Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಕ್ರೆಡಿಟ್ ಕಾರ್ಡ್‌ ಪಡೆಯೋದು ಇನ್ನು ತುಂಬ ಸುಲಭ

ಕ್ರೆಡಿಟ್ ಕಾರ್ಡ್‌ ಪಡೆಯೋದು ಇನ್ನು ತುಂಬ ಸುಲಭ

0
12

ಬೆಂಗಳೂರು: ಹಲವು ವರ್ಷಗಳಿಂದ ಭಾರತದಲ್ಲಿ ಯಾರು ಕ್ರೆಡಿಟ್ ಕಾರ್ಡ್ ಪಡೆಯಬಹುದು ಯಾರು ಇಲ್ಲ ಎನ್ನುವುದನ್ನು ಕ್ರೆಡಿಟ್ ಇತಿಹಾಸ ಎಂಬ ಒಂದೇ ಅಂಶವು ನಿರ್ಧರಿಸುತ್ತಿದೆ. ಅವರು ತಮ್ಮ ದೈನಂದಿನ ಜೀವನದಲ್ಲಿ ಹಣಕಾಸನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದರೂ ಸಾಲದ ಇತಿಹಾಸವಿಲ್ಲದಿರುವ ಅಥವಾ ಸಾಲದ ದಾಖಲೆಗಳಿಲ್ಲದವರನ್ನು ಇದರಿಂದ ಹೊರಗಿರಿಸಲಾಗಿದೆ.

ಕಳೆದ ಒಂದು ವರ್ಷದಿಂದ ಮುಂಚೂಣಿಯ ಯುಪಿಐ-ನೇತೃತ್ವದ ಫಿನ್ಟೆಕ್ ಆಫ್‌ ಸೂಪರ್ ಮನಿ ಈ ಸಮಸ್ಯೆಯನ್ನು ಪರಿಹರಿಸಿದ್ದು ಅದಕ್ಕೆ ವಿಶ್ವಾಸಾರ್ಹ ಬ್ಯಾಂಕುಗಳೊಂದಿಗೆ (ಕೊಟಕ್ 811 ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್) ಸಹಯೋಗದ ಮೂಲಕ ಔಪಚಾರಿಕ ಸಾಲದ ಲಭ್ಯತೆ ವಿಸ್ತರಿಸುವ ಮೂಲಕ ನೆರವಾಗುತ್ತಿದೆ. ಈ ಕೊಡುಗೆಯು ಸಾಲದ ವ್ಯವಸ್ಥೆಗೆ ಹೊಸದಾಗಿರುವ ವಿದ್ಯಾರ್ಥಿಗಳು, ಹೊಸದಾಗಿ ಉದ್ಯೋಗ ಪಡೆದವರು ಮತ್ತು ಗೃಹಿಣಿಯರಿಗೆ ಅತ್ಯಂತ ಅನುಕೂಲಕರವಾಗಿದೆ.

ಸೂಪರ್ ಮನಿಯು ಯುಪಿಐ ಮಾದರಿಯಲ್ಲಿ ಭಾರತದ ಸುರಕ್ಷಿತ ಕ್ರೆಡಿಟ್ ಕಾರ್ಡ್ ನೀಡುವಲ್ಲಿ ಮುಂಚೂಣಿಯಲ್ಲಿದ್ದು ಮೊದಲ ಸಲದ ಸಾಲದ ಬಳಕೆದಾರರಾದ ಲಕ್ಷಾಂತರ ಮಂದಿಗೆ ಸಾಲದ ಲಭ್ಯತೆ ನೀಡಿದೆ. ಈ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಅನ್ನು ಸರಳವಾದ ಪ್ರತಿನಿತ್ಯದ ಚಟುವಟಿಕೆಗಳಲ್ಲಿ ಮಾತ್ರವಲ್ಲದೆ ಸರಳ ಯುಪಿಐ ಪಾವತಿಗಳ ಮೂಲಕ ದೊಡ್ಡ ಖರೀದಿಗಳಿಗೂ ಬಳಸಬಹುದು.

ಇದು ಹೇಗೆ ಕೆಲಸ ಮಾಡುತ್ತದೆ ಮತ್ತು ಏನು ಪ್ರಯೋಜನಗಳು?

  • ಪ್ಲೇಸ್ಟೋರ್/ಆಪ್ ಸ್ಟೋರ್‌ನಿಂದ ಸೂಪರ್ ಮನಿ ಆಪ್‌ನಲ್ಲಿ ಕೆಲವೇ ಕ್ಷಣಗಳಲ್ಲಿ ಅರ್ಜಿ ಸಲ್ಲಿಸಿ
  • ಈ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಹಿಂದಿನ ಕ್ರೆಡಿಟ್ ಸ್ಕೋರ್ ಮೇಲೆ ಆಧಾರಪಡುವುದಿಲ್ಲ
  • ಈ ಕಾರ್ಡ್‌ಅನ್ನು ಎಫ್.ಡಿ.ಯ ಮೇಲೆ ನೀಡಲಾಗುತ್ತಿದ್ದು ₹ 500ನಷ್ಟು ಕಡಿಮೆ ಠೇವಣಿ ಇದ್ದರೂ ನೀಡಲಾಗುತ್ತದೆ
  • ಇರಿಸಲಾದ ಎಫ್.ಡಿ.ಯು ಬಡ್ಡಿ ಗಳಿಸುವ ಮೂಲಕ ಉಳಿತಾಯದ ಆಯ್ಕೆಯಾಗಿ ಕೆಲಸ ಮಾಡುತ್ತದೆ
  • ಕ್ರಮೇಣ ಗುರುತಿಸಲ್ಪಡುವ ಸಾಲದ ಇತಿಹಾಸ ನಿರ್ಮಿಸುತ್ತದೆ
    ಇದು ಉಳಿತಾಯ ಮತ್ತು ಕ್ರೆಡಿಟ್ ಸ್ಕೋರ್ ಒಟ್ಟಿಗೆ ಮುನ್ನಡೆಯುವ ವ್ಯವಸ್ಥೆ ಸೃಷ್ಟಿಸುತ್ತದೆ

ಈ ಕಾರ್ಡ್ ರುಪೇ ಜಾಲದಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು ಯುಪಿಐ ಪಾವತಿಗಳಿಗೆ ಬೆಂಬಲಿಸುವ ಮೂಲಕ ದಿನಸಿ, ಬಿಲ್ ಪಾವತಿಗಳು ಮತ್ತು ಆನ್‌ಲೈನ್ ಖರೀದಿಗಳಂತಹ ವೆಚ್ಚಗಳಿಗೆ ಸೂಕ್ತವಾಗಿದೆ. ಇದರ ಆದ್ಯತೆ ಪ್ರಾಯೋಗಿಕ, ಪ್ರತಿನಿತ್ಯದ ಹಣಕಾಸು ಭಾಗವಹಿಸುವಿಕೆಯಾಗಿದೆ.

ಲಕ್ಷಾಂತರ ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್‌ಗಳನ್ನು ಈಗಾಗಲೇ ಭಾರತದಾದ್ಯಂತ ಪಾಲುದಾರ ಬ್ಯಾಂಕ್‌ಗಳ ಮೂಲಕ ವಿತರಿಸಲಾಗಿದ್ದು ಇದನ್ನು ಈ ವಿಭಾಗದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉತ್ಪನ್ನಗಳಲ್ಲಿ ಒಂದನ್ನಾಗಿಸಿದೆ. ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಉತ್ತರ ಪ್ರದೇಶಗಳ ಗ್ರಾಹಕರು ಈ ಹೊಸ ತಲೆಮಾರಿನ ಸಾಲದ ಉತ್ಪನ್ನವನ್ನು ಪಡೆದುಕೊಂಡಿದ್ದಾರೆ.

ಔಪಚಾರಿಕ ಸಾಲದ ಇತಿಹಾಸವು ಭವಿಷ್ಯದ ಹಣಕಾಸು ಅವಕಾಶಗಳು ಅಂದರೆ ಶಿಕ್ಷಣ ಸಾಲಗಳು, ಗೃಹಸಾಲ ಮತ್ತು ಉತ್ತಮ ಬಡ್ಡಿದರಗಳಂತಹ ಹಣಕಾಸು ಅವಕಾಶಗಳ ಭವಿಷ್ಯದ ಮೌಲ್ಯಮಾಪನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಡಿಮೆ ರಿಸ್ಕ್ ಹೊಂದಿರುವ ಎಂಟ್ರಿ ಪಾಯಿಂಟ್ ನೀಡುವ ಮೂಲಕ ಈ ಸುರಕ್ಷಿತ ಸಾಲದ ಮಾದರಿಯು ಪ್ರತಿನಿತ್ಯದ ಹಣಕಾಸು ಚಟುವಟಿಕೆ ಮತ್ತು ಔಪಚಾರಿಕ ಸಾಲ ಪಡೆಯುವ ವ್ಯವಸ್ಥೆಗಳ ನಡುವಿನ ಅಂತರ ತುಂಬುತ್ತದೆ.

ಯುಪಿಐ ಎಂದು ಕರೆಯಲ್ಪಡುವ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ ಫೇಸ್ ಮೂಲಕ ದಿಜಿಟಲ್ ಪಾವತಿಗಳು ಅಪಾರವಾಗಿ ಹೆಚ್ಚಿದ್ದು ಕೋಟ್ಯಂತರ ಮಂದಿಯನ್ನು ಡಿಜಿಟಲ್ ಅರ್ಥವ್ಯವಸ್ಥೆಗೆ ತಂದಿವೆ. ಮುಂದಿನ ಹಂತದ ಒಳಗೊಳ್ಳುವಿಕೆಯು ಈಗ ಸಾಲದ ಲಭ್ಯತೆ ಅಗತ್ಯವಾಗಿದ್ದು ಅದರಲ್ಲಿ ಪಾವತಿಗಳ ಆಚೆಗೆ ಹಣಕಾಸು ವಿಶ್ವಾಸಾರ್ಹತೆ ನಿರ್ಮಿಸುವುದಕ್ಕೆ ವಿ‍ಸ್ತರಿಸಿದೆ. ಇದರೊಂದಿಗೆ ಸೂಪರ್ ಮನಿಯು ಹೇಗೆ ಭಾರತದ ಮೊದಲ ಸಲದ ಬಳಕೆದಾರರು ಅವರ ಸಾಲದ ಪ್ರಯಾಣವನ್ನು ಪ್ರಾರಂಭಿಸುತ್ತಾರೆ ಎನ್ನುವುದನ್ನು ರೂಪಿಸುತ್ತಿದೆ.

Previous articleಆಂಧ್ರಪ್ರದೇಶದ ರೌಡಿಶೀಟರ್ ಮುಳಬಾಗಿಲು ಗಡಿಯಲ್ಲಿ ಹತ್ಯೆ
Next articleಮುಡಾ ಹಗರಣ: 40 ಮಂದಿಗೆ ಲೋಕಾಯುಕ್ತ ನೋಟಿಸ್, ತನಿಖೆ ತೀವ್ರ