ಬೆಂಗಳೂರಿನಲ್ಲಿ ಬೆಂಜ್ ಅತ್ಯಾಧುನಿಕ ಶೋರೂಮ್ ಉದ್ಘಾಟನೆ

0
1

ಬೆಂಗಳೂರು: ಭಾರತದಲ್ಲಿ ಮರ್ಸಿಡಿಸ್ ಬೆಂಜ್ ನ ‘ಮೇಬ್ಯಾಕ್ ಲಾಂಜ್’ ಮತ್ತು ‘ಮೇಬ್ಯಾಕ್ ಐಕಾನ್ಸ್ ಆಫ್ ಲಕ್ಸುರಿ’ ಎರಡೂ ಮಳಿಗೆ ಹೊಂದಿರುವ ಮೊದಲನೇ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ.

ಭಾರತದ ಅತ್ಯಂತ ಪ್ರತಿಷ್ಠಿತ ಐಷಾರಾಮಿ ಕಾರು ತಯಾರಿಕಾ ಸಂಸ್ಥೆಯಾದ ಮರ್ಸಿಡಿಸ್- ಬೆಂಜ್ ಇಂಡಿಯಾ, ಇಂದು ಕರ್ನಾಟಕದ ಬೆಂಗಳೂರಿನಲ್ಲಿ ಅತ್ಯಾಧುನಿಕವಾದ ಹೊಸ ಐಷಾರಾಮಿ ಮಾರಾಟ ಮತ್ತು ಸೇವಾ ಘಟಕ ‘ವಿವಾ ಸ್ಟಾರ್’ ಅನ್ನು ಉದ್ಘಾಟಿಸಿದೆ.

ಈ ಹೊಸ ಡೀಲರ್‌ಶಿಪ್ ಅನ್ನು ಮರ್ಸಿಡಿಸ್- ಬೆಂಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಸಂತೋಷ್ ಅಯ್ಯರ್ ಹಾಗೂ ಮರ್ಸಿಡಿಸ್- ಬೆಂಜ್ ವಿವಾ ಸ್ಟಾರ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ದೇಶಪಾಂಡೆ ಅವರು ಉದ್ಘಾಟಿಸಿದರು.

ಈ ಹೊಸ ಡೀಲರ್‌ಶಿಪ್ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಮರ್ಸಿಡಿಸ್- ಬೆಂಜ್ ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿದೆ. ವಿವಾ ಸ್ಟಾರ್ ಮೂಲಕ ಕಾರ್ಯನಿರ್ವಹಿಸುವ ಈ ಹೊಸ ಐಷಾರಾಮಿ ಶೋರೂಮ್ ಸಂಸ್ಥೆಯ ‘ಗೋ ಟು ಕಸ್ಟಮರ್’ ಕಾರ್ಯತಂತ್ರಕ್ಕೆ ಅನುಗುಣವಾಗಿ ರೂಪುಗೊಂಡಿದ್ದು, ಘನತೆವೆತ್ತ ಗ್ರಾಹಕರಿಗೆ ಮರ್ಸಿಡಿಸ್- ಬೆಂಜ್ ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ.

ಇದನ್ನೂ ಓದಿ: ಜೈಲು ಹಕ್ಕಿಗಳ ಮಧ್ಯೆ ಅರಳಿದ ಪ್ರೀತಿ; ಪೆರೋಲ್‌ನಲ್ಲಿ ಮದುವೆಗೆ ಸಿದ್ಧತೆ

ಕರ್ನಾಟಕದ ಮೊತ್ತ ಮೊದಲ ಎಕ್ಸ್‌ಕ್ಲೂಸಿವ್ ಮೇಬ್ಯಾಕ್ ಲಾಂಜ್: ಬೆಂಗಳೂರಿನ ವಿವಾ ಸ್ಟಾರ್ ಕರ್ನಾಟಕದ ಮೊತ್ತ ಮೊದಲ ಎಕ್ಸ್‌ಕ್ಲೂಸಿವ್ ‘ಮರ್ಸಿಡಿಸ್- ಮೇಬ್ಯಾಕ್ ಲಾಂಜ್’ ಅನ್ನು ಹೊಂದಿದ್ದು, ಇದು ಉನ್ನತ ದರ್ಜೆಯ ಗ್ರಾಹಕರಿಗೆ ಮತ್ತು ಐಷಾರಾಮಿ ಕಾರು ಪ್ರಿಯರಿಗೆ ವಿಶಿಷ್ಟವಾದ ಮೇಬ್ಯಾಕ್ ಬ್ರ್ಯಾಂಡ್ ಅನುಭವವನ್ನು ಒದಗಿಸುತ್ತದೆ. ಈ ‘ಮೇಬ್ಯಾಕ್ ಲಾಂಜ್’ ಕರ್ನಾಟಕದಲ್ಲಿ ಮೊದಲ ಬಾರಿಗೆ ‘ಮೇಬ್ಯಾಕ್ ಶಾಪ್-ಇನ್- ಶಾಪ್’ ಪರಿಕಲ್ಪನೆಯನ್ನು ಪರಿಚಯಿಸುತ್ತಿದ್ದು, ನವೀನವಾದ ‘ಮೇಬ್ಯಾಕ್ ರಿಟೇಲ್ ಕಿಟ್’ ಮೂಲಕ ವಿಶಿಷ್ಟವಾದ ರೀಟೇಲ್ ಅಂಶಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಮೇಬ್ಯಾಕ್ ರಿಟೇಲ್ ಕಿಟ್ ಗ್ರಾಹಕರಿಗೆ ಕಾರನ್ನು ತಮ್ಮಿಚ್ಛೆಯಂತೆ ವಿನ್ಯಾಸಗೊಳಿಸಲು ವಿಶೇಷವಾದ ‘ಮ್ಯಾನುಫ್ಯಾಕ್ಟರ್’ ಸರಣಿಯ ಕಸ್ಟಮೈಸೇಷನ್ ಆಯ್ಕೆಯನ್ನು ಒದಗಿಸುತ್ತದೆ. ಈ ಮೇಬ್ಯಾಕ್ ರಿಟೇಲ್ ಕಿಟ್‌ಗಳನ್ನು ಜರ್ಮನಿಯಲ್ಲಿ ವಿನ್ಯಾಸಗೊಳಿಸಿ, ಕೈಯಿಂದಲೇ ಸಿದ್ಧಪಡಿಸಿ ತಯಾರಿಸಲಾಗಿದೆ. ಐಷಾರಾಮಿ ಮಾದರಿಗಳ ಪ್ರದರ್ಶನದ ಜೊತೆಗೆ ಗ್ರಾಹಕರಿಗೆ ಉನ್ನತ ಮಟ್ಟದ ಸಮಾಲೋಚನಾ ಅನುಭವವನ್ನು ನೀಡಲಿವೆ. ಮೇಬ್ಯಾಕ್ ರಿಟೇಲ್ ಕಿಟ್ ಗ್ರಾಹಕರಿಗೆ ಅತ್ಯಂತ ಐಷಾರಾಮಿ ‘ವೈಟ್ ಗ್ಲೌ’ ಪ್ರೆಸೆಂಟೇಷನ್ ಮೂಲಕ ಕಾರಿನ ವಿನ್ಯಾಸದ ಮಾದರಿಗಳನ್ನು ಪರಿಚಯಿಸುತ್ತದೆ, ಇದರಿಂದ ಗ್ರಾಹಕರು ಅತ್ಯುನ್ನತ ಮಟ್ಟದ ಮಾರಾಟ ಸೇವಾ ಅನುಭವವನ್ನು ಪಡೆಯಲಿದ್ದಾರೆ.

ಹೊಸದಾಗಿ ಉದ್ಘಾಟನೆಗೊಂಡ ಬೆಂಗಳೂರಿನ ‘ವಿವಾ ಸ್ಟಾರ್’ ಘಟಕವು ಐಷಾರಾಮಿ ರೀಟೇಲ್ ಶೋರೂಮ್ ಮತ್ತು ಆಧುನಿಕ ಸೇವಾ ಕೇಂದ್ರವನ್ನು ಒಂದೇ ಸೂರಿನಡಿ ತಂದಿದೆ. ಇದು ಗ್ರಾಹಕರಿಗೆ ವಾಹನ ಖರೀದಿ ಮತ್ತು ಮಾಲೀಕತ್ವದ ಪಯಣದಲ್ಲಿ ಯಾವುದೇ ತೊದರೆಯಾಗದಂತಹ ವಿಶಿಷ್ಟ ಅನುಭವವನ್ನು ನೀಡುತ್ತದೆ. ಈ ಕೇಂದ್ರವು ವಿಶೇಷವಾಗಿ ವಿನ್ಯಾಸಗೊಳಿಸಲಾದ ಗ್ರಾಹಕ ಸಮಾಲೋಚನಾ ಸ್ಥಳಗಳು ಮತ್ತು ವಾಹನ ಹಸ್ತಾಂತರದ ಸುಸಜ್ಜಿತ ವ್ಯವಸ್ಥೆಯನ್ನು ಹೊಂದಿದೆ. ಈ ಮೂಲಕ ಗ್ರಾಹಕರಿಗೆ ಅತ್ಯುನ್ನತ ಅನುಭವ ನೀಡುವ ಗುರಿ ಹೊಂದಿದೆ.

ಇದನ್ನೂ ಓದಿ: RCB ಕುಟುಂಬದ ನಂಟು: ಶ್ರೇಯಾಂಕ ಆಟಕ್ಕೆ ಎಬಿ ಡಿ ಮೆಚ್ಚುಗೆ

ದಕ್ಷಿಣ ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಮತ್ತು ಸುಲಭವಾಗಿ ಗುರುತಿಸಬಹುದಾದ, ಅತಿ ಹೆಚ್ಚು ಬೇಡಿಕೆ ಇರುವ ಪ್ರದೇಶದಲ್ಲಿ ನೆಲೆಸಿರುವ ವಿವಾ ಸ್ಟಾರ್, ಪ್ರಮುಖ ವಸತಿ ಪ್ರದೇಶಗಳಿಗೆ ಹತ್ತಿರದಲ್ಲಿದೆ. ಅಲ್ಲದೆ, ಇದು ಇತರ ಐಷಾರಾಮಿ ಬ್ರ್ಯಾಂಡ್ ಗಳ ಉಪಸ್ಥಿತಿ ಇರುವ ಪ್ರದೇಶದಲ್ಲಿದ್ದು, ಗ್ರಾಹಕರು ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಹೊಂದಲಿದ್ದಾರೆ. ಕೇವಲ 5 ತಿಂಗಳ ದಾಖಲೆ ಅವಧಿಯಲ್ಲಿ ಈ ಘಟಕದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿರುವುದು, ಮರ್ಸಿಡಿಸ್- ಬೆಂಜ್ ಸಂಸ್ಥೆಯು ನೆಟ್ ವರ್ಕ್ ವಿಸ್ತರಣೆ ಮತ್ತು ಗ್ರಾಹಕರ ಅನುಕೂಲತೆಗೆ ನೀಡುವ ಅತ್ಯುತ್ತಮ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ.

ಈ ಐಷಾರಾಮಿ ಮಾರಾಟ ಘಟಕವು ವಿವಿಧ ಅಂತಸ್ತುಗಳಲ್ಲಿ ಸಿದ್ಧಗೊಂಡಿದ್ದು, ಒಟ್ಟು 10,400 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಈ ಶೋರೂಮ್‌ನಲ್ಲಿ ಆರು ಕಾರುಗಳ ಪ್ರದರ್ಶನಕ್ಕೆ ಅವಕಾಶವಿದ್ದು, ವಾಹನ ವಿತರಣೆಗಾಗಿ ಪ್ರತ್ಯೇಕ ವ್ಯವಸ್ಥೆ ಇದೆ. ಈ ಕೇಂದ್ರವು ಒಟ್ಟು 74 ತರಬೇತಿ ಪಡೆದ ವೃತ್ತಿಪರ ಸಿಬ್ಬಂದಿಯನ್ನು (ಮಾರಾಟ ಮತ್ತು ಸೇವೆ ಸೇರಿದಂತೆ) ಹೊಂದಿದ್ದು, 1ಎಸ್ ಮತ್ತು 2ಎಸ್ ಘಟಕವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ಮನೆ ಹಂಚಿಕೆ ಕಾರ್ಯಕ್ರಮ: 2.5 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ

ಶೋರೂಮ್‌ನಲ್ಲಿ ಖಾಸಗಿ ಮತ್ತು ಅರೆ- ಖಾಸಗಿ ಸಮಾಲೋಚನಾ ಸ್ಥಳಗಳು, ಆಕರ್ಷಕ ಲೈಫ್ ಸ್ಟೈಲ್ ಬೊಟಿಕ್ ವಸ್ತುಗಳು ಮತ್ತು ವಿಶೇಷ ವಿತರಣಾ ಸಂದರ್ಭಗಳಿಗೆ ‘ಕೀ ಪ್ರೆಸೆಂಟರ್’ ಸೌಲಭ್ಯವಿರುವ ಹ್ಯಾಂಡೋವರ್ ಬೇ ಸೇರಿದಂತೆ ಹಲವು ಐಷಾರಾಮಿ ವ್ಯವಸ್ಥೆಗಳನ್ನು ಇಲ್ಲಿ ಅಳವಡಿಸಲಾಗಿದೆ.

ವಿವಾ ಸ್ಟಾರ್‌ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಸಾದ್ ದೇಶಪಾಂಡೆ ಅವರು ಈ ಕುರಿತು ಮಾತನಾಡಿ, “ಐಷಾರಾಮಿ, ಪ್ರತಿಷ್ಠೆ ಮತ್ತು ಆಕರ್ಷಣೆಯ ಅಧಿನಾಯಕನಾಗಿರುವ ಜಾಗತಿಕ ಆಟೋಮೋಟಿವ್ ಐಕಾನ್ ಮರ್ಸಿಡಿಸ್- ಬೆಂಜ್ ಸಂಸ್ಥೆ ಜೊತೆಗೆ ಈ ಬಹು ನಿರೀಕ್ಷಿತ ಪಯಣವನ್ನು ಆರಂಭಿಸಲು ವಿವಾ ಸ್ಟಾರ್ ಹೆಮ್ಮೆಪಡುತ್ತದೆ ಎಂದು ಹೇಳಿದರು.

Previous articleಕಾಂಗ್ರೆಸ್ ಪಾದಯಾತ್ರೆ ಜನರಿಗೆ ಹಾಸ್ಯದ ವಿಷಯವಾಗಲಿದೆ