ಟನೆ

0
37

ಚಿಕ್ಕಮಗಳೂರು: ಮಂಡ್ಯದ ಮದ್ದೂರು ಗಣಪತಿ ಗಲಾಟೆ ಪ್ರಕರಣದಲ್ಲಿ ಸ್ವಲ್ಪ ವೈಫಲ್ಯದ ಅನುಮಾನ ಇದ್ದು ತನಿಖೆ ಆಗುವವರೆಗೂ ಏನೂ ಹೇಳುವುದಿಲ್ಲ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಪೂರ್ಣ ಮಾಹಿತಿ ಪಡೆದ ಬಳಿಕ ಎಲ್ಲದರ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಗ್ಯಾರಂಟಿ ಎಂದರು.

ಚಿಕ್ಕಮಗಳೂರಲ್ಲಿ ಮಂಡ್ಯ ಉಸ್ತುವಾರಿ ಸಚಿವರು ಆದ ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ ಬಿಜೆಪಿ-ಜೆಡಿಎಸ್‌ನವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಹಿಂದೂಗಳನ್ನು ಅರೆಸ್ಟ್ ಮಾಡಿಲ್ಲ, ಯಾರ ಮೇಲೂ ಎಫ್.ಐ.ಆರ್. ಹಾಕಿಲ್ಲ. ಪೂರ್ಣ ಪ್ರಮಾಣದಲ್ಲಿ ಮುಸ್ಲಿಂ ಕಡೆಯಿಂದಲೇ ಗಲಾಟೆ ಆಗಿದ್ದು ಹಲವರನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮದ್ದೂರಿನ ಶಾಂತಿ ಸಭೆಗೆ ಬಿಜೆಪಿಯವರು ಗೈರಾದರೆ ಏನಂತೆ ಜನ ಹಾಜರಿದ್ದರಲ್ಲ, ಎರಡೂ ಕೋಮುವಿನ ಜನ ಸಮಾಧಾನದಿಂದ ಇದ್ದರೆ ಅದೇ ಸಮಾಧಾನ ಎಂದು ಹೇಳಿದರು. ಅವರಿಗೆ ಶಾಂತಿ ಬೇಕಿಲ್ಲ, ಅದಕ್ಕೆ ಶಾಂತಿ ಸಭೆಗೆ ಬಂದಿಲ್ಲ, ಅವರಿಗೆ ಶಾಂತಿಯೇ ಬೇಕಿಲ್ಲ ಹೇಗೆ ಬರ್ತಾರೆ ಎಂದೂ ಪ್ರಶ್ನಿಸಿದರು.

ಕ್ರಮ ತೆಗೆದುಕೊಂಡು ಮೇಲೂ ಸಭೆ ಮಾಡ್ತಿರೋದು ರಾಜಕೀಯ. ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ ಎಂದು ಬಿಜೆಪಿಯಿಂದ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ಬಗ್ಗೆ ಪ್ರಸ್ತಾಪಿಸಿ ಬಿಜೆಪಿಯವರಿಗೆ ನಾಚಿಕೆ ಆಗಬೇಕು, ಅವರ ಕಾಲದಲ್ಲಿ ಈ ರೀತಿ ಘಟನೆ ಎಷ್ಟು ಆಗಿಲ್ಲ ಎಂದು ಪ್ರಶ್ನೆ ಹಾಕಿದರು.

ಕಾಂಗ್ರೆಸ್ ಬಂದಾಗಲೇ ಹೀಗೆ ಆಗುತ್ತೆ ಅನ್ನೋದು ಸುಳ್ಳು, ಅವರು ಒಮ್ಮೆ ಹಿಂದೆ ತಿರುಗಿ ನೋಡಲಿ. ಬಂಧಿತರಲ್ಲಿ ಇಬ್ಬರು ಚನ್ನಪಟ್ಟಣದವರು, ಉಳಿದವರೆಲ್ಲ ಮದ್ದೂರು ಟೌನ್‌ನವರು ಎಂದರು. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಪ್ರಕರಣದ ಬಗ್ಗೆ ಮಾತನಾಡಿ ಸತ್ಯ ಗೊತ್ತಾಗಬೇಕು, ಧಾರ್ಮಿಕ ಸ್ಥಳಕ್ಕೆ ಕಳಂಕ ಇರಬಾರದು ಎನ್ನುವ ಉದ್ದೇಶದಿಂದ ಎಸ್.ಐ.ಟಿ. ತನಿಖೆ ನಡೆಯುತ್ತಿದೆ, ತನಿಖೆ ಕುರಿತ ಹೆಚ್ಚು ಮಾಹಿತಿ ಗೃಹ ಸಚಿವರು ಹೇಳಬೇಕೆಂದರು. ನಾವೂ ಮಂಜುನಾಥ ಸ್ವಾಮಿ-ಶಿವನ ಭಕ್ತರೇ, ಅವರಿಗೆ ಮಾತ್ರ ಮಂಜುನಾಥನ ಪ್ರತಿ ಪಕ್ಷಗಳಿಗೆ ಗುತ್ತಿಗೆ ಕೊಟ್ಟಿಲ್ಲ, ಸರ್ಕಾರದ ವಿರುದ್ಧ ಮಾತನಾಡಲು ವಿಷಯ ಇಲ್ಲದೆ ಈ ವಿಷಯ ಮುಖ್ಯವಾಗಿದೆ ಎಂದರು.

Previous articleಮಂಗಳೂರು: ಸುಗಂಧ ದ್ರವ್ಯ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ
Next articleಹುಬ್ಬಳ್ಳಿ : ‘ನಮೋ ಯುವ ಓಟ’ ಅಭಿಯಾನಕ್ಕೆ ಚಾಲನೆ – ಸೆಪ್ಟೆಂಬರ್ 21ರಂದು ರಾಷ್ಟ್ರವ್ಯಾಪಿ ಕಾರ್ಯಕ್ರಮ

LEAVE A REPLY

Please enter your comment!
Please enter your name here