2ನೇ ಗಂಡನಿಗೂ ಕೈಕೊಟ್ಟು ವಿವಾಹಿತ ಪೊಲೀಸಪ್ಪನ ಜತೆ ಮಹಿಳೆ ಎಸ್ಕೆಪ್!

0
1

ಬೆಂಗಳೂರು: ಎರಡನೇ ಗಂಡನನ್ನು ಬಿಟ್ಟು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಪೊಲೀಸ್ ಕಾನ್ಸ್‌ಟೆಬಲ್ ಜೊತೆ ಮಹಿಳೆ ಪರಾರಿಯಾಗಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ನಡೆದಿದೆ.

ಚಂದ್ರಾಲೇಔಟ್‌ನ ನಿವಾಸಿ ಮೋನಿಕಾ ಎಂಬುವರು ಎಚ್‌ಎಸ್‌ಆರ್ ಲೇಔಟ್‌ನ ಕಾನ್ಸ್‌ಟೆಬಲ್ ರಾಘವೇಂದ್ರ ಜೊತೆ ಪ್ರೀತಿಯಲ್ಲಿ ಬಿದ್ದು ಎರಡನೇ ಗಂಡನನ್ನು ಬಿಟ್ಟು ಪರಾರಿಯಾಗಿದ್ದಾಳೆ. ಇನ್ನು ರಾಘವೇಂದ್ರಗೆ ಮದುವೆಯಾಗಿ ಒಬ್ಬಳು ಮಗಳಿದ್ದರೇ, ಮೋನಿಕಾಗೆ 12 ವರ್ಷದ ಓರ್ವ ಮಗನಿದ್ದಾನೆ.

ಪರಾರಿಯಾಗುವ ಮುನ್ನ 2ನೇ ಗಂಡನ ಮನೆಯಿಂದ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಹಣ ದೋಚಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ವಿಡಿಯೋಗಳನ್ನು ಮಾಡುವ ಮೂಲಕ ಪರಿಚಯ ಬೆಳೆಸಿಕೊಂಡಿದ್ದರು. ದಿನ ಕಳೆದಂತೆ ಈ ಪರಿಚಯವು ಪ್ರೀತಿಗೆ ತಿರುಗಿ, ಇಬ್ಬರೂ ಓಡಿಹೋಗಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಹಾವಿನ ವಿಷ ಪತ್ತೆಗೆ ಕನ್ನಡಿಗನಿಂದ ಸೋವಿ ಕಿಟ್!

ಮೋನಿಕಾ ಅವರು ಯುಬಿಎಸ್ ಲೇಔಟ್ ಠಾಣೆಯಲ್ಲಿ ತಮ್ಮ ಎರಡನೇ ಗಂಡನ ವಿರುದ್ಧ ಕಿರುಕುಳದ ದೂರು ನೀಡಿದ್ದರು. ಮೋನಿಕಾ ದೂರಿನ ಮೇರೆಗೆ ಪೊಲೀಸರು ಪತಿಯನ್ನು ಠಾಣೆಗೆ ಕರೆಸಿ ಬುದ್ದಿಹೇಳಿ ಕಳುಹಿಸಿದ್ದರು. ಆದರೆ, ಮೋನಿಕಾ ಇದಾದ ಬಳಿಕ ಮನೆಯಲ್ಲಿದ್ದ 160 ಗ್ರಾಂ ಚಿನ್ನಾಭರಣ ಮತ್ತು 1.80 ಲಕ್ಷ ನಗದು ತೆಗೆದುಕೊಂಡು ಪೊಲೀಸ್ ಪೇದೆ ರಾಘವೇಂದ್ರ ಜೊತೆ ಪರಾರಿಯಾಗಿದ್ದಾಳೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಈ ಕುರಿತು ಮೋನಿಕಾ ಪತಿ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಗಂಭೀರತೆಯನ್ನು ಅರಿತ ಹಿರಿಯ ಪೊಲೀಸ್ ಅಧಿಕಾರಿಗಳು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕಾನ್ಸ್‌ಟೆಬಲ್ ರಾಘವೇಂದ್ರ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Previous articleಆಳಂದ ಮತಗಳವು ಕೇಸಲ್ಲಿ ಗುತ್ತೇದಾರ್, ಪುತ್ರ ಆರೋಪಿ