Home Advertisement
Home ನಮ್ಮ ಜಿಲ್ಲೆ ಬೆಳಗಾವಿ ನೀರಾವರಿಗೆ ಹೆಚ್ಚು ಅನುದಾನ ನಿರೀಕ್ಷೆ

ನೀರಾವರಿಗೆ ಹೆಚ್ಚು ಅನುದಾನ ನಿರೀಕ್ಷೆ

0
340

ವಿಲಾಸ ಜೋಶಿ
ಬೆಳಗಾವಿ: ಮುಖ್ಯಮಂತ್ರಿಗಳು ಬಜೆಟ್ ಮಂಡನೆಯ ಘಳಿಗೆ ಸಮೀಪಿಸುತ್ತಿದ್ದಂತೆ, ಉತ್ತರ ಕರ್ನಾಟಕದ ಹೃದಯಭೂಮಿ ಬೆಳಗಾವಿಯ ಕಣ್ಣುಗಳು ಮತ್ತೆ ರಾಜಧಾನಿಯತ್ತ ನೆಟ್ಟಿವೆ.

ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರ, ಗಡಿ ಭಾಗದ ಸಂವೇದನಾಶೀಲ ಜಿಲ್ಲೆ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಬೆಳಗಾವಿ ಹೆಸರು ಪ್ರತಿಯೊಂದು ಬಜೆಟ್‌ನಲ್ಲಿ ಕೇಳಿಸಿಕೊಳ್ಳುತ್ತದೆ. ಆದರೆ, ಹೆಸರು ಮಾತ್ರ ಸಾಕಾಗುವುದಿಲ್ಲ. ತಳಮಟ್ಟದ ಫಲಿತಾಂಶ ಬೇಕು ಎಂಬ ಬೇಡಿಕೆ ಹೆಚ್ಚಾಗಿ ಕೇಳಿಬರುತ್ತಿದೆ.

ಕಳೆದ ಕೆಲ ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳು ಘೋಷಣೆಯ ಮಟ್ಟದಲ್ಲೇ ಉಳಿದಿರುವುದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ. ಕೈಗಾರಿಕಾ ವಿಸ್ತರಣೆ ನಿಧಾನಗತಿಯಲ್ಲಿ ಸಾಗುತ್ತಿರುವುದು, ನೀರಾವರಿ ಯೋಜನೆಗಳಿಗೆ ಸಮರ್ಪಕ ಅನುದಾನ ಸಿಗದಿರುವುದು, ನಗರ ಮೂಲಸೌಕರ್ಯ ಸಮಸ್ಯೆಗಳು ಮುಂದುವರಿಯುತ್ತಿರುವುದು ಬಜೆಟ್ ಎದುರು ಮತ್ತೆ ನೆನಪಾಗುತ್ತಿವೆ.

ಇದನ್ನೂ ಓದಿ: ಶಿರಸಿಯ ಈ ಯುವಕ 25ನೇ ವಯಸ್ಸಿನಲ್ಲೇ ನ್ಯಾಯಾಧೀಶ!

ಮೂಲಭೂತ ಸೌಲಭ್ಯಗಳಿಗೆ ಪ್ರತ್ಯೇಕ ನಿಧಿ ಎಲ್ಲಕ್ಕೂ ಪರಿಹಾರ ಕಂಡುಕೊಳ್ಳುವ ಕೆಲಸವು ಈ ಬಾರ ಬಜೆಟ್‌ನಲ್ಲಿ ಆಗಬೇಕಿದೆ ಎಂಬ ಧ್ವನಿ ಕೇಳಿ ಬರುತ್ತಿದೆ. ಹಿಂದೆ ಸಿದ್ಧರಾಮಯ್ಯ ಘೋಷಿಸಿದ್ದ ನಗರ ಮೂಲಸೌಕರ್ಯ ಸುಧಾರಣೆ ಅನುದಾನ ಹಂತ ಹಂತವಾಗಿ ಜಾರಿಯಾಗಿಲ್ಲ. ಹೀಗಾಗಿ ಈ ಬಾರಿ ಬಜೆಟ್‌ನಲ್ಲಿ ಬೆಳಗಾವಿಗೆ ಸ್ಪಷ್ಟ ದಿಕ್ಕು ತೋರಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕಿದೆ.

ಜನರ ನಿರೀಕ್ಷೆ ಏನು?

  • ಮಲಪ್ರಭಾ, ಘಟಪ್ರಭಾ ಯೋಜನೆಗೆ ಹೆಚ್ಚು ಅನುದಾನ
  • ಅಪೂರ್ಣ ಕಾಮಗಾರಿಗಳಿಗೆ ಹಣ ಬಿಡುಗಡೆ
  • ನಗರ ಮೂಲಸೌಕರ್ಯಕ್ಕೆ ವಿಶೇಷ ಪ್ಯಾಕೇಜ್
  • ನೀರು, ರಸ್ತೆ, ಟ್ರಾಫಿಕ್ ಸಮಸ್ಯೆ ಪರಿಹಾರ
  • ಐಟಿ ಪಾರ್ಕ್, ಕೈಗಾರಿಕಾ ಕಾರಿಡಾರ್‌ಗೆ ವೇಗ.ಇದನ್ನೂ ಓದಿ: ಶಿರಸಿಯ ಈ ಯುವಕ 25ನೇ ವಯಸ್ಸಿನಲ್ಲೇ ನ್ಯಾಯಾಧೀಶ!

ಸಿದ್ದು ಘೋಷಿಸಿದ್ದು ಏನಾಯ್ತು?

  • ಐಟಿ ಪಾರ್ಕ್ ಪೂರ್ಣ ಪ್ರಮಾಣದ ಕಾರ್ಯಾರಂಭವಾಗಿಲ್ಲ.
  • ಗಡಿ ಭಾಗ ಅಭಿವೃದ್ಧಿ ಪ್ಯಾಕೇಜ್ ನಿಧಿ ಬಿಡುಗಡೆಗೊಂಡಿಲ್ಲ.
  • ಮಲಪ್ರಭಾ ಯೋಜನೆ ಅನುದಾನ ಘೋಷಣೆ ಜಾರಿ ಇಲ್ಲ.
  • ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಸ್ತರಣೆ ನಿಧಾನಗತಿಯಲ್ಲಿದೆ.
  • ಕೈಗಾರಿಕಾ ಕಾರಿಡಾರ್ ಯೋಜನೆಗೆ ಸ್ಪಷ್ಟ ಪ್ರಗತಿ ಕಾಣಿಸಿಲ್ಲ.