ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ಧ ಎಫ್‌ಐಆರ್

0
4

ಚಿಕ್ಕೋಡಿ: ಬೆಳಗಾವಿ ಕೇಂದ್ರ ಸಹಕಾರಿ ಬ್ಯಾಂಕ್(ಡಿಸಿಸಿ ಬ್ಯಾಂಕ್) ನೌಕರರ ಸಂಘದ ಅಧ್ಯಕ್ಷ ನಿಂಗರಾಜ ಕರೆಣ್ಣವರ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಹಲ್ಲೆಗೊಳಗಾದ ನಿಂಗರಾಜ ಕರೆಣ್ಣವರ ಬೆಳಗಾವಿಯ ಆಸ್ಪತ್ರೆಗೆ ದಾಖಲಾಗಿದ್ದು ಆಸ್ಪತ್ರೆಯಿಂದಲೇ ಅಥಣಿ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಶಾಸಕ ಸವದಿ, ಪುತ್ರ ಚಿದಾನಂದ ಸೇರಿ ಒಟ್ಟು 8 ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅರಸು ದಾಖಲೆ ಮುರಿಯುತ್ತಿರುವ ಸಿದ್ದರಾಮಯ್ಯ ಏಕೆ ಹೀಗಂದ್ರು?

`ನನ್ನನ್ನು ಲಕ್ಷ್ಮಣ್ ಸವದಿ ಅವರು ಮನೆಗೆ ಕರೆಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದರು. ಲಕ್ಷ್ಮಣ ಸವದಿ ಅವರೇ ಕಪಾಳಕ್ಕೆ ಹೊಡೆದರು. ಪುತ್ರ ಚಿದಾನಂದ ಸವದಿ ಬಲವಾಗಿ ಸೊಂಟಕ್ಕೆ ಒದ್ದರು. ಬಳಿಕ ಕುಸಿದು ನೆಲಕ್ಕೆ ಬಿದ್ದ ನನ್ನ ಮೇಲೆ 7ರಿಂದ 8 ಜನರು ಹಲ್ಲೆ ನಡೆಸಿದರು’ ಎಂದು ನಿಂಗರಾಜ ಕರೆಣ್ಣವರ ಆರೋಪಿಸಿದ್ದಾರೆ.
ಅಕ್ರಮ ತಂಡ ಸೇರಿ ಹಲ್ಲೆ, ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ ದಾಖಲಿಸಲಾಗಿದೆ.

ಮತ್ತೊಂಡೆಡೆ ಲಕ್ಷಣ ಸವದಿ ಬೆಂಬಲಿಗ ಶ್ರೀಕಾಂತ್ ಆಲಗೂರ ಅವರು, ನಿಂಗರಾಜ ಕರೆಣ್ಣವರ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಾಸಕ ಸವದಿ ಅವರ ಮನೆ ಮುಂದೆ ನಿಂತಿದ್ದಾಗ ನನ್ನ ಮೇಲೆ ಹಲ್ಲೆ ಮಾಡಿದರು. ಸವದಿ ಅವರಿಗೆ ಯಾಕೆ ಬೈಯುತ್ತೀರಿ ಎಂದು ಪ್ರಶ್ನಿಸಿದ್ದಕ್ಕೆ, ಏಕಾಏಕಿ ಹಲ್ಲೆ ಮಾಡಿದರು. ಜತೆಗೆ, ಅವಾಚ್ಯ ಪದ ಬಳಸಿ ಜೀವ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Previous articleಅರಸು ದಾಖಲೆ ಮುರಿಯುತ್ತಿರುವ ಸಿದ್ದರಾಮಯ್ಯ ಏಕೆ ಹೀಗಂದ್ರು?