ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನದೊಂದಿಗಿನ ಯುದ್ಧದ ವಿರುದ್ಧ ಭಾರತ ಸರ್ಕಾರಕ್ಕೆ ನೀಡಿದ ಸಲಹೆಯಿಂದಾಗಿ ಪಾಕಿಸ್ತಾನದಲ್ಲಿ ಬಹಳ ಜನಪ್ರಿಯ ವ್ಯಕ್ತಿಯಾಗುತ್ತಿರುವಂತೆ ತೋರುತ್ತಿದೆ. ಅವರು ಆ ದೇಶಕ್ಕೆ ಸ್ಥಳಾಂತರಗೊಂಡರೆ ಉತ್ತಮ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, “ಯುದ್ಧ ಮಾಡಬೇಡಿ ಎನ್ನುವ ಪ್ರವೃತ್ತಿ ದೇಶದ್ರೋಹದ ಕೆಲಸವಾಗಿದೆ”. ದೇಶದ ಭದ್ರತೆಗೆ ಅಡ್ಡಿಯಾಗುವ ರೀತಿಯಲ್ಲಿ ಯುದ್ಧ ವಿರೋಧಿಸುವುದು ರಾಷ್ಟ್ರದ ಹಿತಕ್ಕೆ ವಿರುದ್ಧವಾಗಿದೆ. “ಸಿದ್ದರಾಮಯ್ಯ ಅವರು ಕರ್ನಾಟಕದ ಅಲ್ಲದೆ ಪಾಕಿಸ್ತಾನದ ಮುಸ್ಲಿಮರನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಹೇಳಿಕೆಗಳು ದೇಶದ ಭದ್ರತೆಗೆ ಧಕ್ಕೆ ತಂದಂತಾಗಿದೆ,” ಎಂದು ಶೆಟ್ಟರ್ ಹೇಳಿದರು.
ಯುಪಿಎ ಕಾಲದಲ್ಲಿ ನಡೆದ ತಪ್ಪುಗಳು ದೇಶಕ್ಕೆ ಭಾರವಾಗಿದ್ದು, ಇಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದನ್ನು ಸರಿಪಡಿಸುತ್ತಿದೆ. “ಉಗ್ರರ ದಾಳಿ ಭದ್ರತಾ ವೈಫಲ್ಯ ಎಂದೇ ಕೇಂದ್ರ ಸರ್ಕಾರವನ್ನು ಮತ್ತಷ್ಟು ವೀಕ್ ಮಾಡಲು ಖರ್ಗೆ ಮತ್ತು ಕಾಂಗ್ರೆಸ್ ಪಾಳಯ ಪ್ರಯತ್ನಿಸುತ್ತಿದೆ,” ಎಂದು ಅವರು ಗಂಭೀರ ಆರೋಪ ಹೊರಿಸಿದರು.