Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಕರ್ನಾಟಕದಲ್ಲಿ ಟೆಕ್ನೊಸ್ಪೋರ್ಟ್‌ನಿಂದ ಬ್ಲೂ ಆರಿಜಿನ್ ಪ್ರೋಗ್ರಾಮ್

ಕರ್ನಾಟಕದಲ್ಲಿ ಟೆಕ್ನೊಸ್ಪೋರ್ಟ್‌ನಿಂದ ಬ್ಲೂ ಆರಿಜಿನ್ ಪ್ರೋಗ್ರಾಮ್

0
3

ಬೆಂಗಳೂರು: ಹೇಗೆ ಟೆಕ್ನೊಸ್ಪೋರ್ಟ್‌ನ ಬ್ಲೂ ಆರಿಜಿನ್ ಪ್ರೋಗ್ರಾಮ್ ಕರ್ನಾಟಕದಲ್ಲಿ ಸಣ್ಣ ಊರಿನ ವ್ಯಾಪಾರಿಗಳಿಗೆ ಸಬಲೀಕರಿಸುತ್ತಿದೆ. ಖರೀದಿದಾರರು ಬ್ರಾಂಡೆಡ್ ಮಳಿಗೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದರಿಂದ ಟೆಕ್ನೊಸ್ಪೋರ್ಟ್‌ನ ಬ್ಲೂ ಆರಿಜಿನ್ ಪ್ರೋಗ್ರಾಮ್ ಕರ್ನಾಟಕದ ರೀಟೇಲರ್‌ಗಳು ಸನ್ನದ್ಧರಾಗಲು ನೆರವಾಗುತ್ತಿದೆ.

ಸಣ್ಣ ಊರುಗಳ ಬಟ್ಟೆ ಅಂಗಡಿಗಳಿಗೆ ಇಂದು ಪ್ರಸ್ತುತವಾಗಿರುವುದು ಎಂದರೆ ಬರೀ ಉತ್ಪನ್ನಗಳನ್ನು ದಾಸ್ತಾನು ಮಾಡುವುದಕ್ಕಿಂತ ಹೆಚ್ಚಿನದಾಗಿದೆ. ಭಾರತೀಯ ಗ್ರಾಹಕರು ಹೆಚ್ಚಾಗಿ ವಿಕಾಸಗೊಳ್ಳುತ್ತಿರುವ ರೀಟೇಲ್ ಅನುಭವಗಳತ್ತ ಆಸಕ್ತಿ ತೋರುತ್ತಿರುವುದರಿಂದ ನೆರೆಹೊರೆಯ ಅಂಗಡಿಗಳು ಇ-ಕಾಮರ್ಸ್ ಮತ್ತು ದೊಡ್ಡ ರಿಟೇಲ್ ಸರಣಿಗಳಿಂದ ಸ್ಪರ್ಧೆ ತೀವ್ರವಾಗುತ್ತಿರುವುದರಿಂದ ಎದ್ದು ಕಾಣುವಂತೆ ವ್ಯಾಪಾರ, ವಿಶ್ವಾಸವನ್ನು ಉತ್ತೇಜಿಸುವುದು ಮತ್ತು ಬದಲಾಗುತ್ತಿರುವ ನಿರೀಕ್ಷೆಗಳಿಗೆ ಅನುಗುಣವಾಗಿ ಬದಲಾಗಬೇಕಾಗಿದೆ. ಈ ಬದಲಾವಣೆಯನ್ನು ಮೊದಲೇ ಗುರುತಿಸಿದ ಟೆಕ್ನೊಸ್ಪೋರ್ಟ್ ತನ್ನ ವ್ಯಾಪಾರದ ಪ್ರಮುಖ ಭಾಗವನ್ನು ರೂಪಿಸಿರುವ ರೀಟೇಲ್ ಮಳಿಗೆ ಮಾಲೀಕರೊಂದಿಗೆ ನಿಲ್ಲಲು ನಿರ್ಧರಿಸಿದೆ. ತನ್ನ ಬ್ಲೂ ಆರಿಜಿನ್ ಪ್ರೋಗ್ರಾಮ್ ಮೂಲಕ ಈ ಬ್ರಾಂಡ್ ಸ್ಥಳೀಯ ರೀಟೇಲರ್‌ಗಳಿಗೆ ಅವರ ಮಳಿಗೆಗಳ ಉನ್ನತೀಕರಣ, ಗ್ರಾಹಕರ ವಿಶ್ವಾಸ ನಿರ್ಮಾಣ ಮತ್ತು ಅವರ ಸಮುದಾಯದ ಸಂಪರ್ಕ ತಪ್ಪಿಸಿಕೊಳ್ಳದೆ ಸುಸ್ಥಿರವಾಗಿ ಬೆಳೆಯುವುದಕ್ಕೆ ನೆರವಾಗುತ್ತಿದೆ.

ಕರ್ನಾಟಕ ಒಳಗೊಂಡು ದಕ್ಷಿಣ ಭಾರತದಲ್ಲಿ ಮೊದಲಿಗೆ ಪರಿಚಯಿಸಲಾದ ಬ್ಲೂ ಆರಿಜಿನ್ ಕಾರ್ಯಕ್ರಮವು ಟೆಕ್ನೊಸ್ಪೋರ್ಟ್‌ನ 7,000+ ರೀಟೇಲರ್‌ಗಳ ಜಾಲಕ್ಕೆ ಬೆಂಬಲಿಸುತ್ತಿದ್ದು ಅವರಲ್ಲಿ ಬಹಳಷ್ಟು ಮಂದಿ ಅರೆ ಪಟ್ಟಣ ಮತ್ತು ಸಣ್ಣ ಊರುಗಳ ಮಾರುಕಟ್ಟೆಗಳಲ್ಲಿ ಕುಟುಂಬದ ನಿರ್ವಹಣೆಯಲ್ಲಿರುವ ಮಳಿಗೆಗಳನ್ನು ನಿರ್ವಹಿಸುತ್ತಿದ್ದಾರೆ. ಅಲ್ಪಾವಧಿ ವ್ಯಾಪಾರ ರಿಯಾಯಿತಿಗಳ ಬದಲಿಗೆ ಈ ಕಾರ್ಯಕ್ರಮವು ದೀರ್ಘಾವಧಿ, ಹಣಕಾಸೇತರ ಬೆಂಬಲಕ್ಕೆ ಆದ್ಯತೆ ನೀಡುತ್ತಿದ್ದು ಮಳಿಗೆ ಹೇಗೆ ಕಾಣುತ್ತದೆ ಮತ್ತು ಭಾವಿಸಲ್ಪಡುತ್ತದೆ ಮತ್ತು ಗ್ರಾಹಕರಿಂದ ಹೇಗೆ ಸ್ವೀಕರಿಸಲ್ಪಡುತ್ತದೆ ಎನ್ನುವುದಕ್ಕೆ ಒತ್ತು ನೀಡುತ್ತದೆ.

ಈ ಉಪಕ್ರಮದ ಪ್ರಮುಖ ಸ್ತಂಭವು ಸ್ಟೋರ್ ಬ್ರಾಂಡಿಫಿಕೇಷನ್. ರೀಟೇಲರ್‌ಗಳು ಬ್ರಾಂಡೆಡ್ ಸೈನ್ ಬೋರ್ಡ್‌ಗಳು, ಇಲ್ಯುಮಿನೇಟೆಡ್ ಬೋರ್ಡ್‌ಗಳು, ಸರ್ಟಿಫಿಕೇಟ್ ಗಳು, ಕ್ಯಾರಿ ಬ್ಯಾಗ್‌ಗಳು ಮತ್ತು ಮಾರ್ಕೆಟಿಂಗ್ ಸಂವಹನವನ್ನು ಸ್ಥಳೀಯ ಭಾಷೆಗಳಲ್ಲಿ ಪಡೆಯುತ್ತಾರೆ. ಈ ಎದ್ದು ಕಾಣುವ ಅಂಶಗಳು ನೆರೆಹೊರೆಯ ಮಳಿಗೆಗಳಿಗೆ ಹೆಚ್ಚು ಸಂಘಟಿತ ಮತ್ತು ಉದ್ದೇಶಪೂರ್ವಕವಾಗಿ ಕಾಣುತ್ತವೆ. ಇದು ಬಹಳ ಮುಖ್ಯ, ಏಕೆಂದರೆ ಗ್ರಾಹಕರು ಖರೀದಿಗೆ ಮುನ್ನ ಹೆಚ್ಚಾಗಿ ಬ್ರಾಂಡ್‌ಗಳ ಸಂಶೋಧನೆ ಮಾಡುತ್ತಾರೆ.

ಬೆಂಗಳೂರು ಬಳಿಯ ನೆಲಮಂಗಲದಲ್ಲಿ ಶ್ರೀ ನಿತ್ಯಾ ಗಾರ್ಮೆಂಟ್ಸ್ ನಿರ್ವಹಿಸುತ್ತಿರುವ ಗೀತಾ ರೇಣುಕಾ ಪ್ರಸಾದ್ ಅವರಿಗೆ ಈ ಬದಲಾವಣೆ ಎದ್ದು ಕಾಣುತ್ತಿದೆ ಮತ್ತು ಹಣಕಾಸಿನ ದೃಷ್ಟಿಯಿಂದಲೂ ಅನುಕೂಲವಾಗಿದೆ. “ಟೆಕ್ನೊಸ್ಪೋರ್ಟ್ ಅನ್ನು ಮೊದಲ ಬಾರಿಗೆ ನಮ್ಮ ಮಳಿಗೆಗೆ ತಂದಾಗ ನಾವು ಪ್ರತಿಕ್ರಿಯೆ ನೋಡಲು ಎರಡು ಅಥವಾ ಮೂರು ಮಾದರಿಗಳನ್ನು ಮಾತ್ರ ತೆಗೆದುಕೊಂಡೆವು. ನಿಧಾನವಾಗಿ ಗ್ರಾಹಕರು ಅವುಗಳನ್ನು ಹೆಚ್ಚು ಕೇಳಲು ಪ್ರಾರಂಭಿಸಿದರು. ಇಂದು ನಾವು 20 ರಿಂದ 25 ಮಾದರಿಗಳನ್ನು ಇರಿಸಿದ್ದೇವೆ” ಎಂದರು.

“ಸೈನ್ ಬೋರ್ಡ್, ಸರ್ಟಿಫಿಕೇಟ್ ಮತ್ತು ಕ್ಯಾರಿ ಬ್ಯಾಗ್‌ಗಳನ್ನು ನಾವು ಪಡೆದ ನಂತರ ಗ್ರಾಹಕರು ಹೆಚ್ಚು ವಿಶ್ವಾಸದ ಭಾವನೆ ವ್ಯಕ್ತಪಡಿಸಿದರು. ಮಾರಾಟ ಹೆಚ್ಚಾಯಿತು ಮತ್ತು ನಮ್ಮ ಆದಾಯವೂ ಹೆಚ್ಚಾಯಿತು. ನಮ್ಮಂತಹ ಕುಟುಂಬದ ವ್ಯಾಪಾರಕ್ಕೆ ಈ ಬಗೆಯ ಪ್ರಗತಿ ನಿಜಕ್ಕೂ ವಿಶೇಷವಾಗಿದೆ” ಎಂದರು.

ಹುಬ್ಬಳ್ಳಿಯಲ್ಲಿ ಕರ್ನಾಟಕ ಎಕ್ಸ್‌ಪೋರ್ಟ್‌ನ ಪ್ರವೀಣ್ ಜೈನ್ ಈ ಬೆಂಬಲವು ಅವರ ವ್ಯಾಪಾರ ಹೆಚ್ಚು ಸುಸೂತ್ರವಾಗಿ ನಡೆಯಲು ನೆರವಾಯಿತು ಎನ್ನುತ್ತಾರೆ, “ಅವರು ಪ್ರತಿಯೊಂದು ಉತ್ಪನ್ನವನ್ನೂ ಸೂಕ್ತ ರೀತಿಯಲ್ಲಿ ವಿವರಿಸುತ್ತಾರೆ ಮತ್ತು ಹೊಸದು ಬಂದಾಗ ನಮಗೆ ಮೊದಲೇ ಹೇಳುತ್ತಾರೆ. ಅವರು ಕೂಡಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ, ಇದರಿಂದ ನಮಗೆ ಅರ್ಥ ಮಾಡಿಕೊಳ್ಳುವುದು ಮತ್ತು ಮಾರಾಟ ಮಾಡುವುದು ಸುಲಭವಾಗಿದೆ” ಎನ್ನುತ್ತಾರೆ. “ಗ್ರಾಹಕರು ಫಿಟ್ಟಿಂಗ್ ಮತ್ತು ಗುಣಮಟ್ಟವನ್ನು ಇಷ್ಟಪಡುತ್ತಾರೆ ಮತ್ತು ಬೆಲೆ ಸರಿಯಾಗಿದ್ದರೆ ಅವರು ಮತ್ತೆ ಬರುತ್ತಾರೆ. ಇದು ನಮ್ಮ ಮಾಸಿಕ ಮಾರಾಟ ಬೆಳೆಯಲು ನೆರವಾಗಿದೆ ಮತ್ತು ನಮಗೆ ಹೆಚ್ಚಿನ ಸ್ಥಿರತೆ ನೀಡಿದೆ” ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮದ ಪರಿಣಾಮವು ವೈಯಕ್ತಿಕ ಮಳಿಗೆಗಳ ಆಚೆಗೂ ಕಾಣುತ್ತಿದೆ. ರೀಟೇಲರ್‌ಗಳ ಭಾಗವಹಿಸುವಿಕೆ ಶೇಕಡಾ 50 ಹೆಚ್ಚಿದೆ, ಅರ್ಹ ರೀಟೇಲರ್‌ಗಳಿಂದ ಮಾರಾಟವು ಸುಮಾರು ಶೇಕಡಾ 80ರಷ್ಟು ಹೆಚ್ಚಿದೆ ಮತ್ತು ಭಾರತದಾದ್ಯಂತ ಈಗ 1,500ಕ್ಕೂ ಹೆಚ್ಚು ಮಳಿಗೆಗಳು ಟೆಕ್ನೊಸ್ಪೋರ್ಟ್ ಬ್ರಾಂಡಿಂಗ್ ‍ಪ್ರದರ್ಶಿಸುತ್ತವೆ.

ನೆರೆಹೊರೆಯ ಮಳಿಗೆಗಳಿಗೆ ಹೆಚ್ಚು ಬ್ರಾಂಡೆಡ್, ವಿಶ್ವಾಸಾರ್ಹ ಮತ್ತು ಭವಿಷ್ಯ ಸನ್ನದ್ಧವಾಗಿ ಕಾಣುವಂತೆ ನೆರವಾಗುವ ಮೂಲಕ ಬ್ಲೂ ಆರಿಜಿನ್ ಕಾರ್ಯಕ್ರಮವು ಸಣ್ಣ ಊರುಗಳ ರೀಟೇಲರ್‌ಗಳಿಗೆ ಅವರ ಆದಾಯ ವೃದ್ಧಿಸಿಕೊಳ್ಳಲು ಮತ್ತು ತೀವ್ರವಾಗಿ ಬದಲಾಗುತ್ತಿರುವ ರೀಟೇಲ್ ಕ್ಷೇತ್ರದಲ್ಲಿ ವಿಶ್ವಾಸದಿಂದ ಸ್ಪರ್ಧಿಸಲು ನೆರವಾಗುತ್ತಿದೆ.

Previous articleಸ್ಥಳ ಮಹಜರಿಗೆ ರಾಜೀವ್‌ಗೌಡ ಮಂಗಳೂರಿಗೆ
Next articleಚಿತ್ರೋದ್ಯಮದ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧ: ಸಿಎಂ ಸಿದ್ದರಾಮಯ್ಯ