ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಗಲಭೆ ಹಾಗೂ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿರುವುದನ್ನು ಸ್ವಾಗತಿಸುತ್ತೇನೆ. ಈ ನಿರ್ಧಾರವನ್ನು ಬಿಜೆಪಿ ನಾಯಕರೆಲ್ಲರೂ ಒಟ್ಟಾಗಿ ಸ್ವಾಗತಿಸುತ್ತೇವೆ. ಆದರೆ ತನಿಖೆ ಪಾರದರ್ಶಕವಾಗಿರಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ. ಶ್ರೀರಾಮುಲು ಆಗ್ರಹಿಸಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿನಿಂದಲೂ ನನ್ನ ಬಳಿ ಸಾಕಷ್ಟು ದಾಖಲೆಗಳಿವೆ ಎಂದು ಹೇಳುತ್ತಲೇ ಬಂದಿದ್ದೇನೆ. ಅದಕ್ಕೆ ಪೂರಕವಾಗಿ ಹಲವು ವಿಡಿಯೋ ದಾಖಲೆಗಳು ನಮ್ಮ ಬಳಿ ಇವೆ. ಗಲಾಟೆ ಆರಂಭವಾದ ಕ್ಷಣದಿಂದ ಹತ್ಯೆ ನಡೆಯುವವರೆಗಿನ ಎಲ್ಲಾ ಘಟನೆಗಳು ನಮ್ಮ ಕಣ್ಮುಂದೆಯೇ ನಡೆದಿವೆ” ಎಂದು ಹೇಳಿದರು.
ಇದನ್ನೂ ಓದಿ: ಖ್ಯಾತ ಲೇಖಕಿ ಆಶಾ ರಘು ನಿಧನ
ಬ್ಯಾನರ್ ಪ್ರಚೋದನೆಯೇ ಗಲಭೆಗೆ ಕಾರಣ: ಗಲಭೆಗೆ ಕಾರಣವಾದ ಬ್ಯಾನರ್‌ಗಳ ಕುರಿತು ಮಾತನಾಡಿದ ಶ್ರೀರಾಮುಲು, “ಅಲ್ಲಿ ಬ್ಯಾನರ್ ಹಾಕಿದ್ದೇ ಪ್ರಚೋದನೆಗಾಗಿ ಎಂಬುದು ಸ್ಪಷ್ಟವಾಗಿದೆ. ಗಲಭೆಗೆ ಕಾರಣರಾದವರು ಯಾರು ಎಂಬುದನ್ನು ಯಾವುದೇ ತನಿಖೆ ಸಂಸ್ಥೆ ಸುಲಭವಾಗಿ ಪತ್ತೆಹಚ್ಚಬಹುದು. ತನಿಖಾ ಸಂಸ್ಥೆ ಕೇಳಿದರೆ, ನಮ್ಮ ಬಳಿ ಇರುವ ಎಲ್ಲಾ ದಾಖಲೆಗಳು ಹಾಗೂ ವಿಡಿಯೋಗಳನ್ನು ನೀಡಲು ನಾವು ಸಿದ್ಧರಾಗಿದ್ದೇವೆ” ಎಂದರು.
ಭರತ್ ರೆಡ್ಡಿ ವಿರುದ್ಧ ಗಂಭೀರ ಆರೋಪ: ಗಲಭೆಗೆ ನೇರವಾಗಿ ಕಾರಣರಾದವರು ಭರತ್ ರೆಡ್ಡಿ ಎಂದು ಆರೋಪಿಸಿದ ಅವರು, “ಅವರನ್ನು ರಕ್ಷಣೆ ಮಾಡಬಾರದು. ಈವರೆಗೂ ಶಾಸಕರನ್ನು ಯಾಕೆ ಬಂಧಿಸಿಲ್ಲ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಇದೆ. ಸರ್ಕಾರ ಶಾಸಕರನ್ನು ರಕ್ಷಣೆ ಮಾಡಲು ಹೊರಟಿರುವಂತೆ ಕಾಣುತ್ತಿದೆ” ಎಂದು ಕಿಡಿಕಾರಿದರು.
ಇದನ್ನೂ ಓದಿ: ಭಾಷೆ ಕಡೆಗಣನೆಗೆ ವಿಶ್ವವಿದ್ಯಾನಿಲಯಗಳು ಹಾಗೂ ಅಧ್ಯಾಪಕರು ಕಾರಣ
ಜನರ ಮುಂದೆ ಸತ್ಯ ಬಹಿರಂಗ: “ಜನರು ಎಲ್ಲಾ ವಿಡಿಯೋಗಳನ್ನು ವೀಕ್ಷಣೆ ಮಾಡಿದ್ದಾರೆ. ಸತ್ಯಾಸತ್ಯತೆ ಎಲ್ಲರಿಗೂ ಗೊತ್ತಾಗಿದೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಪ್ರಕರಣವನ್ನು ಸಿಐಡಿಗೆ ವಹಿಸಿರುವುದರಿಂದ ತನಿಖೆ ನಡೆಯಲಿ, ಸತ್ಯ ಹೊರಗೆ ಬರಲಿ” ಎಂದು ಶ್ರೀರಾಮುಲು ಹೇಳಿದರು.
ಸಿಐಡಿ ಅಥವಾ ಸಿಬಿಐ ತನಿಖೆಗೆ ಒತ್ತಡ: ಈ ಮೊದಲು ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಒತ್ತಡ ಹಾಕಿದ್ದೇವೆ. ಆದರೆ ಸರ್ಕಾರ ತನ್ನ ನಿರ್ಧಾರದಂತೆ ಪ್ರಕರಣವನ್ನು ಸಿಐಡಿಗೆ ನೀಡಿದೆ. ಆದರೂ ಸಿಐಡಿ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ಹುಬ್ಬಳ್ಳಿಗೆ CID ತಂಡ: ವಿವಸ್ತ್ರ–ಹಲ್ಲೆ ಪ್ರಕರಣದ ತನಿಖೆ ಚುರುಕು
ಶಾಸಕರ ಬಂಧನವಾಗುವವರೆಗೂ ಹೋರಾಟ: “ಶಾಸಕರನ್ನು ರಕ್ಷಿಸಲಾಗುತ್ತಿದೆ. ಶಾಸಕರ ಬಂಧನವಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು. ಪ್ರಕರಣವನ್ನು ಸಿಐಡಿಗೆ ನೀಡಿದ ಬಳಿಕವೂ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದರು.
ಜನವರಿ 17ರಂದು ಹೋರಾಟದ ರೂಪುರೇಷೆ: ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಹೋರಾಟದ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಲು ಜನವರಿ 17ರಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬೆಂಗಳೂರಿಗೆ ತೆರಳಿದ್ದಾರೆ. ಅಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹಾಗೂ ಮಾಜಿ ಸಚಿವ ಆರ್. ಅಶೋಕ್ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ‘Jana Nayagan’ ಬಿಡುಗಡೆಗೆ ಕಾನೂನು ಅಡೆತಡೆ: ಅನಿಶ್ಚತೆಯಲ್ಲಿ ದಳಪತಿ ವಿಜಯ್ ಕೊನೆಯ ಸಿನಿಮಾ
ಜಾಮೀನಿನ ವಿಚಾರ: ಗಲಭೆಯಲ್ಲಿ ಪಾಲ್ಗೊಂಡ ಕೆಲವರಿಗೆ ಜಾಮೀನು ಸಿಕ್ಕಿರುವ ಕುರಿತು ಮಾತನಾಡಿದ ಶ್ರೀರಾಮುಲು, “ಗಲಾಟೆಯಲ್ಲಿ ಎರಡು ಕಡೆಯವರನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಅವರಿಗೆ ಜಾಮೀನು ಸಿಕ್ಕಿದೆ. ಮುಂದಿನ ದಿನಗಳಲ್ಲಿ ಚಾರ್ಜ್‌ಶೀಟ್‌ನಲ್ಲಿ ಇನ್ನಷ್ಟು ಜನರ ಹೆಸರು ಸೇರಿಸಲಾಗುವ ಸಾಧ್ಯತೆ ಇದೆ. ಆದರೆ ವಾರ್ಡ್‌ನಲ್ಲಿ ಇದ್ದವರು, ಮನೆಯಲ್ಲಿದ್ದ ಬಿಜೆಪಿಯವರ ಹೆಸರುಗಳನ್ನು ಕೂಡ ಸೇರಿಸುವ ಯತ್ನ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.









