ಬೆಳಗಾವಿ: ಕೋರ್ಟ್ ಆವರಣದಲ್ಲಿ ವಕೀಲರ ಮೇಲೆ ಹಲ್ಲೆ

0
55

ಬೆಳಗಾವಿ ಕೋರ್ಟ್ ಕೇಸಿನ ವಕಾಲತು ಮುಗಿಸಿ ಹೊರ ಬರುತ್ತಿದ್ದ ವಕೀಲರ ಮೇಲೆ ಅಪರಿಚಿತರ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಗಾಂಧಿನಗರದ ಜಹೀರ ಎಂಬುವವರೇ ಹಲ್ಲೆಗೊಳಗಾದ ವಕೀಲರು ಎಂದು ಗೊತ್ತಾಗಿದೆ.

ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್ ಕಲಾಪ ಮುಗಿಸಿ ಹೊರ ಬರುತ್ತಿದ್ದಂತೆಯೇ ಕೋರ್ಟ್ ಆವರಣದಲ್ಲಿಯೇ ಕಲ್ಲು ರಾಡ್‌ನಿಂದ ವಕೀಲರ ಹೊಟ್ಟೆ ಭಾಗಕ್ಕೆ, ಕಿವಿ, ತಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದ ಜಹೀರ್‌ರನ್ನು ಸ್ಥಳದಲ್ಲಿದ್ದವರು ತಕ್ಷಣ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿಯ ಮಾರ್ಕೆಟ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Previous articleVande Bharat: ಬೆಂಗಳೂರಿನ ಈ ವಂದೇ ಭಾರತ್ ರೈಲಿಗೆ 16 ಬೋಗಿ
Next articleಫೋಟೋ ತೆಗೆಸಿಕೊಳ್ಳಲು ಹೋಗಿ ನದಿಪಾಲಾದ ಯುವಕ