ಮಹಾರಾಷ್ಟ್ರ ಮಳೆ: ಮತ್ತೆ ಮುಳುಗಿದ ದತ್ತ ದೇವಸ್ಥಾನ

0
52

ಯಕ್ಸಂಬಾ: ಮಹಾರಾಷ್ಟ್ರದ ಮಹಾಬಳೇಶ್ವರ ಮತ್ತು ನವಜಾ ಪ್ರದೇಶದಲ್ಲಿ ಮಳೆ ಸುರಿಯತ್ತಿರುವುದರಿಂದ ದೂಧಗಂಗಾ ಮತ್ತು ವೇದಗಂಗಾ ನದಿ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ ಕೃಷ್ಣಾ ನದಿ ಮಾತ್ರ ಒಂದು ಅಡಿ ಏರಿಕೆಯಾಗಿದೆ. ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು. ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿಯ ಕೃಷ್ಣಾ ನದಿಯ ಪ್ರವಾಹದಲ್ಲಿ ದತ್ತ ಮಂದಿರ ಜಲಾವೃತಗೊಂಡಿದೆ.

ಇಂದು ಸುಳಕೂಡ ಬ್ಯಾರೇಜ್ ಮುಖಾಂತರ ೨೩,೫೮೪ ಮತ್ತು ರಾಜಾಪುರ ಬ್ಯಾರೇಜ್ ಮುಖಾಂತರ ೮೪,೯೧೭ ಕ್ಯೂಸೆಕ್ ಹೀಗೆ ಒಟ್ಟು ೧,೦೮,೫೦೧ ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದ್ದು ನಿನ್ನೆಗಿಂತ ೨,೦೯೯ ಕ್ಯೂಸೆಕ್ ನೀರು ಹೆಚ್ಚಿಗೆ ಹರಿದು ಬರುತ್ತಿದೆ.

ವೇದಗಂಗಾ ನದಿಯ ಜತ್ರಾಟ-ಭಿವಸಿ, ಅಕ್ಕೋಳ-ಸಿದ್ನಾಳ, ಭೋಜವಾಡಿ-ಶಿವಾಪುರವಾಡಿ, ಬಾರವಾಡ-ಕುನ್ನುರ, ದೂಧಗಂಗಾ ನದಿಯ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ಕೃಷ್ಣಾ ನದಿಯ ಕಲ್ಲೋಳ-ಯಡೂರ, ಮಾಂಜರಿ-ಸವದತ್ತಿ ಬ್ಯಾರೇಜ್ ಹೀಗೆ ಒಟ್ಟು ೮ ಬ್ಯಾರೇಜ್‌ಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.

ಯಕ್ಸಂಬಾ-ದಾನವಾಡ, ಬೇಡಕಿಹಾಳ-ಬೋರಗಾಂವ, ಸದಲಗಾ-ಬೋರಗಾಂವ, ಮಾಂಜರಿ-ಅಂಕಲಿ ಮತ್ತು ಯಮಗರ್ಣಿ-ಸೌಂದಲಗಾ ಸೇತುವೆಗಳ ಮೂಲಕ ಸಂಚಾರ ಸುಗಮವಾಗಿ ಸಾಗಿದೆ. ಮಹಾದಿಂದ ರಾಜ್ಯಕ್ಕೆ ೧,೦೮,೫೦೧ ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದ್ದು ಇತ್ತ ಆಲಮಟ್ಟಿ ಜಲಾಶಯದಿಂದ ೧,೧೫,೦೦೦ ಕೂಸೆಕ್ ನೀರು ಹೊರಬಿಡಲಾಗುತ್ತಿದೆ.

Previous articleಸುರ್ಜೇವಾಲ ಸುಮ್ನೆ ಬರಲ್ಲ, ಕಾರಣ ಕೊಟ್ರು ವಿಜಯಯೇಂದ್ರ
Next articleಗೋಕಾಕ ಜಾತ್ರೆಯಲ್ಲಿ ಬಿಜೆಪಿ ರೆಬೆಲ್ ತಂಡ