ಬೆಳಗಾವಿ(ಮೂಡಲಗಿ): ಬೆಳಗಾವಿ ಜಿಲ್ಲೆಯ ಮೂಡಲಗಿ ಸಮೀಪದ ಕಲ್ಲೋಳಿ ಪಟ್ಟಣದ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಲ್ಪಾ ಸೋಮನಟ್ಟಿ(ಗಿರೆಣ್ಣವರ) ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಡೆರಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಕ್ಸಟ್ರನಲ್(ಹೊರಗಿನ) ಪರೀಕ್ಷೆ ಬರೆದಿರುವ ಅವರು ಶೇ. 54 ಅಂಕವನ್ನು ಪಡೆದಿದ್ದಾರೆ. ಇನ್ನೂ ಅವರ ಪುತ್ರಿ ಪಲ್ಲವಿ ಕೂಡ ಈ ಬಾರಿಯ ಪಿಯು ಪರೀಕ್ಷೆಯಲ್ಲಿ ಪಾಸಾಗಿದ್ದು, ತಾಯಿ-ಮಗಳು ಒಟ್ಟಿಗೆ ಪಾಸಾಗಿದ್ದಾರೆ.
ಶಿಲ್ಪಾ ಅವರ ಮಗಳು ಪಲ್ಲವಿ ಗಿರೆನ್ನವರ ನಾಗನೂರಿನ ಅಥರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಶೇ. 78 ಅಂಕ ಪಡೆದು ಉತ್ತೀರ್ಣರಾಗಿದ್ದಾ























