ಬೆಂಗಳೂರು: ವಿಶ್ವದ ಅತಿದೊಡ್ಡ ವೃತ್ತಿಪರ ನೆಟ್‌ವರ್ಕ್ ಲಿಂಕ್ಡ್‌ಇನ್ ತನ್ನ ವಾರ್ಷಿಕ ರ‍್ಯಾಂಕಿಗ್ ಕಾರ್ಯಕ್ರಮದಡಿ 2025ರ ಬೆಂಗಳೂರಿನ ಟಾಪ್ 10 ಸ್ಟಾರ್ಟಪ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿ ಉದ್ಯೋಗಿಗಳ ಬೆಳವಣಿಗೆ, ತೊಡಗಿಸಿಕೊಳ್ಳುವಿಕೆ, ಉದ್ಯೋಗಾಸಕ್ತಿ ಮತ್ತು ಪ್ರತಿಭೆಗಳ ಆಕರ್ಷಣೆ ಸೇರಿದಂತೆ ಹಲವು ಅಂಶಗಳನ್ನು ಆಧಾರ ಮಾಡಿಕೊಂಡು ಸಿದ್ಧಗೊಂಡಿದೆ.
ಪಟ್ಟಿಯಲ್ಲಿ ಕ್ವಿಕ್-ಕಾಮರ್ಸ್ ದಿಗ್ಗಜ ಝೆಪ್ಟೋ (#1) ಮೊದಲ ಸ್ಥಾನದಲ್ಲಿದ್ದು, ನಂತರ ಸ್ಪ್ರಿಂಟೋ (#2) ಮತ್ತು ಸ್ವಿಶ್ (#3) ಕಂಪನಿಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿವೆ. Bengaluru ಸ್ಟಾರ್ಟಪ್‌ಗಳ ನಾವೀನ್ಯತೆ, ತಂತ್ರಜ್ಞಾನ ಮತ್ತು ಗ್ರಾಹಕಕೇಂದ್ರಿತ ಸೇವೆಗಳ ಶಕ್ತಿಯನ್ನು ಈ ಪಟ್ಟಿ ಮತ್ತೊಮ್ಮೆ ಪ್ರತಿಬಿಂಬಿಸುತ್ತದೆ.
ನಗರದ ಸ್ಟಾರ್ಟಪ್ ಪರಿಸರದಲ್ಲಿ ‘ಕ್ವಿಕ್ ಎಕಾನಮಿ’ ವಿಭಾಗವು ಪ್ರಮುಖ ಸ್ಥಾನ ಪಡೆದಿದ್ದು, ಝೆಪ್ಟೋ ಮತ್ತು ಸ್ವಿಶ್ ಎರಡೂ ಕಂಪನಿಗಳು ವೇಗದ ವಿತರಣೆ ಸೇವೆಯಲ್ಲಿ ಕ್ರಾಂತಿ ತಂದಿವೆ. ಫಿನ್‌ಟೆಕ್ ವಿಭಾಗದಲ್ಲಿ ಕ್ರೆಡ್ (#4) ಮತ್ತು ಜ್ಯುಪಿಟರ್ (#7) ಮುಂಚೂಣಿಯಲ್ಲಿವೆ. ಎಂಟರ್‌ಪ್ರೈಸ್ ಟೆಕ್ ವಿಭಾಗದಲ್ಲಿನ ಲ್ಯೂಸಿಡಿಟಿ (#5) ಹಾಗೂ ಬೈಟ್‌ಸ್ಪೀಡ್ (#10) ಹೊಸ ತಂತ್ರಜ್ಞಾನದಲ್ಲಿ ಗಮನಾರ್ಹ ಸಾಧನೆ ಮಾಡಿವೆ.
ಗ್ರಾಹಕ ಬ್ರ್ಯಾಂಡ್‌ಗಳಲ್ಲೂ ಗಿವಾ (#8) ಮತ್ತು ತ್ರಯಾ (#9) ತಮ್ಮದೇ ಗುರುತನ್ನು ಮೂಡಿಸಿವೆ. ಪಟ್ಟಿಯಲ್ಲಿರುವ ಅರ್ಧ ಕಂಪನಿಗಳು ಹೊಸಬರಾಗಿದ್ದು, Bengaluru ಸ್ಟಾರ್ಟಪ್ ಪರಿಸರದ ತ್ವರಿತ ಬದಲಾವಣೆಯು ಹೊಸ ಆಲೋಚನೆಗಳಿಗೆ ಅವಕಾಶ ನೀಡುತ್ತಿರುವುದನ್ನು ತೋರಿಸುತ್ತದೆ.
ಲಿಂಕ್ಡ್‌ಇನ್ ಇಂಡಿಯಾ ನ್ಯೂಸ್‌ನ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ನಿರಾಜಿತಾ ಬ್ಯಾನರ್ಜಿ ಈ ಕುರಿತಂತೆ ಮಾತನಾಡಿ “ಬೆಂಗಳೂರಿನ ಸ್ಟಾರ್ಟಪ್ ಕ್ಷೇತ್ರವು ಭಾರತದ ಸ್ಟಾರ್ಟಪ್ ಪರಿಸರಕ್ಕೆ ಬಲ ತುಂಬುತ್ತಿದೆ. ಫಿನ್‌ಟೆಕ್, ಎಂಟರ್‌ಪ್ರೈಸ್ ಟೆಕ್ ಮತ್ತು ಡಿಜಿಟಲ್ ಗ್ರಾಹಕ ಬ್ರ್ಯಾಂಡ್‌ಗಳ ನವೀನ ಮಿಶ್ರಣವು ಉದ್ಯೋಗಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದರು.
2025ರ ಲಿಂಕ್ಡ್‌ಇನ್ ಬೆಂಗಳೂರು ಟಾಪ್ ಸ್ಟಾರ್ಟಪ್‌ಗಳ ಪಟ್ಟಿ:
1️⃣ ಝೆಪ್ಟೋ
2️⃣ ಸ್ಪ್ರಿಂಟೋ
3️⃣ ಸ್ವಿಶ್
4️⃣ ಕ್ರೆಡ್
5️⃣ ಲ್ಯೂಸಿಡಿಟಿ
6️⃣ ಪಾಕೆಟ್ ಎಫ್‌ಎಂ
7️⃣ ಜ್ಯುಪಿಟರ್
8️⃣ ಗಿವಾ
9️⃣ ತ್ರಯಾ
🔟 ಬೈಟ್‌ಸ್ಪೀಡ್
ಲಿಂಕ್ಡ್‌ಇನ್ ವೃತ್ತಿ ತಜ್ಞ ನಿರಾಜಿತಾ ಬ್ಯಾನರ್ಜಿ ಅವರು, ಉದ್ಯೋಗಾಕಾಂಕ್ಷಿಗಳು “ಸಂಸ್ಥೆಗಳ ನೇಮಕಾತಿಯ ಬದಲು ಬೆಳವಣಿಗೆ ತೋರಿಸುತ್ತಿರುವ ಸ್ಟಾರ್ಟಪ್‌ಗಳನ್ನು ಗಮನಿಸುವುದು, ಸಂಸ್ಥಾಪಕರ ದೃಷ್ಟಿಕೋಣ ಅಧ್ಯಯನ ಮಾಡುವುದು ಮತ್ತು ನಾವೀನ್ಯತೆಗೂ ಕಾರ್ಯಗತಗೊಳಿಸುವಿಕೆಗೆ ಆದ್ಯತೆ ನೀಡುವುದು” ಎಂದು ಸಲಹೆ ನೀಡಿದ್ದಾರೆ.

























