Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಯಾರ ಕೈ-ಕಾಲು ಹಿಡಿಯಲ್ಲ, ಜೆಸಿಬಿ ಪಕ್ಷಕ್ಕೆ ಇನ್ನೂ ಸಮಯ ಇದೆ

ಯಾರ ಕೈ-ಕಾಲು ಹಿಡಿಯಲ್ಲ, ಜೆಸಿಬಿ ಪಕ್ಷಕ್ಕೆ ಇನ್ನೂ ಸಮಯ ಇದೆ

0
3

ಚಿಕ್ಕೋಡಿ: ಬಿಜೆಪಿ ಸೇರ್ಪಡೆಗೆ ನಾನು ಯಾರನ್ನೂ ಭೇಟಿಯಾಗಲ್ಲ. ಯಾರ ಕೈಕಾಲು ಹಿಡಿಯಲ್ಲ. ಅವಶ್ಯಕತೆ ಬಿದ್ದಾಗ ಅವರು ಕರೆಯುತ್ತಾರೆ. ಇಲ್ಲವಾದ್ರೇ ಪಕ್ಷ ಕಟ್ಟೋದು ಅಂತಾ ಹೇಳಿದಿನಿ, ಜೆಸಿಬಿ ಪಕ್ಷಕ್ಕೆ ಇನ್ನೂ ಸಮಯ ಇದೆ, ಗಡಿ ಬಿಡಿ ಮಾಡಬೇಡಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಪಾಕಿಸ್ತಾನದೊಳಗಿನ ಒಂದು ಸರ್ಕಾರ ಇದ್ದಂಗಿದೆ. ಬಜೆಟ್‌ನಲ್ಲಿ ಎಲ್ಲಾ ಅವರಿಗೆ ಕೊಟ್ಟಿದ್ದಾರೆ. ಅವರ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುತ್ತಾರಂತೆ, ಪಿಎಸ್‌ಐ ಟ್ರೈನಿಂಗ್, ಸಿಬಿಎಸ್ಸಿ ಶಾಲೆ ಮಾಡೋದು, ಉರ್ದು ಶಾಲೆಗೆ ಪ್ರೋತ್ಸಾಹ ಕೊಡೊದು. ಇದು ಒಬ್ಬ ರಾಜ್ಯದ ಮುಖ್ಯಮಂತ್ರಿ ಮಾಡುವ ಬಜೆಟ್? ಎಂದು ಪ್ರಶ್ನೆ ಮಾಡಿದರು.

ವಿಜಯೇಂದ್ರ ಎಂಬ ಧೀಮಂತ ನಾಯಕ, ಅವರ ತಂದೆ ರೈತ ಪರ ಹೋರಾಟಗಾರರು, ಜೈಲಿಗೆ ಹೋಗಿ ಬಂದಿದ್ದಾರೆ. ಈ ಸರ್ಕಾರ ಹೋದ ಮೇಲೆ ಬಿಜೆಪಿ ಬಂದು ಅವರ ಮಗ ಬರಬಾರದು, ಆ ಚಿಂತೆ ನಮಗೆ ಕಾಡುತ್ತಿದೆ. ಬಿಜೆಪಿ ಹೈಕಮಾಂಡ್ ಏನೂ ಮಾಡುತ್ತದೋ ನೋಡೋಣ. ಚಿತ್ರದುರ್ಗದಲ್ಲಿ ಐವತ್ತು ವರ್ಷದ ಕಾರ್ಯಕ್ರಮ ಮಾಡ್ತಾರಂತೆ. ಇದು ಒಂದು ಬ್ಲ್ಯಾಕ್‌ಮೇಲ್ ಮಾಡುವ ತಂತ್ರ. ಲಿಂಗಾಯತರು ಯಾರೂ ಅವರ ಹಿಂದೆ ಇಲ್ಲ. ಸುಮ್ನೆ ಈ ರೀತಿ ಮಾಡ್ತಿದ್ದಾರೆ ಎಂದರು.

ಉತ್ತರ ಕರ್ನಾಟಕಕ್ಕೆ ಎರಡೂ ಪಕ್ಷದಿಂದ ಹಾನಿಯಾಗಿದೆ. ಮುಸ್ಲಿಂ ಸಮುದಾಯದ ಮತ ನಮಗೆ ಬೇಡ ಎಂದು ಹೇಳಿದಿನಿ. ದಾವಣಗೆರೆಯಲ್ಲಿ ಬಿಜೆಪಿಗೆ ಮುಸ್ಲಿಂರು ವೋಟ್ ಹಾಕ್ತಾರೆ ಅಂದ್ರು. ಸಿದ್ದರಾಮಯ್ಯ ಅವರ ಬಳಿ ಹೋಗಿ ಪ್ಯಾಕಿಂಗ್ ಆಗಿ ಬಂದ್ರು. ಐಪಿಎಲ್ ಟಿಕೆಟ್ ಸಲುವಾಗಿ ಎಂಎಲ್‌ಗಳಿಗೆ ಐದು ಪಾಸ್ ಕೊಡಬೇಕಂತೆ ಎರಡು ಲಕ್ಷ ವೇತನ ಕೊಡ್ತಾರೆ ನಮಗೆ. ಐದಾರು ಸಾವಿರ ರೂಪಾಯಿ ಟಿಕೆಟ್ ತಗೊಂಡು ತಿಂಡಿ ಇದ್ರೇ ಹೋಗಬೇಕು ಎಂದು ಹರಿಹಾಯ್ದರು.