Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಗಣರಾಜ್ಯೋತ್ಸವ: ರಾಜ್ಯದ ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಗಣರಾಜ್ಯೋತ್ಸವ: ರಾಜ್ಯದ ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

0
3

ಬೆಂಗಳೂರು: ಗಣರಾಜ್ಯೋತ್ಸವ ನಿಮಿತ್ತ ದೇಶದ ಪೊಲೀಸ್ ಸಿಬ್ಬಂದಿಗೆ ಕೊಡಮಾಡುವ ಶೌರ್ಯ ಮತ್ತು ಸೇವಾ ಪದಕಗಳಿಗೆ ದೇಶದ 982 ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ.

ಈ ಗೌರವಕ್ಕೆ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ, ನಾಗರಿಕ ರಕ್ಷಣಾ ಮತ್ತು ತಿದ್ದುಪಡಿ ಸೇವೆಗಳ ಸಿಬ್ಬಂದಿಯನ್ನ ಆಯ್ಕೆ ಮಾಡಲಾಗಿದ್ದು, ಕರ್ನಾಟಕದ ಇಬ್ಬರು ಅಧಿಕಾರಿಗಳಿಗೆ ಉತ್ತಮ ಸೇವೆಗಾಗಿ ರಾಷ್ಟ್ರಪತಿ ಪದಕ ಘೋಷಿಸಲಾಗಿದೆ.

ಐಪಿಎಸ್ ಅಧಿಕಾರಿ ಮಾನವ ಹಕ್ಕುಗಳ ಎಡಿಜಿಪಿ ದೇವಜ್ಯೋತಿ ರೈ ಮತ್ತು ಬೆಂಗಳೂರಿನ ಹಲಸೂರಿನ ಎಸಿಪಿ ರಂಗಪ್ಪ ಟಿ ಇವರಿಗೆ ಉತ್ತಮ ಸೇವೆಗಾಗಿ ರಾಷ್ಟ್ರಪತಿ ಪದಕ ಲಭಿಸಿದೆ. ಇವರೊಂದಿಗೆ ರಾಜ್ಯದ ಒಟ್ಟು 22 ಅಧಿಕಾರಿಗಳಿಗೆ ಗಣರಾಜ್ಯೋತ್ಸವ ಪದಕ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ಅವಕಾಶ

ಈ ಬಾರಿ ಘೋಷಣೆ ಮಾಡಲಾದ ಪಟ್ಟಿಯಲ್ಲಿ ಒಟ್ಟು 101 ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ 125 ಶೌರ್ಯ ಪದಕ, 756 ವಿಶಿಷ್ಟ ಸೇವಾ ಪದಕ ಸಹ ಸೇರಿವೆ.

ಶ್ಲಾಘನೀಯ ಸೇವಾ ಪದಕ ಪಡೆದವರ ಪಟ್ಟಿ
ಐಜಿಪಿ ಅಮಿತ್ ಸಿಂಗ್
ಐಜಿಪಿ ಚೇತನ್ ಸಿಂಗ್ ರಾಥೋರ್
ಡಿಐಜಿ ಸೀಮಾ ಲಾಟ್ಕರ್
ಎಸ್‌ಪಿ ಸವಿತಾ ಶ್ರೀನಿವಾಸ್
ಎಎಸ್‌ಪಿ ಪುಟ್ಟಮಾದಯ್ಯ
ಎಎಸ್‌ಪಿ ನಾಗಪ್ಪ ನವೀನ್ ಕುಮಾರ್
ಡಿಸಿಪಿ ರಾಜಾ ಇಮಾಂ ಖಾಸೀಂ ಪಿಂಜಾರ್
ಡಿಎಸ್‌ಪಿ ಹನುಮಂತರಾಯ
ಎಸ್‌ಪಿ ಸಿ.ಎ. ಸೈಮನ್
ಇನ್ಸ್‌ಪೆಕ್ಟರ್ ಮೊಹಮ್ಮದ್ ಎಂ.ಎ.
ಇನ್ಸ್‌ಪೆಕ್ಟರ್ ಶಿವಸ್ವಾಮಿ ಸಿ.ಬಿ.
ಇನ್ಸ್‌ಪೆಕ್ಟರ್ ಎಂ.ಎಂ. ತಹಶೀಲ್ದಾರ್
ಇನ್ಸ್‌ಪೆಕ್ಟರ್ ಎಸ್.ಕೆ. ಬ್ಯಾಕೋಡ್
ಇನ್ಸ್‌ಪೆಕ್ಟರ್ ಕಾಶಿನಾಥ್ ಬಿ.
ಪಿಎಸ್ಐ ವೈಲೆಟ್ ಫೆಮಿನಾ
ಪಿಎಸ್ಐ ಶಕುಂತಲಾ ಎಚ್‌.ಕೆ
ಪಿಎಸ್ಐ ಹರ್ಷ ನಾಗರಾಜ್
ಎಎಸ್ಐ ಸಿದ್ಧರಾಜು ಜಿ.
ಎಎಸ್ಐ ಎಚ್‌.ಡಿ. ಈರಪ್ಪ
ಹೆಡ್ ಕಾನ್ಸ್‌ಟೇಬಲ್ ಬಸವರಾಜ್ ಎಂ
ಅಗ್ನಿಶಾಮಕ ಇಲಾಖೆಯಿಂದ ಅಸಿಸ್ಟೆಂಟ್ ಫೈರ್ ಸ್ಟೇಷನ್ ಆಫೀಸರ್ ಗುರುಸ್ವಾಮಿ
ಲೀಡಿಂಗ್ ಫೈರ್‌ಮ್ಯಾನ್ ಅರುಣ್ ಸಿ. ನಾಯ್ಕ್
ಗೃಹರಕ್ಷಕ ದಳದಿಂದ ಕಮಾಂಡಿಂಗ್ ಆಫೀಸರ್ ಸುನಂದ್ ಸಂಪತ್
ಕಮಾಂಡಿಂಗ್ ಆಫೀಸರ್ ಬಾಲಾಜಿ ಶ್ರೀನಿವಾಸನ್
ಪ್ಲಟೂನ್ ಕಮಾಂಡರ್ ಮಲಾಲಿ ಗೌಡ
ಪ್ಲಟೂನ್ ಕಮಾಂಡರ್ ವಾದಿರಾಜ್ ನಾರಾಯಣ್ ರಾವ್ ದೇಶಪಾಂಡೆ
ಸಹಾಯಕ ಅಧೀಕ್ಷಕ ಪರಮೇಶ್ ಎಚ್‌.ಎ.

Previous articleಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ಅವಕಾಶ