Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಸಿಜೆ ರಾಯ್‌ ಗ್ಯಾರೇಜ್‌ನಲ್ಲಿವೆ ಐಷಾರಾಮಿ ಕಾರುಗಳು

ಸಿಜೆ ರಾಯ್‌ ಗ್ಯಾರೇಜ್‌ನಲ್ಲಿವೆ ಐಷಾರಾಮಿ ಕಾರುಗಳು

0
4

ಬೆಂಗಳೂರಿನ ಹೃದಯಭಾಗದಲ್ಲಿ ಈಗ ಒಂದು ಗುಂಡಿನ ಶಬ್ದ ಕೇಳಿಸಿದೆ! ಆ ಶಬ್ದದ ಹಿಂದೆ ಇಡೀ ಉದ್ಯಮ ಲೋಕವೇ ಬೆಚ್ಚಿಬೀಳುವಂತಹ ಒಂದು ಕಹಿ ಸತ್ಯ ಅಡಗಿದೆ! ಹೌದು ಕಾನ್ಫಿಡೆಂಟ್ ಗ್ರೂಪ್ ಎಂಬ ಬೃಹತ್ ಸಾಮ್ರಾಜ್ಯದ ಅಧಿಪತಿ, ಸಾವಿರಾರು ಕೋಟಿ ಒಡೆಯ ಸಿಜೆ ರಾಯ್ ಈಗ ಇಲ್ಲ! ಅಚ್ಚರಿಯ ವಿಷಯ ಅಂದ್ರೆ, ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾಗಲೇ ರಾಯ್ ಎದೆಗೆ ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ!

ಯಾರಿದು ಸಿಜೆ ರಾಯ್? ಇವರು ಬರೀ ರಿಯಲ್ ಎಸ್ಟೇಟ್ ಉದ್ಯಮಿಯಲ್ಲ.. ಇವರದ್ದು ಅಕ್ಷರಶಃ ಒಂದು ರೋಚಕ ಕಥೆ! 1997ರಲ್ಲಿ ಕೇರಳದಿಂದ ಬಂದ ಈ ಸಾಮಾನ್ಯ ವ್ಯಕ್ತಿ ಹೆಚ್‌ಪಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

ಬರೀ 30×40 ಸೈಟ್‌ನಲ್ಲಿ ಶುರುವಾದ ಇವರ ರಿಯಲ್ ಎಸ್ಟೇಟ್ ಉದ್ಯಮ, ಇಂದು ಸಾವಿರಾರು ಎಕರೆ ಭೂಮಿಯನ್ನು ಹೊಂದಿರುವ ‘ಕಾನ್ಫಿಡೆಂಟ್ ಗ್ರೂಪ್’ ಆಗಿ ಬೆಳೆದಿತ್ತು. ನೀವು ಪ್ರತಿ ವರ್ಷ ಬಿಗ್ ಬಾಸ್ ಕನ್ನಡ ವಿನ್ನರ್‌ಗಳಿಗೆ ಕೊಡೋ ಆ 50 ಲಕ್ಷ ರೂಪಾಯಿ ಹಣವನ್ನ ನೋಡಿರ್ತೀರಲ್ಲ? ಆ ಹಣ ಕೊಡುತ್ತಿದ್ದದ್ದೇ ಇದೇ ಸಿಜೆ ರಾಯ್!

ಸಿಜೆ ರಾಯ್ ಅವರ ಲೈಫ್ ಸ್ಟೈಲ್ ಹೇಗಿತ್ತು ಗೊತ್ತಾ? ಇವರ ಗ್ಯಾರೇಜ್‌ನಲ್ಲಿ ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ ಮಾತ್ರವಲ್ಲ, ವಿಶ್ವದ ಅತಿ ದುಬಾರಿ ‘ಬಗ್ಗಾಟಿ ವೆರಾನ್’ ಕಾರ್ ಕೂಡ ಇತ್ತು. ಮಲಯಾಳಂ ಮತ್ತು ಕನ್ನಡದಲ್ಲಿ 11 ಸಿನಿಮಾಗಳನ್ನು ನಿರ್ಮಿಸಿದ್ದರು. ಆದರೆ ಇಂತಹ ಕುಬೇರನಿಗೆ ಇವತ್ತು ಕಾಲವೇ ಉಲ್ಟಾ ಹೊಡೆದಿತ್ತು…..

ಇಂದು ಬೆಳಗ್ಗೆ ಲ್ಯಾಂಗ್‌ಫೋರ್ಡ್ ರಸ್ತೆಯ ಬಂಗಲೆಗೆ ಐಟಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದರು. ಮಧ್ಯಾಹ್ನದವರೆಗೆ ಒಂದು ಗಂಟೆ ಕಾಲ ವಿಚಾರಣೆ ನಡೆದಿದೆ. “ಮತ್ತಷ್ಟು ದಾಖಲೆ ತರ್ತೀನಿ” ಅಂತ ರಾಯ್ ರೂಮಿಗೆ ಹೋಗಿದ್ದಾರೆ. ಮರುಕ್ಷಣವೇ ಕೇಳಿಸಿದ್ದು ಗುಂಡಿನ ಸದ್ದು! ಅಧಿಕಾರಿಗಳ ಕಣ್ಣೆದುರಲ್ಲೇ ಪಿಸ್ತೂಲ್‌ನಿಂದ ಎದೆಗೆ ಶೂಟ್ ಮಾಡಿಕೊಂಡಿದ್ದಾರೆ. ಐಟಿ ದಾಳಿ ಅಂದ್ರೆ ಮೊಬೈಲ್ ಕೂಡ ವಶಕ್ಕೆ ಪಡೆಯುವ ಅಧಿಕಾರಿಗಳು, ರಾಯ್ ಅವರ ಬಳಿಯಿದ್ದ ಗನ್ ಯಾಕೆ ವಶಕ್ಕೆ ಪಡೆಯಲಿಲ್ಲ? ಇದು ಆತ್ಮಹತ್ಯೆಯೋ ಅಥವಾ ಇದರ ಹಿಂದೆ ಬೇರೆ ಏನಾದರೂ ಮರ್ಮವಿದೆಯೇ?

Previous articleರಾಜ್ಯವು ಸಮಸ್ಯೆಗಳ ಸರಮಾಲೆಯಿಂದ ತುಂಬಿ ಹೋಗಿದೆ
Next article32 ವರ್ಷಗಳ ಬಳಿಕ ಅಪಘಾತ ಪ್ರಕರಣದ ಆರೋಪಿ ಪೊಲೀಸ್‌ ವಶಕ್ಕೆ