Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ

ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ

0
7

ಬೆಂಗಳೂರು: ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರ್ಥಿಕ ಸಮೀಕ್ಷೆ ವರದಿ ಹೊರಗೆ ಬಂದಿದೆ. ಭಾರತವು ಕಳೆದ ಕೊವಿಡ್ ನಂತರದ ವರ್ಷಗಳಲ್ಲಿ ಆರ್ಥಿಕವಾಗಿ ಬೆಳೆಯಲು ಹೇಗೆ ಸಾಧ್ಯವಾಗಿದೆ ಎಂಬುದನ್ನು ಈ ವರದಿ ಸ್ಪಷ್ಟವಾಗಿ ಹೇಳುತ್ತದೆ. ಮುಂದಿನ ವರ್ಷ ಶೇ 7.4ರಷ್ಟು ಆರ್ಥಿಕ ಬೆಳವಣಿಗೆ ಆಗುತ್ತಿರುವುದು ಕೇಂದ್ರ ಸರಕಾರ ತೆಗೆದುಕೊಂಡ ನಿರ್ಣಯಗಳೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು‌, ಇಡೀ ಜನಗತ್ತಿನಲಿ ಆರ್ಥಿಕ ಸಂಕಷ್ಟ ಇರುವಂಥ ಸಂದರ್ಭದಲ್ಲಿ ಭಾರತದಲ್ಲಿ ಆರ್ಥಿಕ ಬೆಳವಣಿಗೆ ಆಗುತ್ತಿರುವುದು ದೇಶ ಬೆಳವಣಿಗೆ ಹೊಂದುತ್ತಿರುವುದು ಕಾಣುತ್ತದೆ. ಕಳೆದ ವರ್ಷ ಜಿಎಸ್‌ಟಿಯಲ್ಲಿ ಸುಧಾರಣೆ ತಂದಿರುವುದರಿಂದ ಜನರ ಕೈಯಲ್ಲಿ ಹಣ ಬರುತ್ತಿರುವುದರಿಂದ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ. ಅದೇ ರೀತಿ ಕಳೆದ ವರ್ಷ ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಕಡಿತ ಮಾಡಿ ಇನ್‌ಕಮ್ ಟ್ಯಾಕ್ಸ್ ರಿಯಾಯ್ತಿ ನೀಡಿರುವುದನ್ನು ಜನರು ಸದುಪಯೋಗ ಪಡೆಸಿಕೊಂಡಿದ್ದು, ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಮೂರನೆಯದ್ದು ವಿತ್ತಿಯ ಕೊರತೆ 9.2 ಇದ್ದಿದ್ದು 4.4 ಗೆ ಇಳಿದಿರುವುದು ಆರ್ಥಿಕ ನಿರ್ವಹಣೆಯಲ್ಲಿ ಸಮತೋಲನ ಕಾಯ್ದುಕೊಂಡಿರುವುದನ್ನು ತೋರಿಸುತ್ತದೆ. ಅದೇ ರೀತಿ ಹಣದುಬ್ಬರ ಕಡಿಮೆಯಾಗಿ ಬೆಲೆ ಏರಿಕೆ ನಿಯಂತ್ರಣದಲ್ಲಿದ್ದು ಆರ್ಥಿಕ ಬಳವಣಿಗೆಯಾಗಿರುವುದು ಒಳ್ಳೆಯ ಲಕ್ಷಣ ಕೂಡ. ಅದೇ ರೀತಿ ವಿದೇಶಿ ಬಂಡವಾಳ ಕೂಡ ಹೆಚ್ಚಳವಾಗಿದೆ. ಮತ್ತು ಯುರೋಪಿಯನ್ ಟ್ರೇಡ್ ಯೂನಿಯನ್ ಜೊತೆ ಒಪ್ಪಂದ ಮುಂಬರುವ ಅಮೇರಿಕ ಜೊತೆಗಿನ ಒಪ್ಪಂದ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಬಲ ತುಂಬುವುದು ಈಗಾಗಲೇ ವರದಿಯಲ್ಲಿ ಹೇಳಿರುವುದು. ಇದರಿಂದ ಕಳೆದ ಹಲವಾರು ವರ್ಷಗಳಲ್ಲಿ ಆರ್ಥಿಕ ಮೂಲಭೂತ ಸೌಕರ್ಯಗಳಿಗೆ ಸರ್ಕಾರ ಹೂಡಿಕೆ ಮಾಡಿದೆ. ಅದರ ಲಾಭ ಬರುವಂತ ದಿನಗಳಲ್ಲಿ ಆಗುತ್ತದೆ ಎನ್ನುವ ನಿರೀಕ್ಷೆ ಈ ರಿಪೋರ್ಟ್‌ನಲ್ಲಿ ಇರುವುದರಿಂದ ಒಂದು ಸದೃಢವಾಗಿರುವ ಆರ್ಥಿಕ ನಿರ್ವಹಣೆ ಮತ್ತು ಆರ್ಥಿಕ ಬೆಳವಣಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಭಲ ನಾಯಕತ್ವದಿಂದ ಎನ್ನುವಂಥದ್ದು ಸ್ಪಷ್ಟ. ಇದು ಬರುವಂತ ದಿನಗಳಲ್ಲಿ ಮುಂದುವರೆದರೆ ಭಾರತ ಜಗತ್ತಿನ ಮೂರನೇ ಆರ್ಥಿಕ ಶಕ್ತಿ ಆಗುವಂಥದ್ದು ಖಂಡಿತವಾಗಿದೆ. ಇದು ಒಳ್ಳೆಯ ಬೆಳವಣಿಗೆ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

Previous articleಅಧಿವೇಶನದ ನಡುವೆ ಪ್ರಧಾನಿ – ಮಾಜಿ ಪ್ರಧಾನಿ ಮಹತ್ವದ ಭೇಟಿ
Next articleಬಂಗಾರಿ ಮೂಲಕ ಹೈಪ್ ಕ್ರಿಯೇಟ್ ಮಾಡಿದ ‘ಘಾರ್ಗಾ’ ಬುಲ್ ಬುಲ್